newsfirstkannada.com

Watch: ಮರಿ ಆನೆಯ ಕಾಲಿಗೆ ಬಲವಾದ ಪೆಟ್ಟು.. ಕುಂಟುತ್ತ ನಡೆಯೋದು ನೋಡಿದ್ರೆ ಅಯ್ಯೋ ಅನಿಸುತ್ತೆ..!

Share :

20-08-2023

  ತಾಯಿ ಆನೆ ಜೊತೆ ಹೋಗುತ್ತಿರುವ ಮರಿಯಾನೆ

  ರಸ್ತೆಯಲ್ಲಿ ತೆರಳ್ತಿದ್ದ ಪ್ರಯಾಣಿಕರ ಕ್ಯಾಮೆರಾದಲ್ಲಿ ಸೆರೆ

  ಮರಿ ಆನೆ ಹುಡುಕಿ ಚಿಕಿತ್ಸೆ ಕೊಡುತ್ತಾ ಅರಣ್ಯ ಇಲಾಖೆ?

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಹಿಂಡೊಂದು ರಸ್ತೆ ದಾಟುತ್ತಿದ್ದು ಈ ವೇಳೆ ಆನೆ ಮರಿಯ ಎಡಗಾಲಿಗೆ ಗಂಭೀರ ಗಾಯವಾಗಿರುವುದು ಗೊತ್ತಾಗಿದೆ.

ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗದಲ್ಲಿ ಆನೆ ಹಿಂಡೊಂದು ರಸ್ತೆ ದಾಟುತ್ತಿರುತ್ತವೆ. ಈ ಹಿಂಡಿನಲ್ಲಿ ತಾಯಿ ಆನೆ ಜೊತೆ ಮರಿ ಆನೆಯೊಂದು ಕಾಣಿಸಿದೆ. ಆದರೆ ಅದರ ಎಡಗಾಲಿಗೆ ಗಂಭೀರವಾದ ಗಾಯವಾಗಿದ್ದು ಕುಂಟುತ್ತ ನಡೆಯಲು ಕಷ್ಟ ಪಡುತ್ತಿದೆ.

ದೃಶ್ಯವನ್ನು ರಸ್ತೆಯಲ್ಲಿ ತೆರಳುತ್ತಿದ್ದ ಪ್ರಯಾಣಿಕರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಗಾಯಗೊಂಡ ಮರಿಯಾನೆ ನಡೆಯಲು ಕಷ್ಟ ಪಡುತ್ತಿದೆ. ಹೀಗಾಗಿ ಅದಕ್ಕೆ ಚಿಕಿತ್ಸೆಯ ಅಗತ್ಯವಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿ ಚಿಕಿತ್ಸೆ ನೀಡಲು ಮುಂದಾಗಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಮರಿ ಆನೆಯ ಕಾಲಿಗೆ ಬಲವಾದ ಪೆಟ್ಟು.. ಕುಂಟುತ್ತ ನಡೆಯೋದು ನೋಡಿದ್ರೆ ಅಯ್ಯೋ ಅನಿಸುತ್ತೆ..!

https://newsfirstlive.com/wp-content/uploads/2023/08/CMR_ELEPHANT_CALF.jpg

Load More