17 ರೂಪಾಯಿಗೆ ಬರೀ ಒಂದು ಟೊಮ್ಯಾಟೋ
ಟೊಮ್ಯಾಟೋ ಬೆಲೆ ಕಂಡು ಸಿಲಿಕಾನ್ ಸಿಟಿ ಗ್ರಾಹಕರು ಶಾಕ್
ಟೊಮ್ಯಾಟೋ ಖರೀದಿಸಿ ಬಿಲ್ ಸಮೇತ ಪೋಸ್ಟ್ ಮಾಡಿದ ವ್ಯಕ್ತಿ
ಟೊಮ್ಯಾಟೋ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಹಾಗಾಗಿ ಸಿಲಿಕಾನ್ ಸಿಟಿ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಇದರ ನಡುವೆ ವ್ಯಕ್ತಿಯೋರ್ವ ಒಂದೇ ಒಂದು ಟೊಮ್ಯಾಟೋವನ್ನು 17 ರೂಪಾಯಿ ಖರೀದಿಸಿದ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಿಂಗಳ ಹಿಂದೆ 17 ರೂಪಾಯಿಗೆ ಎರಡ್ಮೂರು ಕೆ.ಜಿ ಟೊಮ್ಯಾಟೋ ಸಿಗುತ್ತಿತ್ತು. ಈಗ 0.120 ಕಿಲೋಗ್ರಾಂ ತೂಕದ ಒಂದು ಟೊಮ್ಯಾಟೋ 17 ರೂಪಾಯಿಗೆ ಖರೀದಿಸಿರುವ ಪೋಸ್ಟ್ ಕಂಡು ಗ್ರಾಹಕರು ಮತ್ತು ಸಾಮಾಜಿಕ ಜಾಲತಾಣ ಬಳಸುವವರು ಶಾಕ್ ಆಗಿದ್ದಾರೆ.
ವ್ಯಕ್ತಿ ಬಿಲ್ ಹಾಗೂ ಟೊಮ್ಯಾಟೋ ಸಮೇತ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ವ್ಯಕ್ತಿ ಸೂಪರ್ ಮಾರ್ಕೆಟ್ ನಲ್ಲಿ ಒಂದು ಟೊಮ್ಯಾಟೋ ಖರೀದಿ ಮಾಡಿ ಬಿಲ್ ಸಮೇತ ಪೋಸ್ಟ್ ಮಾಡಿದ್ದಾನೆ ಎಂದು ಅಂದಾಜಿಸಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಯಾವಾಗಿನದ್ದು ಎಂದು ತಿಳಿದುಬರಬೇಕಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ 1 ಕೆ.ಜಿ ಟೊಮ್ಯಾಟೋ 100 ರೂಪಾಯಿಗೆ ಸಿಗುತ್ತಿದೆ. ಮುಂದಿನ ತಿಂಗಳು ಮತ್ತಷ್ಟು ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ