newsfirstkannada.com

21 ಲಕ್ಷ ಮೌಲ್ಯದ ಬೆಳ್ಳಿ ಕದ್ದ ಖದೀಮರು.. ಕೊನೆಗೂ ಜೈಲು ಸೇರಿದ್ರು.. ಇವರು ಸಿಕ್ಕಿದ್ದೇ ರೋಚಕ!

Share :

14-11-2023

    ಶೋಕಿ ಜೀವನ ಆಸೆ ಹೊತ್ತು ಕೊನೆಗೆ ಜೈಲು ಪಾಲಾದ ಖದೀಮರು

    ನಿತ್ಯ ಕೂಲಿ ಕೆಲಸ ಮಾಡುತ್ತಿದ್ದವರಿಗೆ ಕಳ್ಳತನ ಮಾಡವ ಆಸೆನಾ..?

    ಬಾಗಿಲು ಮುರಿದು ಒಳಗೆ ನುಗ್ಗಿದ್ದವರಿಗೆ ಬಂಗಾರವೇ ಕಾರಣಲಿಲ್ಲ

ಪ್ರತಿ ನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸ್ತಿದ್ದವ್ರು. ಬೆಳಗೆದ್ದು ಎಂದಿನಂತೆ ವೆಲ್ಡಿಂಗ್​ ಶಾಪ್​ಗೆ ಕೆಲಸಕ್ಕೆ ಹೋಗ್ತಿದ್ರು. ಆದ್ರೆ, ಶೋಕಿ ಜೀವನ ಆಸೆಗೆ ಬಿದ್ದು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಏನಿದು ಅತಿ ಆಸೆ ಹಿಂದೆ ಹೋಗಿ ಕಂಬಿ ಹಿಂದೆ ಸೇರಿದ ಕಹಾನಿ?.

ಬನಶಂಕರಿಯ ಕದಿರೇನಹಳ್ಳಿ ಪಾರ್ಕ್ ರಸ್ತೆಯಲ್ಲಿರುವ ಸೂಜರ್ ಜ್ಯುವಲ್ಲರ್ಸ್​. ಎಂದಿನಂತೆ ಅಂಗಡಿ ಮಾಲೀಕ ಹಬ್ಬದ ಪೂಜೆ ಮಾಡಬೇಕು ಎಂದು ಬಾಗಿಲು ಹಾಕಿ ಮನೆಗೆ ತೆರಳಿದ್ದಾರೆ. ಆದ್ರೆ, ಬೆಳಗ್ಗೆ ಅಂಗಡಿಗೆ ಬಂದ ಮಾಲೀಕನಿಗೆ ಶಾಕ್ ಎದುರಾಗಿದೆ.

ಕಗ್ಗತ್ತಲ್ಲ ರಾತ್ರಿ.. ಕಳ್ಳ ಬೆಕ್ಕಿನಂತೆ ಖದೀಮರ ಗ್ಯಾಂಗ್ ಎಂಟ್ರಿ!

ಮಾಲೀಕ ಮನೆಗೆ ಕಡೆ ಹೆಜ್ಜೆ ಹಾಕಿದ್ರೆ, ಆ ಕಡೆಯಿಂದ ಕಗ್ಗತ್ತಲ್ಲ ರಾತ್ರಿಯಲ್ಲಿ ಕಳ್ಳಬೆಕ್ಕಿನಿಂದ ಖದೀಮರ ಗ್ಯಾಂಗ್​ ಒಂದು ಎಂಟ್ರಿ ಕೊಟ್ಟಿತ್ತು. ಕಬ್ಬಿಣ ಕಟ್​ ಮಾಡೋ ಗ್ಯಾಸ್​ ಕಟ್ಟರ್​ಗಳನ್ನ ಅಸ್ತ್ರ ಮಾಡ್ಕೊಂಡ ಖದೀಮರು ಅಂಗಡಿಯ ರೋಲಿಂಗ್​ ಶೆಟ್ಟರ್ ಮುರಿದು ಒಳ ನುಸುಳ್ತಾರೆ. ಆದ್ರೆ, ಕೆಜಿ, ಕೆಜಿ ಬಂಗಾರದ ಆಸೆ ಹೊತ್ತು ಚಿನ್ನದಂಗಡಿಗೆ ಬಲಗಾಲಿಟ್ಟು ಬಂದ ಖದೀಮರಿಗೆ ಮೊದಲಿಗೆ ಭಾರಿ ನಿರಾಸೆಯಾಗುತ್ತೆ. ಯಾಕಂದ್ರೆ ಚಿನ್ನದಂಗಡಿಗೆ ಚಿನ್ನದ ಬದಲು ಕಾಣಿಸಿಕೊಂಡಿದ್ದು ಬೆಳ್ಳಿ ಮಾತ್ರ.

ಬಂಗಾರ ಕೈ ತಪ್ತು.. ಆದ್ರೆ, ಬೇಕಾದಷ್ಟು ಬೆಳ್ಳಿ ಸಿಕ್ತು!

ಮೊದಲು ನಿರಾಸೆಯಾದ ಖದೀಮರು ಬರಿಗೈಯಲ್ಲಿ ಹೋಗೊದು ಬೇಡ ಅಂತಾ ಯೋಚಿಸಿ ಬೆಳ್ಳಿಗೆ ಕೈ ಹಾಕಿದ್ರು. ಅದರಂತೆ ಬರೋಬ್ಬರಿ 30 ಕೆ.ಜಿ ಬೆಳ್ಳಿ ಕದ್ದು ನಮ್ಮ ಲೈಫ್​​ ಇನ್ನು ಸೆಟಲ್​ ಅನ್ಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಬೆಳ್ಳಗ್ಗೆ ಬಂದ ಶಾಪ್ ಮಾಲೀಕ ಅಂಗಡಿ ತೆರೆದ ತಕ್ಷಣ ಶಾಕ್ ಆಗಿದ್ದಾನೆ. ಒಳಗಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿತ್ತು. ಅಂಗಡಿಯನ್ನೆಲ್ಲ ಕಳ್ಳರು ಗುಡಿಸಿ ಗುಂಡಾಂತರ ಮಾಡಿ ಹೋಗಿದ್ರು. ಬಳಿಕ ಬನಶಂಕರಿ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿಕೊಂಡ ಬನಶಂಕರಿ‌ ಪೊಲೀಸರು ಸುಹೇಲ್, ಯೂಸೂಫ್, ಮಹಮ್ಮದ್ ರಿಜ್ವಾನ್ ಹಾಗೂ ಸೈಯ್ಯದ್ ಅಜ್ಮತ್ ಎಂಬ ನಾಲ್ವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.

ಅದೇನೆ ಹೇಳಿ.. ಅತಿ ಆಸೆ ಗತಿ ಕೇಡು ಅನ್ನೋ ಗಾದೇ ಮಾತೇ ಇದೆ. ಇಲ್ಲೂ ಅದೇ ಆಗಿರೋದು. ಶೋಕಿ ಜೀವನ ಆಸೆ ಹೊತ್ತು ಚಿನ್ನದಂಗಡಿಗೆ ಕನ್ನ ಹಾಕಿದ್ದವರು ಕೊನೆಗೆ ಜೈಲು ಪಾಲಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

21 ಲಕ್ಷ ಮೌಲ್ಯದ ಬೆಳ್ಳಿ ಕದ್ದ ಖದೀಮರು.. ಕೊನೆಗೂ ಜೈಲು ಸೇರಿದ್ರು.. ಇವರು ಸಿಕ್ಕಿದ್ದೇ ರೋಚಕ!

https://newsfirstlive.com/wp-content/uploads/2023/11/BIG_30KG_SILVER.jpg

Load More