newsfirstkannada.com

Bangalore Bandh: ಱಪಿಡೋ ಚಾಲಕನಿಗೆ ಹಿಗ್ಗಾ ಮುಗ್ಗಾ ಕ್ಲಾಸ್​, ಪ್ರತಿಭಟನಾಕಾರರಿಂದ ಬೈಕ್​ ಪುಡಿ ಪುಡಿ

Share :

11-09-2023

    ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್​ಗೆ ಕರೆ

    ಇಂದು ಬೆಂಗಳೂರು ಬಂದ್​​ ಱಪಿಡೋ ಚಾಲಕನಿಗೆ ಥಳಿತ

    ಬೆಂಗಳೂರಿನ ಮೌರ್ಯ ಸರ್ಕಲ್​ ಬಳಿ ಘಟನೆ

ಆಟೋ ಚಾಲಕರು, ಖಾಸಗಿ ಬಸ್ ಚಾಲಕರು ಸೇರಿದಂತೆ ಖಾಸಗಿ ಸಾರಿಗೆ ಒಕ್ಕೂಟ ಇವತ್ತು ಬೆಂಗಳೂರು ಬಂದ್​ಗೆ ಕರೆ ನೀಡಿದೆ. ಬೆಳಗ್ಗೆಯಿಂದ ಪ್ರತಿಭಟನೆ, ಮೆರವಣಿಗೆಗಳು ನಡೀತಿವೆ. ಆಟೋ ಚಾಲಕರ ಪ್ರಮುಖ ಬೇಡಿಕೆಯಲ್ಲೊಂದು ಱಪಿಡೋ ಬೈಕ್ ಟ್ಯಾಕ್ಸಿಗೆ ಬ್ರೇಕ್ ಹಾಕೋದು. ಆಕ್ರೋಶ ಭರಿತ ಪ್ರತಿಭಟನಾ ನಿರತರು ಇವತ್ತು ಕೈಗೆರ ಸಿಕ್ಕ ಱಪಿಡೋ ಬೈಕ್ಸ್ ಟ್ಯಾಕ್ಸಿ ಸವಾರರ ಮೇಲೆ ಮನಬಂದಂತೆ ದಾಳಿ ಮಾಡಿದ್ದಾರೆ.

ಱಪಿಡೋ ಚಾಲಕನಿಗೂ ಆಟೋ ಚಾಲಕರು ಹಿಗ್ಗಾ ಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್​ ಬಳಿ, ಱಪಿಡೋ ಚಾಲಕನ್ನು ಹಿಡಿದು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆನ್ನೆಗೆ ಬಾರಿಸಿ, ಯಾರೋ ನಿನಗೇ ಪರ್ಮಿಷನ್​ ಕೊಟ್ಟಿದ್ದು, ಯಾಕೋ ರಸ್ತೆಗೆ ಬಂದಿದ್ಯಾ ಅಂತ ಫುಲ್​ ಅವಾಜ್​ ಹಾಕಿದ್ದಾರೆ. ಆತನ ಕೈಯಲ್ಲಿದ್ದ ಹೆಲ್ಮೆಟ್​ ಕೊತ್ಕೊಂಡು ಅದೇ ಹೆಲ್ಮೇಟ್​ನಲ್ಲಿ ತಲೆಗೆ ಬಾರಿಸಿ ವಾಪಾಸ್​ ಹೋದ್ರೆ ಸರಿ ಅಂತ ಧಮ್ಕಿ ಹಾಕಿದ್ದಾರೆ.

ಇನ್ನೂ ಇಲ್ಲಿ ಮಡಿವಾಳ ಅಂಡರ್ ಪಾಸ್ ನಲ್ಲಿ ಮತ್ತೊಂದು ಱಪಿಡೋ ಬೈಕ್​ ತಡೆದು ಬೈಕ್​​ನ ಪುಡಿ ಪುಡಿ ಮಾಡ್ಬಿಟ್ಟಿದ್ದಾರೆ. ಕರ್ತವ್ಯ ನಿರತ ಱಪಿಡೋ ಚಾಲಕನನ್ನು ತಡೆದು ಹಲ್ಲೆ ಮಾಡಿ, ಬೈಕ್​ ಡ್ಯಾಮೇಜ್​ಮಾಡಿ ಪ್ರತಿಭಟನಾಕಾರರು ಕ್ಷಣಮಾತ್ರದಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore Bandh: ಱಪಿಡೋ ಚಾಲಕನಿಗೆ ಹಿಗ್ಗಾ ಮುಗ್ಗಾ ಕ್ಲಾಸ್​, ಪ್ರತಿಭಟನಾಕಾರರಿಂದ ಬೈಕ್​ ಪುಡಿ ಪುಡಿ

https://newsfirstlive.com/wp-content/uploads/2023/09/bandh-4.jpg

Load More