newsfirstkannada.com

ಟೊಮ್ಯಾಟೋ ಆಯ್ತು, ಈಗ ಬಾಳೆ ಹಣ್ಣು ಸರದಿ.. ಮಾರುಕಟ್ಟೆಯಲ್ಲಿ ಬನಾನಾಗೆ ಭಾರೀ ಡಿಮ್ಯಾಂಡ್​ ಕಣ್ರಿ

Share :

12-08-2023

    ಬಾಳೆ ಹಣ್ಣು ಬೆಳೆದ ರೈತರಿಗೆ ಜಾಕ್​ಪಾಟ್

    ಟೊಮ್ಯಾಟೋ ಬಳಿಕ ಬಾಳೆಹಣ್ಣಿಗೂ ಬಂತು ಬೇಡಿಕೆ

    ಮುಂದಿದೆ ಸಾಲು ಸಾಲು ಹಬ್ಬ, ಸದ್ಯ ಕೆ.ಜಿಗೆ ಎಷ್ಟು ಗೊತ್ತಾ?

ಇಷ್ಟು ದಿನಗಳ ಕಾಲ ಟೊಮ್ಯಾಟೋ ಬೆಲೆ ಏರಿಕೆಯಿಂದ ಸದ್ದು ಮಾಡಿತ್ತು, ಈಗ ಟೊಮ್ಯಾಟೋ ಬೆಲೆ ಇಳಿಕೆಯಾಗುತ್ತಿದೆ. ಆದರೆ ಶ್ರಾವಣ ಮಾಸದ ಆರಂಭವಾಗಲಿದ್ದು, ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಈಗ ಟೊಮ್ಯಾಟೋ ಸ್ಥಾನವನ್ನು ಬಾಳೆಹಣ್ಣು ತುಂಬಲಿದೆ.

ಹಬ್ಬ ಬಂತು ಹಬ್ಬ

ಕೋಲಾರದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಟೊಮ್ಯಾಟೋ ಬೆಲೆ ಏರಿಕೆ ಸದ್ದು ಜೋರಾಗಿತ್ತು ಆದರೆ ಟೊಮ್ಯಾಟೋ ಬೆಲೆ ಈಗ ಕಡಿಮೆಯಾಗಿದೆ. ಇನ್ನೇನು ಶ್ರಾವಣ ಮಾಸ ಆರಂಭವಾಗಲಿದ್ದು ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ದಸರಾ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ ಈ ಹಿನ್ನೆಲೆಯಲ್ಲಿ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ.

ಬಾಳೆ ಬೆಳೆದ ರೈತರಿಗೆ ಜಾಕ್​ಪಾಟ್

ಬಾಳೆ ಹಣ್ಣು ಬೆಳೆದ ರೈತರಿಗೆ ಜಾಕ್​ಪಾಟ್​ ಬೆಲೆ ಸಿಗುತ್ತಿದೆ. ಭರ್ಜರಿ ಏಲಕ್ಕಿ ತಳಿಯ ಬಾಳೆಹಣ್ಣು ಬೆಳೆದಿರುವ ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ದೊಡ್ಡಕಾರಿ ಗ್ರಾಮದ ಪ್ರಭಾಕರ್ ಅವರಿಗೆ ಭರ್ಜರಿ ಬೆಲೆ ಸಿಕ್ಕಿದೆ, ಐದು ಲಕ್ಷ ರೂಪಾಯಿ ಬಂಡವಾಳ ಹಾಕಿ ಹದಿನೈದು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ಪ್ರಭಾಕರ್​ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆಹಣ್ಣು ಬೆಳೆದಿದ್ದು ಸದ್ಯ ಉತ್ತಮ ಫಸಲು ಬಂದಿದ್ದು ರೈತರ ತೋಟದಲ್ಲೇ ಒಂದು ಕೆ.ಜಿ. ಬಾಳೆಹಣ್ಣು 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ತೋಟಕ್ಕೆ ಬಂದು ಬಾಳೆಹಣ್ಣು ಖರೀದಿ

ವಿವಿಧ ಕಂಪನಿಗಳು, ವಿವಿಧ ಮಾರುಕಟ್ಟೆಗಳಿಂದ ರೈತರ ತೋಟಕ್ಕೆ ಬಂದು ಬಾಳೆಹಣ್ಣು ಖರೀದಿ ಮಾಡುತ್ತಿದ್ದಾರೆ. ಅಂದರೆ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಅದರಲ್ಲೂ ಪೂಜೆ ಇನ್ನಿತರ ಕಾರ್ಯಗಳಲ್ಲಿ ಹೆಚ್ಚಾಗಿ ಬಳಸಲು ಏಲಕ್ಕಿ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಹಾಗಾಗಿ ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದೆ ಅನ್ನೋದು ಬಾಳೆ ಹಣ್ಣು ಬೆಳೆದ ರೈತ ಪ್ರಭಾಕರ್​ ಅವರ ಮಾತು.

ಟೊಮ್ಯಾಟೊ ಬಳಿಕ ಬಾಳೆ ಹಣ್ಣು

ಇನ್ನು ಬಾಳೆ ಹಣ್ಣಿನ ಬೆಲೆ ಹೆಚ್ಚಾಗೋದಕ್ಕೆ ಕಾರಣ ಏನು ಅನ್ನೋದನ್ನ ನೋಡೋದಾದ್ರೆ, ಇತ್ತೀಚೆಗೆ ಕೋಲಾರ ಜಿಲ್ಲೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೆಚ್ಚಾಗಿ ಟೊಮ್ಯಾಟೋ ಸೇರಿದಂತೆ ಹೆಚ್ಚು ತರಕಾರಿ ಬೆಳೆಗಳನ್ನೇ ರೈತರು ಬೆಳೆದಿದ್ದರು, ಅದರಲ್ಲೂ ಬಹುತೇಕ ಬೆಳೆಗಳು ವೈರಸ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿ ಬೆಳೆ ನಷ್ಟವಾಗಿದೆ,ಈ ಹಿನ್ನೆಲೆ ಟೊಮ್ಯಾಟೋಗೆ ಅತಿ ಹೆಚ್ಚಿನ ಬೆಲೆ ಬಂದಿತ್ತು ಹಾಗಾಗಿ ಮತ್ತೆ ಬಹುತೇಕ ರೈತರು ಟೊಮ್ಯಾಟೋ ಬೆಳೆಯನ್ನೇ ಬೆಳೆಯುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ಬಾಳೆ ವಾರ್ಷಿಕ ಬೆಳೆ ಇದಕ್ಕಾಗಿ ಸರಾಸರಿ ಹನ್ನೊಂದು ತಿಂಗಳಿಂದ ಒಂದು ವರ್ಷ ಕಾಯಬೇಕು ಆದರೆ ಟೊಮ್ಯಾಟೋ ಅಥವಾ ತರಕಾರಿ ಬೆಳೆಗಳು ಮೂರು ತಿಂಗಳಲ್ಲೇ ಫಸಲು ಬರುತ್ತದೆ ಹಾಗಾಗಿ ರೈತರು ದೀರ್ಘಕಾಲಿಕ ಬೆಳೆ ಬೆಳೆಯಲು ಮನಸ್ಸು ಮಾಡುತ್ತಿಲ್ಲ.

ಕೆಜಿ ಬಾಳೆಹಣ್ಣಿಗೆ 100 ರೂಪಾಯಿ

ಕೆಲವೇ ಕೆಲವು ರೈತರು ಮಾತ್ರ ಬಾಳೆ ಬೆಳೆ ಬೆಳೆದಿದ್ದಾರೆ. ಇನ್ನು ಟೊಮ್ಯಾಟೋ ಸೇರಿದಂತೆ ಇತರ ತರಕಾರಿ ಬೆಳೆಗಳಿಗೆ ಹೋಲಿಕೆ ಮಾಡಿದ್ರೆ ಬಾಳೆ ಬೆಳೆಗೆ ರೋಗಬಾದೆ ಕಡಿಮೆ ಮತ್ತು ನಿರ್ವಹಣಾ ವೆಚ್ಚವೂ ಕಡಿಮೆ ಹಾಗಾಗಿ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದರೆ ಉತ್ತಮ ಲಾಭ ಪಡೆಯಬಹುದು ಅನ್ನೋದು ಬಾಳೆ ಬೆಳೆದ ರೈತರ ಮಾತು. ಸದ್ಯ ಈಗಿನ ಪರಿಸ್ಥಿತಿಯನ್ನು ನೋಡಿದ್ರೆ ಟೊಮ್ಯಾಟೋ ರೀತಿ ಬಾಳೆ ಬೆಳೆದ ರೈತರೂ ಕೂಡಾ ಲಕ್ಷಾಧೀಶ್ವರರು ಹಾಗೂ ಕೋಟ್ಯಾದೀಶ್ವರರಾಗಲಿದ್ದಾರೆ ಅನ್ನೋದು ರೈತರ ಅಭಿಪ್ರಾಯ. ಇನ್ನು ಮಾರುಕಟ್ಟೆಯಲ್ಲೂ ಕೂಡಾ ಸದ್ಯ ಕೆಜಿ ಬಾಳೆಹಣ್ಣಿಗೆ 100 ರೂಪಾಯಿ ಇದ್ದು ಹಬ್ಬಗಳ ಸಾಲು ಶುರುವಾದರೆ, ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಒಟ್ಟಾರೆ ಇಷ್ಟು ದಿನಕಾಲ ಬೆಲೆ ಏರಿಕೆಯಿಂದ ಸದ್ದು ಮಾಡಿದ್ದ ಟೊಮ್ಯಾಟೋ ಬೆಲೆ ಕಡಿಮೆಯಾಗಿದ್ದು ಇನ್ನು ಮುಂದೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬಾಳೆ ಹಣ್ಣಿನ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು, ಈಗ ಕೇವಲ ಟೊಮ್ಯಾಟೋ ಬೆಳೆದವರಷ್ಟೇ ಅಲ್ಲಾ ಬಾಳೆಹಣ್ಣು ಬೆಳೆದವರು ಕೂಡಾ ಕೋಟ್ಯಾಧಿಪತಿಗಳಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೊಮ್ಯಾಟೋ ಆಯ್ತು, ಈಗ ಬಾಳೆ ಹಣ್ಣು ಸರದಿ.. ಮಾರುಕಟ್ಟೆಯಲ್ಲಿ ಬನಾನಾಗೆ ಭಾರೀ ಡಿಮ್ಯಾಂಡ್​ ಕಣ್ರಿ

https://newsfirstlive.com/wp-content/uploads/2023/08/banana.jpg

Load More