ಸುಬ್ರಮಣ್ಯನಗರದ ಪಾರ್ಕ್ ಬಳಿ ಇದ್ದ ಕಟ್ಟಡಕ್ಕೆ ಬೆಂಕಿ
ಬೆಂಕಿಗೆ ಆಹುತಿಯಾದ ನೆಲಮಹಡಿಯಲ್ಲಿದ್ದ ವಸ್ತುಗಳು
ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ
ಬೆಂಗಳೂರು: ಮೂರಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಸುಬ್ರಮಣ್ಯನಗರದ ಪಾರ್ಕ್ ಬಳಿ ನಡೆದಿದೆ. ಈ ಘಟನೆಯಲ್ಲಿ ನೆಲಮಹಡಿಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿವೆ.
ಅಗ್ನಿ ಅವಘಡ ಸಂಭವಿಸಿದ ಕೆಲವೇ ಹೊತ್ತಿನಲ್ಲಿ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಬೆಂಕಿಯ ತೀವ್ರತೆಗೆ ದಟ್ಟ ಹೊಗೆ ಇಡೀ ಕಟ್ಟಡ ತುಂಬಾ ವ್ಯಾಪಿಸಿದ್ದು, ಬೆಂಕಿ ನಂದಿಸಲು ಎರಡು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಕಟ್ಟಡದಲ್ಲಿದ್ದ ಎಲ್ಲಾ ಜನರನ್ನ ತೆರವುಗೊಳಿಸಲಾಗಿದ್ದು, ಸ್ಥಳಕ್ಕೆ ಸುಬ್ರಮಣ್ಯ ನಗರ ಪೊಲೀಸರು ದೌಡಾಯಿಸಿ ಘಟನೆಯನ್ನು ಪರಿಶೀಲಿಸಿದ್ದಾರೆ.
ಬಾಬು ಎಂಬುವವರಿಗೆ ಸೇರಿರುವ ಶಾಮಿಯಾನ ಫೈಬರ್ ಗೋಡೌನ್ ಇದಾಗಿದ್ದು, 25 ಲಕ್ಷ ರೂಪಾಯಿಗೂ ಅಧಿಕ ವಸ್ತಗಳು ಬೆಂಕಿಗೆ ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರು ಸುಬ್ರಮಣ್ಯನಗರದ ಪಾರ್ಕ್ ಬಳಿಯಿರುವ ಮೂರಂತಸ್ತಿನ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ದಟ್ಟ ಹೊಗೆ ಇಡೀ ಕಟ್ಟಡ ವ್ಯಾಪಿಸಿದೆ. ಎರಡು ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. #NewsFirstKannada #Newsfirstlive #KannadaNews #Bangalore #Fire pic.twitter.com/BGd3WwGW8T
— NewsFirst Kannada (@NewsFirstKan) July 9, 2023