newsfirstkannada.com

ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ದಾರುಣ ಘಟನೆ; ವಿದ್ಯುತ್ ವೈರ್ ತುಳಿದು ತಾಯಿ-ಮಗಳು ಸಾವು

Share :

19-11-2023

    ಬೆಳಗಿನ ಜಾವ ರಸ್ತೆ ಬದಿ ತುಂಡಾಗಿ ನೆಲಕ್ಕೆ ಬಿದ್ದಿದ್ದ ಕರೆಂಟ್ ಲೈನ್

    ಕರೆಂಟ್ ವೈರ್ ತುಂಡಾಗಿ ಬಿದ್ದಿದ್ದರೂ ಬೆಸ್ಕಂ ಸಿಬ್ಬಂದಿ ಸರಿ ಮಾಡಿರಲಿಲ್ಲ

    ತಮಿಳುನಾಡಿನಿಂದ ಬರುತ್ತಿದ್ದ ತಾಯಿ, ಮಗಳಿಗೆ ಕಾದು ಕುಳಿತ್ತಿದ್ದ ಯಮ

ಬೆಂಗಳೂರು: ತುಂಡಾಗಿ ನೆಲಕ್ಕೆ ಬಿದ್ದಿದ್ದ ಕರೆಂಟ್ ವೈರ್ ತುಳಿದು ತಾಯಿ ಹಾಗೂ 9 ತಿಂಗಳ ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ವೈಟ್​​ಫೀಲ್ಡ್​​ನ ಕಾಡುಗೋಡಿಯಲ್ಲಿ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಡೆದಿದೆ. ಬೆಸ್ಕಾಂ ನಿರ್ಲಕ್ಷ್ಯತನದಿಂದ ತಾಯಿ, ಮಗಳು ಬಲಿಯಾಗಿದ್ದಾರೆ.

ತಮಿಳುನಾಡು ಮೂಲದ ಸೌಂದರ್ಯ (23), ಮಗಳು ಸುವಿಕ್ಸ ಲಿಯಾ (9 ತಿಂಗಳು) ಮೃತ ದುರ್ದೈವಿಗಳು. ತಾಯಿ ಸೌಂದರ್ಯ ತನ್ನ ಮಗಳನ್ನು ಕರೆದುಕೊಂಡು ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದರು. ನಗರದಲ್ಲಿನ ತಮ್ಮ ನಿವಾಸಕ್ಕೆ ಹೋಗುತ್ತಿದ್ದ ವೇಳೆ ಕಾಡುಗೋಡಿಯಲ್ಲಿನ ರಸ್ತೆಯೊಂದರ ಬದಿ ಕರೆಂಟ್ ವೈರ್ ಕಟ್ ಆಗಿ ನೆಲಕ್ಕೆ ಬಿದ್ದಿತ್ತು.

ಬೆಳಗಿನ ಜಾವ ಆಗಿದ್ದರಿಂದ ನಸುಕಿನಲ್ಲಿ ಗಮನಿಸದೇ ಕರೆಂಟ್​ ವೈರ್​ ತುಳಿದಿದ್ದಾರೆ. ಪರಿಣಾಮ ತಾಯಿ, ಮಗಳು ಇಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ದಾರುಣ ಘಟನೆ; ವಿದ್ಯುತ್ ವೈರ್ ತುಳಿದು ತಾಯಿ-ಮಗಳು ಸಾವು

https://newsfirstlive.com/wp-content/uploads/2023/11/BNG_BESCOM_2_DEAD.jpg

Load More