newsfirstkannada.com

ಪೋಷಕರೇ ಎಚ್ಚರ! ಮಕ್ಕಳನ್ನು ಬೆಂಬಿಡದೆ ಕಾಡುತ್ತಿದೆ ಈ ಕಾಯಿಲೆ..!

Share :

16-11-2023

    ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಮಕ್ಕಳಲ್ಲಿ ಡಯಾಬಿಟಿಸ್ ಕಾಯಿಲೆ!

    ಈ ಕಾಯಿಲೆಯಿಂದಾಗಿ ಶುರುವಾಯ್ತು ಕಣ್ಣು ಕಳೆದುಕೊಳ್ಳುವ ಭಯ

    ಸಿಲಿಕಾನ್​ ಸಿಟಿಯಲ್ಲಿರೋ ಪೋಷಕರು ಓದಲೇಬೇಕಾದ ಸ್ಟೋರಿ ಇದು

ಬೆಂಗಳೂರು: ಡೇಂಜರಸ್ ಕಾಯಿಲೆಗಳು, ಮಾನವಕುಲವನ್ನು ನೂರಾರು ವರ್ಷಗಳಿಂದಲೂ ಕಾಡುತ್ತಿವೆ. ಅದರಲ್ಲಿ ಡಯಾಬಿಟಿಸ್ ಮೇನ್ ಸ್ಟ್ರೀಮ್ ರೋಗವಾಗಿ ಮಾರ್ಪಟ್ಟಿದೆ. ಭಾರತವಂತು ಡಯಾಬಿಟಿಸ್ ಕ್ಯಾಪಿಟಲ್ ಅಂತಾನೇ ಕರೆಸಿಕೊಳ್ತಿದೆ. ಈ ನಡುವೆ ರಾಜಧಾನಿಯು ಸಕ್ಕರೆ ಖಾಯಿಲೆಯ ತಾಣವಾಗಿ ಬದಲಾಗ್ತಿದ್ದು ಮಕ್ಕಳನ್ನೂ ಕೂಡ ಡಯಾಬಿಟಿಸ್ ಭಾದಿಸುತ್ತಿದ್ದು ಕಣ್ಣಿನ ದೃಷ್ಟಿಗೆ ಎಫೆಕ್ಟ್ ಬೀಳುವ ಭಯ ಆರಂಭವಾಗಿದೆ.

ನಗರ ಬೆಳೆಯುತ್ತಿದೆ. ಟೆಕ್ನಾಲಜಿ ಹೊಸ ಮಜಲನ್ನ ತಲುಪಿದೆ. ಆಹಾರ ಪದ್ಧತಿ ಬದಲಾಗಿದೆ. ಈ ಎಲ್ಲಾ ಅಂಶಗಳು ಮನುಷ್ಯನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಹೈ ಮತ್ತು ಲೋ ಬಿಪಿ, ಥೈರಾಯ್ಡ್, ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳು ಹತ್ತು ಮಂದಿಯಲ್ಲಿ ಒಬ್ಬರಿಗಾದರು ಇರುತ್ತವೆ. ಈ ಮಧ್ಯೆ ಮೊದಲೆಲ್ಲಾ ಶ್ರೀಮಂತರ ಖಾಯಿಲೆಯಾಗಿದ್ದ ಡಯಾಬಿಟಿಸ್ ಈಗ ಪುಟ್ಟ ಮಕ್ಕಳಲ್ಲು ಕಾಣಿಸಿಕೊಳ್ತಿದೆ. ದಿನದಿಂದ ದಿನಕ್ಕೆ ಮಕ್ಕಳಲ್ಲಿ ಡಯಾಬಿಟಿಸ್ ಕಾಯಿಲೆ ಹೆಚ್ಚಾಗುತ್ತಿದೆ.

ಇನ್ನು, ಮಕ್ಕಳಲ್ಲಿ ಡಯಾಬಿಟಿಸ್ ಹೆಚ್ಚಳವಾಗುತ್ತಿರೊದನ್ನ ಗಮನಿಸಿದರೆ ಬೆಂಗಳೂರು ಸಕ್ಕರೆ ಖಾಯಿಲೆಯ ಕ್ಯಾಪಿಟಲ್ ಆಗ್ತಿದೆಯಾ ಎಂಬ ಪ್ರಶ್ನೆಯೂ ಮೂಡುತ್ತಿದೆ. ಡಯಾಬಿಟಿಸ್ ಕಾಯಿಲೆಯಿಂದಾಗಿ ಕಣ್ಣು ಕಳೆದುಕೊಳ್ಳುವ ಭಯ ಆರಂಭವಾಗಿದೆ. ಡಯಾಬಿಟಿಸ್​ನಿಂದ ಬಳಲುತ್ತಿರುವ ಮಕ್ಕಳಲ್ಲಿ ನಾನ ರೀತಿಯಾ ಕಣ್ಣಿನ ಸಮಸ್ಯೆಗಳು ಕಾಡಲು ಶುರುವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಡಯಾಬಿಟಿಸ್​​ನಿಂದ ಬಳತ್ತಿದ್ದು ಮಕ್ಕಳ ಕಣ್ಣಿನ ಮೇಲು ತೀರ ಎಫೆಕ್ಟ್ ಬೀಳುತ್ತಿರೋದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ದೂರ ದೃಷ್ಟಿ ಸಮಸ್ಯೆ, ಚಿಕ್ಕ ವಯಸ್ಸಿನಲ್ಲಿ ಅವರಿಸುತ್ತಿದೆ ಕಣ್ಣಿನ ಪೊರೆ ಇಂತಹ ಸಮಸ್ಯೆಗಳು ಡಯಾಬಿಟಿಸ್​ನಿಂದಾಗಿ ಅವರಿಸುತ್ತಿದೆ.

ಡಯಾಬಿಟಿಸ್ ಪ್ರಮಾಣ ಹೆಚ್ಚಾದಷ್ಟು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಸಿಲಿಕಾನ್ ಸಿಟಿಯಲ್ಲಿ ಇತಂಹ ಕೇಸ್​​ಗಳು ಕೂಡ ತುಂಬಾ ಕಂಡುಬಂದಿದೆ. ಬದುಕಿ ಬಾಳಿ ಸುಂದರ ಪ್ರಪಂಚವನ್ನು ಕಣ್ಣು ತುಂಚಿಸಿಕೊಳ್ಳಬೇಕಾದ ಪುಟ್ಟ ಮಕ್ಕಳಿಗೆ ಡಯಾಬಿಟಿಸ್ ವಕ್ಕರಿಸಿ ಕಣ್ಣು ಕಳೆದು ಕೊಳ್ಳುವಂತೆ ಮಾಡುತ್ತಿರೋದು ನಿಜಕ್ಕೂ ಆಘಾತಕಾರಿ ವಿಷಯ. ಹೀಗಾಗಿ ಪರಿಸ್ಥಿತಿ ಕೈ ಮೀರುವ ಮುನ್ನವೇ ಮಕ್ಕಳು ತಿನ್ನುವ ಆಹಾರದ ಬಗ್ಗೆ ಅದಷ್ಟೂ ಹೆಚ್ಚು ಕಾಳಜಿ ವಹಿಸುವಂತೆ ಪೋಷಕರಿಗೆ ವೈದ್ಯರಿಂದ ಸಲಹೆ ನೀಡಿದ್ದಾರೆ. ಈಗಾಗಲೇ ವೈದ್ಯಲೋಕ ಹೇಳುವಂತೆ, ವಿವಿಧ ಕಾಯಿಲೆಗಳು ಮನುಷ್ಯರನ್ನು ಆವರಿಸಿದೆ. ಇಂತಾ ಸಂದರ್ಭದಲ್ಲಿ ಮಕ್ಕಳಲ್ಲಿ ಡಯಾಬಿಟಿಸ್ ಖಾಯಿಲೆಗಳ ಪ್ರಮಾಣ ಹೆಚ್ಚುತ್ತಾ ಹೋದರೆ ಮಕ್ಕಳ ಕಣ್ಣಿಗೆ ಬೀಳುವ ಎಫೆಕ್ಟ್​ಗಳು ಮಾತ್ರ ಆತಂಕಕಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ! ಮಕ್ಕಳನ್ನು ಬೆಂಬಿಡದೆ ಕಾಡುತ್ತಿದೆ ಈ ಕಾಯಿಲೆ..!

https://newsfirstlive.com/wp-content/uploads/2023/11/bng-24.jpg

Load More