newsfirstkannada.com

ವರ್ಕೌಟ್​ ಮುಗಿಸಿ ಸ್ನಾನ ಮಾಡ್ತಿದ್ದ ಮಹಿಳೆ ವಿಡಿಯೋ ಮಾಡಿದ ಜಿಮ್​ ಕೋಚ್​; ಈಗ ಎಲ್ಲಿದ್ದಾನೆ?

Share :

09-11-2023

    ಮಹಿಳೆ ಸ್ನಾನ ಮಾಡ್ತಿರುವುದನ್ನ ಜಿಮ್​ನ ಫಿಟ್ನೆಸ್​ ಕೋಚ್ ಸೆರೆ ಹಿಡಿದ್ನಾ.?

    ಯಾರಿಗೂ ತಿಳಿಯದ ಹಾಗೆ ಫೋನ್​ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದ ಆರೋಪಿ

    ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಮಾಡಿರುವುದು ಏನು..?

ಬೆಂಗಳೂರು: ಜಿಮ್​ನಲ್ಲಿ ವರ್ಕೌಟ್​ ಮುಗಿಸಿಕೊಂಡು ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಮಾಡಿದ್ದ ಫಿಟ್ನೆಸ್ ಕೋಚ್​​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆಯು ನಗರದ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಜಿಮ್​ವೊಂದರಲ್ಲಿ ಮಹಿಳೆಯು ಎಂದಿನಂತೆ ವರ್ಕೌಟ್ ಮಾಡಿದ ಮೇಲೆ ಸ್ನಾನ ಮಾಡುತ್ತಿದ್ದರು. ಈ ವೇಳೆ ಆರೋಪಿಯು ಬಾತ್​​ ರೂಮ್​ನ ಕಿಟಕಿ ಬಳಿ ಮೊಬೈಲ್​ ಇಟ್ಟು ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದನು. ಇದನ್ನು ನೋಡಿದ್ದ ಮಹಿಳೆ ತಕ್ಷಣ ಹೊರಗೆ ಬಂದು ನೋಡಿದಾಗ ಸ್ಥಳದಲ್ಲಿ ಯಾರು ಇರಲಿಲ್ಲ.

ಹೀಗಾಗಿ ಅನುಮಾನ ಬಂದು ಜಿಮ್ ಮ್ಯಾನೇಜರ್​ಗೆ ಮಹಿಳೆ ದೂರು ನೀಡಿದ್ದರು. ಆಗ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಮಹಿಳೆಯ ದೂರಿನನ್ವಯ ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜಿಮ್‌ನಲ್ಲಿ ಮಹಿಳೆಯ ವಿಡಿಯೋ ಮಾಡಿದ ಫಿಟ್ನೆಸ್ ಕೋಚ್ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ವರ್ಕೌಟ್​ ಮುಗಿಸಿ ಸ್ನಾನ ಮಾಡ್ತಿದ್ದ ಮಹಿಳೆ ವಿಡಿಯೋ ಮಾಡಿದ ಜಿಮ್​ ಕೋಚ್​; ಈಗ ಎಲ್ಲಿದ್ದಾನೆ?

https://newsfirstlive.com/wp-content/uploads/2023/11/GYM_FITNESS.jpg

Load More