ಒಂದೂವರೆ ವರ್ಷಕ್ಕೆ ವಿಚ್ಛೇದನ ಕೊಡುವಂತೆ ಪೀಡಿಸ್ತಿದ್ದ ಗಂಡ
ತನ್ನ ತಂದೆ, ತಾಯಿಯನ್ನ ದೂರ ಮಾಡಿದ್ದಕ್ಕೆ ಕೋಪಗೊಂಡಿದ್ದನು
ಡ್ರೈವರ್ ಮನೆಯಲ್ಲೂ ಇಂತಹದ್ದೆ ಕಲಹ, ಪತ್ನಿ ಕೊಲೆಗೆ ಒಪ್ಪಿದ
ಬೆಂಗಳೂರು: ಗಂಡ-ಹೆಂಡತಿ ಸಂಬಂಧ ಬಿಡಿಸಲಾಗದ ಅನುಬಂಧ. ಅಂದರೆ ನೂರಾರು ಕಾಲ ಸುಖವಾಗಿ ಒಟ್ಟಿಗೆ ಬಾಳಲೆಂದು ಹಿರಿಯರ ಸಮ್ಮುಖಲದಲ್ಲಿ ಮದುವೆ ಮಾಡುತ್ತಾರೆ. ಆದರೆ ಈಗೀಗ ವಿವಾಹವಾದ ತಿಂಗಳು ಅಥವಾ ಒಂದೇರಡು ವರ್ಷಗಳಲ್ಲಿ ಸಂಬಂಧ ಮುರಿದು ಕೆಲವು ಕೋರ್ಟ್ ಮೆಟ್ಟಿಲೇರಿದರೆ, ಇನ್ನು ಕೆಲವು ಅಡ್ಡದಾರಿ ಹಿಡಿಯುತ್ತಿವೆ. ಅಂತಹ ಅಡ್ಡದಾರಿ ಹಿಡಿದ ಭಯಾನಕ ಘಟನೆ ಇದು.
ತನ್ನ ತಂದೆ, ತಾಯಿಯನ್ನು ದೂರ ಮಾಡಿದರೆಂದು ಬೇರೆ ವ್ಯಕ್ತಿಯೊಂದಿಗೆ ಸೇರಿ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿ ವಿಫಲವಾಗಿದ್ದಾನೆ. ಸದ್ಯ ಇಬ್ಬರು ಆರೋಪಿಗಳನ್ನ 6 ತಿಂಗಳ ಬಳಿಕ ಬಾಗಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಪತ್ನಿ ಚಿಕಿತ್ಸೆ ಪಡೆದು 6 ತಿಂಗಳ ಕಳೆದರೂ ಇನ್ನು ನರಕಯಾತನೆ ಅನುಭವಿಸುತ್ತಿದ್ದಾಳೆ.
ಅರವಿಂದ್ ಮತ್ತು ಚೈತನ್ಯ ಎನ್ನುವರು ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ತನ್ನ ತಂದೆ, ತಾಯಿಯನ್ನು ದೂರ ಮಾಡಿದ್ದಾರೆ ಎಂದು ಪತ್ನಿ ಮೇಲೆ ಅರವಿಂದ್ ಕೋಪಕೊಂಡಿದ್ದನು. ಹೀಗಾಗಿ ಮದುವೆಯಾದ ಒಂದೂವರೆ ವರ್ಷಕ್ಕೆ ಡಿವೋರ್ಸ್ ಕೊಡು ಎಂದು ಪತ್ನಿಯನ್ನು ಪೀಡಿಸುತ್ತಿದ್ದನು. ಆದರೆ ಇದಕ್ಕೆ ಆಕೆ ಒಪ್ಪಿರಲಿಲ್ಲ. ಇದರಿಂದ ಪತ್ನಿಯನ್ನು ಕೊಲೆ ಮಾಡಲು ನಿರ್ಧರಿಸಿ ಅಪಘಾತವಾದಂತೆ ಕೊಲೆ ಮಾಡಲು ಬಿಗ್ ಪ್ಲಾನ್ ರೂಪಿಸಿದ್ದನು.
ಸಿಸಿಟಿವಿ ಇಲ್ಲದ ಸ್ಥಳಗಳನ್ನು ಗುರುತಿಸಿದ್ದ ಕಾರು ಚಾಲಕ
ಆಕೆಯನ್ನು ಹೇಗಾದರು ಮಾಡಿ ಮುಗಿಸಬೇಕೆಂದು ಹಳೆಯ ಟಾಟಾ ಸುಮೊ ಕಾರು ಖರೀದಿಸಿ ಅದಕ್ಕೆ ಉದಯ್ ಕುಮಾರ್ ಎನ್ನುವ ಚಾಲಕನನ್ನ ನೇಮಿಸಿದ್ದನು. ಬಳಿಕ ಚಾಲಕನಿಗೆ, ನನ್ನ ಪತ್ನಿಗೆ ಆಕ್ಸಿಡೆಂಟ್ ಮಾಡಬೇಕೆಂದು ಮೊದಲೇ ಹೇಳಿದ್ದನು. ಇದಕ್ಕೆ ಚಾಲಕ ಒಪ್ಪಿಗೆ ಸೂಚಿಸಿದ್ದನು. ಚಾಲಕ ಅಪಘಾತ ಮಾಡಲು ಒಪ್ಪುವುದಕ್ಕೆ ಒಂದು ಕಾರಣವಿದೆ. ಚಾಲಕನ ಮನೆಯಲ್ಲೂ ಕೌಟುಂಬಿಕ ಕಲಹ ಇದ್ದ ಕಾರಣ ದಂಪತಿ ನಡುವೆ ವಿಚ್ಛೇದನ ಮಾತುಕತೆ ನಡೆಯುತ್ತಿತ್ತು. ಹೀಗಾಗಿ ಎಲ್ಲರ ಹೆಂಡತಿಯರು ಒಂದೇ ರೀತಿ ಇರುತ್ತಾರೆ ಎಂದು ಹೇಳಿ ಕೊಲೆ ಮಾಡೇ ಬಿಡೋಣವೆಂಬ ತೀರ್ಮಾನ ಮಾಡಿದ್ದನು. ಇದಕ್ಕಾಗಿ ಅರವಿಂದ್ ಪತ್ನಿ ಚೈತನ್ಯ ಎಲ್ಲೆಲ್ಲಿ ಹೋಗ್ತಾಳೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಂಡು ಸಿಸಿಟಿವಿ ಇಲ್ಲದ ಸ್ಥಳಗಳನ್ನು ಗುರುತಿಸಿದ್ದನು.
ಪತ್ನಿ ಚೈತನ್ಯ 4 ತಿಂಗಳ ಗರ್ಭಿಣಿಯಾಗಿದ್ದಳು. ಹೊಸ ವರ್ಷದ ದಿನ 2023 ಜನವರಿ 1 ರಂದು ಭರತನಾಟ್ಯ ತರಗತಿ ಮುಗಿಸಿ ಬಾಗಲೂರಿನ ಕೆಐಡಿಬಿ ಲೇಔಟ್ನಲ್ಲಿ ಬೈಕ್ನಲ್ಲಿ ಬರುತ್ತಿದ್ದಳು. ಈ ವೇಳೆ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ನೇರ ಹೋಗಿ ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆದು ಇಬ್ಬರು ಅಲ್ಲಿಂದ ಎಸ್ಕೇಪ್ ಆಗಿದ್ದರು. ಚಾಲಕನ ಪಕ್ಕದಲ್ಲಿಯೇ ಅರವಿಂದ್ ಕುಳಿತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವನಹಳ್ಳಿಯಿಂದ ಕೇಸ್ ಬಾಗಲೂರು ಠಾಣೆಗೆ ವರ್ಗಾವಣೆ
ಪತಿ ಪ್ಲಾನ್ನಂತೆ ಪತ್ನಿ ಸಾವನ್ನಪ್ಪದೇ ಅಪಘಾತದಿಂದ ಕಾಲು, ತಲೆ, ಕೈಗೆ ಗಂಭೀರವಾದ ಗಾಯಗಳು ಆಗಿದ್ದವು. ಆಕ್ಸಿಡೆಂಟ್ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದರು. ಬಳಿಕ ಕೇಸ್ನಲ್ಲಿ ಅನುಮಾನಗಳು ಇದ್ದಿದ್ದರಿಂದ ಕೇಸ್ ಅನ್ನು ಬಾಗಲೂರು ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಅಪಘಾತಕ್ಕೆ ಬಳಸಿದ ಕಾರು ಪತ್ತೆ ಹಚ್ಚಿದ ಪೊಲೀಸರು
ಅಪಘಾತ ಬಳಿಕ ಕಾರ್ ಡ್ಯಾಮೇಜ್ ಆಗಿದ್ದ ಕಾರಣ ಅದನ್ನು ಗ್ಯಾರೆಜ್ಗೆ ಬಿಟ್ಟಿದ್ದನು. ಈ ಕೇಸ್ನ ತನಿಖೆ ಕೈಗೊಂಡಿದ್ದ ಪೊಲೀಸರು ಕೊನೆಗೆ ಗ್ಯಾರೆಜ್ನಲ್ಲಿದ್ದ ಕಾರನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಕಾರು ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಲೀಕರು ಕಾರು ಮಾರಾಟ ಮಾಡಲಾಗಿದೆ. ಆದರೆ ಕಾರು ಅರವಿಂದ್ ಹೆಸರಿಗೆ ಇನ್ನು ವರ್ಗಾವಣೆ ಆಗಿರಲ್ಲ ಎಂದು ಮಾಲೀಕರು ಹೇಳಿ ಅರವಿಂದ್ ಮನೆಯನ್ನು ತೋರಿಸಿದ್ದಾರೆ. ಪೊಲೀಸರು ಆರೋಪಿಗಳಾದ ಅರವಿಂದ್ ಮತ್ತು ಚಾಲಕ ಉದಯ್ ಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಈ ಎಲ್ಲ ಮಾಹಿತಿ ಬಾಯ್ಬಿಟ್ಟಿದ್ದಾರೆ. ಸದ್ಯ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ. ಅಪಘಾತವಾದ 6 ತಿಂಗಳ ಬಳಿಕ ಆರೋಪಿಗಳು ಅರೆಸ್ಟ್ ಆಗಿದ್ದೆ ಇಲ್ಲಿ ರೋಚಕ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ