newsfirstkannada.com

×

ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ಶಾಕ್.. ಡಿಜಿಟಲ್​ ಮೀಟರ್​ ಅಳವಡಿಕೆಯಲ್ಲಿ ಭಾರೀ ಗೋಲ್​ಮಾಲ್

Share :

Published June 16, 2023 at 2:22pm

Update June 16, 2023 at 3:05pm

    ಬೆಸ್ಕಾಂನ ಅತೀ ದೊಡ್ಡ ಹಗರಣ.. ನ್ಯೂಸ್ ಫಸ್ಟ್​ನಿಂದ ಇಂಚಿಂಚೂ ಮಾಹಿತಿ

    3 ಏಜೆನ್ಸಿಗಳಿಗೆ ಟೆಂಡರ್ ನೀಡಿಕೆ.. 17 ಲಕ್ಷಕ್ಕೂ ಅಧಿಕ ಡಿಜಿಟಲ್​ ಮೀಟರ್..!

    ಮೀಟರ್ ಅಳವಡಿಸೋ ಬೆಲೆ ಕೇಳಿದರೇ ಬೆಂಗಳೂರು ನಾಗರಿಕರಿಗೆ ಶಾಕ್​..!

ಬೆಂಗಳೂರು: ಸದ್ಯ ರಾಜ್ಯದಲ್ಲಿ ಹೊಸ ಸರ್ಕಾರ ಬಂದಾಗಿನಿಂದ ವಿದ್ಯುತ್​ ದರ ಹೆಚ್ಚಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಬೆಸ್ಕಾಂನಲ್ಲಿ ಡಿಜಿಟಲ್ ಮೀಟರ್ ದಂಧೆ ನಡೆಯುತ್ತಿದ್ದು ಇದು ಬೆಸ್ಕಾಂನ ಅತೀ ದೊಡ್ಡ ಹಗರಣ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಇಂಚಿಂಚೂ ಮಾಹಿತಿಯನ್ನ ನ್ಯೂಸ್ ಫಸ್ಟ್ ಬಿಚ್ಚಿಡುತ್ತಿದೆ. ಹೀಗಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ಇದನ್ನು ಗಮನಿಸಬೇಕಾಗಿದೆ.

2 ವರ್ಷದ ಕಾಮಗಾರಿಗೆ 285 ಕೋಟಿ ರೂ. ಟೆಂಡರ್

ಡಿಜಿಟಲ್ ಮೀಟರ್ ಹೆಸರಲ್ಲಿ ನೂರಾರು ಕೋಟಿ ರೂಗಳನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಹೀಗಾಗಿ ಇದರ ವಿರುದ್ಧ ಬೆಸ್ಕಾಂ ಹಿರಿಯ ಅಧಿಕಾರಿಗಳೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿ, ಗುತ್ತಿಗೆದಾರರ ಜೇಬು ತುಂಬಿಸಲು ಈ ಯೋಜನೆ ತರಲಾಗಿದಿಯಾ ಎಂಬ ಪ್ರಶ್ನೆ ಎದ್ದಿದೆ. 17,90,882 ಮೀಟರ್ ಅಳವಡಿಸಲು 285 ಕೋಟಿ ರೂ. ಟೆಂಡರ್ ಅನ್ನು 3 ಏಜೆನ್ಸಿಗಳಿಗೆ ಬೆಸ್ಕಾಂ ಸಂಸ್ಥೆ ನೀಡಿದೆ ಎನ್ನಲಾಗಿದೆ. ಕೇವಲ 2 ವರ್ಷದ ಕಾಮಗಾರಿಗೆ 285 ಕೋಟಿ ರೂ. ಟೆಂಡರ್ ಕರೀಬೇಕಿತ್ತಾ ಎಂದು ಅಧಿಕಾರಿಗಳು ಹಾಗೂ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರದ ಸೂಚನೆ ನೀಡಿದ್ರೂ ಬೆಸ್ಕಾಂ ಮಾತ್ರ ಡಿಜಿಟಲ್ ಮೀಟರ್ ಮೊರೆ ಹೋಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಬೆಸ್ಕಾಂ ಎಂಡಿ ಮಹಾಂತೇಶ್ ಬೀಳಗಿಯನ್ನು ಪ್ರಶ್ನೆ ಮಾಡಿದ್ರೆ ಏನನ್ನು ಉತ್ತರಿಸದೇ ಮೌನವಾಗಿದ್ದಾರೆ.

ಸ್ಮಾರ್ಟ್ ಮೀಟರ್​ಗೆ ಕೇಂದ್ರ ಅನುದಾನ

ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್ ಅನ್ನು ಡಿಸೆಂಬರ್ 31, 2023ರೊಳಗೆ ಕಡ್ಡಾಯ ಅಳವಡಿಸುವಂತೆ ಸೂಚಿಸಿದೆ. ಇದು ಡಿಜಿಟಲ್ ಮೀಟರ್​ಗಿಂತ ಅಪ್​ಡೇಟೆಡ್ ವರ್ಷನ್ ಆಗಿದೆ. ಇದಕ್ಕೆ ಕೇಂದ್ರ ಸರ್ಕಾರ ಸಹಾಯಧನ ನೀಡುತ್ತದೆ. ಹೀಗಾಗಿಯೇ ಉತ್ತರಪ್ರದೇಶ, ಬಿಹಾರ, ತಮಿಳುನಾಡಿನಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಆದ್ರೂ ಬೆಸ್ಕಾಂ ಮಾತ್ರ ಡಿಜಿಟಲ್ ಮೀಟರ್ ಮೊರೆ ಹೋಗುತ್ತಿರುವುದಕ್ಕೆ ಕಾರಣ ಸಿಗುತ್ತಿಲ್ಲ ಎಂದು ಹೇಳಲಾಗಿದೆ.

ಡಿಜಿಟಲ್​ ಮೀಟರ್​ ಬೆಲೆ ಮೂರ್ನಾಲ್ಕು ಪಟ್ಟು ಹೆಚ್ಚಳ ಮಾಡಲಾಗಿದೆ. ಹೌದು 1 ಡಿಜಿಟಲ್​ ಎಲೆಕ್ಟ್ರಿಕ್​ ಮೀಟರ್​​ನ ಬೆಲೆ ₹900-₹1200 ಇದೆ. ಮೀಟರ್​ ಬಾಕ್ಸ್​, ಲೇಬರ್​ ಚಾರ್ಜ್​​ ಒಳಗೊಂಡ್ರೆ ₹2000 ಮಾತ್ರ ಆಗಲಿದೆ. ಆದ್ರೆ ಬೆಸ್ಕಾಂ ನೀಡಿರುವ ಟೆಂಡರ್​​ನಲ್ಲಿ ಪ್ರತಿ ಮೀಟರ್ ಬೆಲೆ ₹6,268 ಆಗಿರೋದು ಅಚ್ಚರಿ ಮೂಡಿಸಿದೆ. ₹285 ಕೋಟಿ ಟೆಂಡರ್ ಯಾವ ಆಧಾರದ ಮೇಲೆ ಬೆಸ್ಕಾಂ ನೀಡಿದೆ. ಇಷ್ಟಾದ್ರೂ ಸರ್ಕಾರ ಕಣ್ಮುಚ್ಚಿ ಕುಳಿತ್ತಿದಿಯಾ ಎಂದು ಪ್ರಶ್ನೆ ಮೂಡಿದೆ.

ಯಾಱರಿಗೆ ಎಷ್ಟೆಷ್ಟು ಟೆಂಡರ್?

  • ಏಜೆನ್ಸಿ -1
    M/S ರಾಜಶ್ರೀ ಎಲೆಕ್ಟ್ರಿಕಲ್ಸ್, ದಾವಣಗೆರೆ
    7,39,713 ಡಿಜಿಟಲ್​ ಮೀಟರ್​ ಅಳವಡಿಸಲು ಟೆಂಡರ್​
    116.70 ಕೋಟಿ ರೂ. ಟೆಂಡರ್​​
  • ಏಜೆನ್ಸಿ -2
    VR ಪಾಟೀಲ್​​ ವಿವಿಧ್​ ವಿದ್ಯುತ್​​ ನಿರ್ಮಾಣ್ ಪ್ರೈ.ಲಿ. ಮುನಿರಾಬಾದ್​
    4,87,930 ಡಿಜಿಟಲ್​​ ಮೀಟರ್​​ ಅಳವಡಿಕೆಗೆ ಟೆಂಡರ್​
    76.87 ಕೋಟಿ ರೂ. ವೆಚ್ಚದ ಟೆಂಡರ್​​
  • ಏಜೆನ್ಸಿ 3
    M/S ರಾಜಶ್ರೀ ಎಲೆಕ್ಟ್ರಿಕಲ್ಸ್, ದಾವಣಗೆರೆ
    5,63,239 – ಡಿಜಿಟಲ್​​ ಮೀಟರ್​​ ಅಳವಡಿಕೆಗೆ ಟೆಂಡರ್
    92.05 ಕೋಟಿ ರೂಪಾಯಿ ವೆಚ್ಚದ ಟೆಂಡರ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ನಿವಾಸಿಗಳಿಗೆ ಮತ್ತೊಂದು ಶಾಕ್.. ಡಿಜಿಟಲ್​ ಮೀಟರ್​ ಅಳವಡಿಕೆಯಲ್ಲಿ ಭಾರೀ ಗೋಲ್​ಮಾಲ್

https://newsfirstlive.com/wp-content/uploads/2023/06/CURRENT_BILL.jpg

Load More