ಸಿಂಗಲ್ ಮರ್ಡರ್ಗೆಂದು ಬಂದವರು ಡಬಲ್ ಕೊಲೆ ಮಾಡಿದ್ರು
ಫೆಲಿಕ್ಸ್ ತನ್ನ ಪ್ಲಾನ್ ಪೇಲ್ ಆಗದಂತೆ ಸಖತ್ ಆಗಿ ಯೋಚಿಸಿದ್ದನು
ಡ್ರ್ಯಾಗರ್ ಪ್ಯಾಂಟ್ನಲ್ಲಿ ಹಿಡಿಲಿಲ್ಲ, ಆರೋಪಿಗಳು ಏನು ಮಾಡಿದ್ರು?
ಬೆಂಗಳೂರು: ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಡಬಲ್ ಮರ್ಡರ್ಗೆ ಸಂಬಂಧಿಸಿದಂತೆ ಆರೋಪಿ ಫೆಲಿಕ್ಸ್ ಅಂಡ್ ಟೀಂ ಹತ್ಯೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಬಗ್ಗೆ ಸಿಸಿಟಿವಿ ದೃಶ್ಯಗಳು ಸದ್ಯ ಪೊಲೀಸರಿಗೆ ಲಭ್ಯವಾಗಿವೆ.
ವ್ಯವಹಾರದ ಜಿದ್ದಿಗೆ ಬಿದ್ದಿದ್ದ ಆರೋಪಿ ಫೆಲಿಕ್ಸ್ ತನ್ನ ತಂಡದೊಂದಿಗೆ ಏರೋನಿಕ್ಸ್ ಕಂಪನಿಯ MD ಫಣೀಂದ್ರ ಸುಬ್ರಹ್ಮಣ್ಯ, CEO ವಿನುಕುಮಾರ್ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿಗಳು ಹತ್ಯೆಗೆ ಸ್ಕೆಚ್ ಹಾಕಿರುವ ಕುರಿತು ಸಿಸಿಟಿವಿ ದೃಶ್ಯಗಳು ಸಿಕ್ಕಿವೆ.
ಹತ್ಯೆ ಮಾಡಿದ ಬಳಿಕ ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್ನಲ್ಲಿ ಡ್ರ್ಯಾಗರ್ ಇಟ್ಟುಕೊಳ್ಳುತ್ತಿದ್ದನು. ಈ ವೇಳೆ ಅದು ಪ್ಯಾಂಟ್ನಲ್ಲಿ ಹಿಡಿಸದಿದ್ದಾಗ ಸಂತೋಷ್ ಸಹಾಯದಿಂದ ಡ್ರ್ಯಾಗರ್ನ್ನು ಇಟ್ಟುಕೊಂಡನು. ಫೆಲಿಕ್ಸ್ ಮಾತ್ರ ಜುಬ್ಬ ಧರಿಸಿ ತನಗೇನು ಗೊತ್ತಿಲ್ಲ ಎಂಬಂತೆ ಅವರ ಹಿಂದೆ ಹೋಗುತ್ತಿದ್ದನು. ಈ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೈಕ್ನಲ್ಲಿ ಬಂದಿದ್ದ ಹಂತಕರು ಕೊಲೆ ಮಾಡಿ ಎಸ್ಕೇಪ್ ಆಗಿದ್ದೇ ರೋಚಕವಾಗಿದೆ. ಕೊಲೆಯ ನಂತರ ಹೇಗೆ ಎಸ್ಕೇಪ್ ಆಗಬೇಕೆಂದು ಫೆಲಿಕ್ಸ್ 1 ತಿಂಗಳ ಹಿಂದೆನೇ ಆ ಸ್ಥಳಕ್ಕೆ ಬಂದು ರೂಟ್ಗಳ ಬಗ್ಗೆ ಪ್ಲಾನ್ ಮಾಡಿದ್ದನು. ಹತ್ಯೆ ಮಾಡುತ್ತಿದ್ದಂತೆ ಹಿಂಬದಿ ಬಾಗಿಲನ್ನು ತೆಗೆದು ಕಾಂಪೌಂಡ್ ಹಾರಿ ಪರಾರಿಯಾಗಿದ್ದರು. ಬಳಿಕ ಮುಖ್ಯ ರಸ್ತೆಗೆ ಬರುತ್ತಿದ್ದಂತೆ ಓಲಾ ಕಾರು ಬುಕ್ ಮಾಡಿ ಎಸ್ಕೇಪ್ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಡಬಲ್ ಮರ್ಡರ್ಗೆ ಸಂಬಂಧಿಸಿದಂತೆ ಆರೋಪಿ ಫೆಲಿಕ್ಸ್ ಅಂಡ್ ಟೀಂ ಹತ್ಯೆ ಮಾಡಿ ಎಸ್ಕೇಪ್ ಆಗುತ್ತಿರುವ ಸಿಸಿಟಿವಿ ದೃಶ್ಯ. #newsfirstkannada #kannadanews #newsfirstlive #Bangalore #Death pic.twitter.com/dXKSXZDSR4
— NewsFirst Kannada (@NewsFirstKan) July 13, 2023