ಬಂದ್ ಹಿನ್ನೆಲೆ ಖಾಸಗಿ ವಾಹನಗಳ ಓಡಾಟ ಸ್ತಬ್ಧ, ಕೆಲವ್ರಿಗೆ ಸಂಕಷ್ಟ
ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಣೆ
ಭಾರತದ ಕ್ರಿಕೆಟ್ ತಂಡದ ದಿಗ್ಗಜ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆ
ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ಮಾಡಲಾಗಿದ್ದು ಸಾಕಷ್ಟು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರು ಯೆಲ್ಲೋ ಬೋರ್ಡ್ ಇರುವ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಬಂದ್ ಬಿಸಿ, ಸ್ಪಿನ್ ಮಾಂತ್ರಿಕ ಮಾಜಿ ಕ್ರಿಕೆಟರ್ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೂ ತಟ್ಟಿದೆ.
BMTC trip back home today from the airport. pic.twitter.com/jUTfHk1HrE
— Anil Kumble (@anilkumble1074) September 11, 2023
ಭಾರತದ ಕ್ರಿಕೆಟ್ ತಂಡದ ದಿಗ್ಗಜ ಮಾಜಿ ಕ್ರಿಕೆಟರ್ ಅನಿಲ್ ಕುಂಬ್ಳೆಯವರು ಇಂದು ವಿಮಾನದ ಮೂಲಕ ಬೆಂಗಳೂರಿನ ಏರ್ಪೋರ್ಟ್ಗೆ ಆಗಮಿಸಿದ್ದಾರೆ. ಈ ವೇಳೆ ಏರ್ಪೋರ್ಟ್ನಿಂದ ತಮ್ಮ ನಿವಾಸಕ್ಕೆ ಹೋಗಬೇಕೆಂದು ಕ್ಯಾಬ್ಗಳನ್ನ ಹುಡುಕಾಡಿದ್ದಾರೆ. ಆದ್ರೆ ಯಾವುದೇ ಕ್ಯಾಬ್ ಸಿಕ್ಕಿಲ್ಲ. ಹೀಗಾಗಿ ಅನಿಲ್ ಕುಂಬ್ಳೆ ಅವರು ಬಿಎಂಟಿಸಿ ಬಸ್ನಲ್ಲಿ ಪ್ರಯಾಣ ಮಾಡಿದ್ದಾರೆ.
ಇದನ್ನು ಓದಿ: Asia Cup: ರೋಹಿತ್-ಗಿಲ್ ಮಿಂಚಿನ ಅರ್ಧ ಶತಕ.. ಇವತ್ತು ಮ್ಯಾಚ್ ರದ್ದುಗೊಂಡರೆ ಭಾರತಕ್ಕೆ ಹೆಚ್ಚು ಲಾಸ್; ಯಾಕೆ?
ಸದ್ಯ ಈ ಬಗ್ಗೆ ತಮ್ಮ ಎಕ್ಸ್ ಅಕೌಂಟ್ನಲ್ಲಿ ಫೋಟೋ ಶೇರ್ ಮಾಡಿರುವ ಅನಿಲ್ ಕುಂಬ್ಳೆಯವರು, ಇಂದು ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್ ಮೂಲಕ ಮನೆಗೆ ವಾಪಸ್ ಆಗುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಬಿಎಂಟಿಸಿ ಕಂಡಕ್ಟರ್‌ಗೆ ಸೆಲ್ಫಿ ಕೊಟ್ಟಿದ್ದು, ಅನಿಲ್ ಕುಂಬ್ಳೆ ಅವರ ಸರಳತೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ