newsfirstkannada.com

ಪ್ರೀತ್ಸೆ ಪ್ರೀತ್ಸೆ ಅಂತಾ ಆಂಟಿ ಹಿಂದೆ ಬಿದ್ದ.. ಸಿಗಲ್ಲ ಎಂದು ಗೊತ್ತಾಗಿ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

Share :

24-06-2023

    ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಸ್ನೇಹ

    ಸ್ನೇಹವು ಪ್ರೀತಿಯಾಗಿ ಅಕ್ರಮ ಸಂಬಂಧವಾಗಿ ಬದಲಾವಣೆ

    ಆಸ್ಪತ್ರೆಯಿಂದ ತಂದಿದ್ದ ಕತ್ತರಿಯಿಂದಲೇ ಮಹಿಳೆಗೆ ಇರಿದ

ಬೆಂಗಳೂರು: ಮಹಿಳೆಯ ಕತ್ತುಕುಯ್ದು ಬಳಿಕ ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ಪಟ್ಟಣದ ಬಹದ್ದೂರಪುರದಲ್ಲಿ ನಡೆದಿದೆ.

ಬಹದ್ದೂರಪುರದ ನಿವಾಸಿ ಚೈತ್ರಾಳ ಕತ್ತು ಕುಯ್ದ ಆರೋಪಿ ಮಿಥುನ್ ತಾನೂ​ ಕತ್ತು ಕುಯ್ದುಕೊಂಡಿದ್ದು ಇಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹೊಸೂರು ಮೂಲದ ಮಿಥುನ್ ಹಾಗೂ ಚೈತ್ರ ಕಳೆದ 2 ವರ್ಷದಿಂದ ಆನೇಕಲ್ ನಗರದ ಟ್ರೆಂಡ್ಸ್​ ಬಟ್ಟೆ ಮಳಿಗೆಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಆಕೆಗೆ ಮದುವೆಯಾಗಿ 2 ಮಕ್ಕಳಿರುವುದು ಗೊತ್ತಿದ್ದರೂ ಸ್ನೇಹ ಬೆಳಸಿದ್ದನು. ಸ್ನೇಹ ಬಳಿಕ ಅಕ್ರಮ ಸಂಬಂಧವಾಗಿ ಬದಲಾಗಿತ್ತು ಎನ್ನಲಾಗಿದೆ. ಈ ವಿಷ್ಯ ಆಕೆಯ ಮನೆಯವರಿಗೆ ತಿಳಿದು ರಾಜೀ ಪಂಚಾಯತಿ ಕೂಡ ಮಾಡಲಾಗಿತ್ತು. ಈ ಬಗ್ಗೆ ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಇಷ್ಟೆಲ್ಲ ನಡೆದ್ರೂ ಯುವಕನು ಆಕೆಯ ಹಿಂದೆ ಬಿದ್ದು ಎರಡು ದಿನಗಳ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ. . ಹೊಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಆರೋಪಿ ನೇರವಾಗಿ ಆಕೆಯ ಮನೆಗೆ ತೆರಳಿದ್ದ. ಈ ವೇಳೆ ಆಸ್ಪತ್ರೆಯಿಂದ ತಂದಿದ್ದ ಕತ್ತರಿಯಿಂದ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಬಳಿಕ ತಾನೂ ಕೂಡ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಈ ವೇಳೆ ಅಕ್ಕ ಪಕ್ಕದ ಮನೆಯವರು ನೋಡಿ ಇಬ್ಬರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಚೈತ್ರ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತ್ಸೆ ಪ್ರೀತ್ಸೆ ಅಂತಾ ಆಂಟಿ ಹಿಂದೆ ಬಿದ್ದ.. ಸಿಗಲ್ಲ ಎಂದು ಗೊತ್ತಾಗಿ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್ ಪ್ರೇಮಿ

https://newsfirstlive.com/wp-content/uploads/2023/06/LOVE.jpg

Load More