newsfirstkannada.com

‘ನನ್ನ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ’ ಬಳ್ಳಾರಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಯುವತಿ ಆರೋಪ..!

Share :

17-11-2023

    ಬೆಂಗಳೂರು ಮೂಲದ ಯುವತಿಗೆ ಸಂಸದರ ಮಗ ವಂಚಿಸಿದ ಆರೋಪ

    42 ವರ್ಷದ ರಂಗನಾಥ್​ಗೆ 24 ವರ್ಷದ ಯುವತಿ ಪಾರ್ಟಿಯಲ್ಲಿ ಪರಿಚಯ

    ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ರಂಗನಾಥ್

ಮೈಸೂರು: ಬಳ್ಳಾರಿಯ ಹಾಲಿ ಸಂಸದ ದೇವೇಂದ್ರಪ್ಪ ಅವರ ಪುತ್ರ, ಪ್ರೊಫೆಸರ್ ರಂಗನಾಥ್ ವಿರುದ್ಧ ಯುವತಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಈಗ ಮದುವೆಯಾಗಲ್ಲ ಎನ್ನುತ್ತಿದ್ದಾರೆ ಅಂತ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ​ ಆಗಿರುವ 42 ವರ್ಷದ ರಂಗನಾಥ್​ಗೆ ಒಂದೂವರೆ ವರ್ಷದ ಹಿಂದೆ ಪಾರ್ಟಿಯಲ್ಲಿ ಸ್ನೇಹಿತನೊಬ್ಬನ ಮೂಲಕ 24 ವರ್ಷದ ಯುವತಿ ಪರಿಚಯವಾಗಿದ್ದಳು. ಈ ಯುವತಿ ಬೆಂಗಳೂರು ಮೂಲದವರಾಗಿದ್ದು, ನಂತರದ ದಿನಗಳಲ್ಲಿ ಇಬ್ಬರ ಮಧ್ಯೆ ಲವ್ವಿಡವ್ವಿ ಶುರುವಾಗಿತ್ತು ಎನ್ನಲಾಗಿದೆ.

ಏನಿದು ಆರೋಪ..?

ಕಳೆದ ಜನವರಿಯಲ್ಲಿ ಮೈಸೂರಿನ ಹೋಟೆಲ್​ನಲ್ಲಿ ಸಂಸದರ ಮಗ ಆ ಯುವತಿ ಜೊತೆ ಲೈಂಗಿಕ ಸಂಪರ್ಕ ನಡೆದಿದೆ. ಕೆಲ ಕಾಲ ಇಬ್ಬರು ಚೆನ್ನಾಗಿಯೇ ಓಡಾಡಿಕೊಂಡಿದ್ದರು. ಬಳಿಕ ಯುವತಿ ಮದುವೆ ಆಗುವಂತೆ ಕೇಳಿದ್ದಾಳೆ. ಇದರಿಂದ ರಂಗನಾಥ್ ಆಕೆಯನ್ನು ಅವೈಡ್ ಮಾಡಲು ಶುರು ಮಾಡಿದ್ದಾನೆ. ಮದುವೆ ಆಗಲ್ಲ ಏನ್ ಮಾಡಿಕೊಳ್ತಿಯಾ ಮಾಡಿಕೊ ಹೋಗು ಎಂದಿದ್ದಾನೆ ಎಂದು ಆವಾಜ್ ಹಾಕಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.

ರಂಗನಾಥ್ ಹಾಗೂ ತನ್ನ ನಡುವೆ ಇದ್ದ ಸಂಬಂಧದ ಬಗ್ಗೆ ಸಂಸದ ದೇವೆಂದ್ರಪ್ಪ ಗಮನಕ್ಕೆ ಯುವತಿ ತಂದಿದ್ದಾಳೆ. ಆದ್ರೆ ಯುವತಿಯ ವಿರುದ್ಧವೇ ದೇವೇಂದ್ರಪ್ಪ ಸಿಡಿಮಿಡಿಗೊಂಡಿದ್ದಾರೆ. ಹೀಗಾಗಿ ಸಂತ್ರಸ್ಥ ಯುವತಿಗೆ ಬೇರೆ ದಾರಿ ಕಾಣದೇ ಬಸವನಗುಡಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ 3 ದಿನಗಳ ಹಿಂದೆ ಪ್ರೊ. ರಂಗನಾಥ್ ಅವರು ಯುವತಿಯೊಬ್ಬಳು ಹಣಕ್ಕಾಗಿ ಪೀಡಿಸುತ್ತಿದ್ದಾಳೆ ಎಂದು ಆರೋಪಿಸಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಹನಿಟ್ರ್ಯಾಪ್ ದೂರು ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ’ ಬಳ್ಳಾರಿ ಸಂಸದ ದೇವೇಂದ್ರಪ್ಪ ಪುತ್ರನ ವಿರುದ್ಧ ಯುವತಿ ಆರೋಪ..!

https://newsfirstlive.com/wp-content/uploads/2023/11/MP_DEVENDRAPPA_SON.jpg

Load More