newsfirstkannada.com

ಅಫ್ಘಾನ್ ಮಾದರಿಯಲ್ಲೇ ಬೆಂಗಳೂರು ಬ್ಲಾಸ್ಟ್​​ ಮಾಡಲು ಸ್ಕೆಚ್​​.. ಈ ಸ್ಫೋಟಕ ಮಾಹಿತಿ ಹೊರಬಿದ್ದಿದ್ದೇ ರೋಚಕ!

Share :

Published July 20, 2023 at 6:15am

Update July 20, 2023 at 7:37am

    ಅಪ್ಘಾನ್ ಮಾದರಿಯಲ್ಲಿ ಬೆಂಗಳೂರು ಸ್ಫೋಟಕ್ಕೆ ಸ್ಕೆಚ್

    ನಾಲ್ಕು ಗ್ರೆನೇಡ್ ಬಳಸಿ ನಗರದಲ್ಲಿ ಸ್ಫೋಟಕ್ಕೆ ಸಂಚು..!

    ಪವರ್ ಫುಲ್ ಗ್ರೆನೇಡ್​ 36HE ಸೀಜ್​ ಮಾಡಿದ ಸಿಸಿಬಿ

ಬೆಂಗಳೂರು: ಅಬ್ಬಬ್ಬಾ! ದೊಡ್ಡ ಅನಾಹುತದಿಂದ ಬೆಂಗಳೂರು ಜನ ತಪ್ಪಿಸಿಕೊಂಡಿದ್ದಾರೆ ಅಂತಾ ನಿಟ್ಟೂಸಿರು ಬಿಡಬೇಕಾ ಅಥವಾ ಇದೆಂಥಾ ಸಂಚು ಈ ಆಘಾಂತುಕರಿಂದ ನಡೆದಿತ್ತು ಅಂತ ಭಯ ಪಡ್ಬೇಕಾ ಗೊತ್ತಾಗ್ತಾಯಿಲ್ಲ. ಯಾಕಂದ್ರೆ ಇಲ್ಲಿ ನಡೆದಿದ್ದು ಅಂತಿಂಥಾ ಫ್ಲಾನ್​ ಅಲ್ಲ ಎದೆನಡುಗಿಸುವ ಮಹಾ ಮಾಸ್ಟರ್​ ಪ್ಲಾನ್​.

ಸಂಚು ನಡೆದಿತ್ತು ಅಂತಾ ಗೊತ್ತಾಗಿದೆ. ಸಂಚು ನಡಿಸಿದ 6 ಜನರಲ್ಲಿ ಐವರು ಸಿಕ್ಕಿಬಿದ್ದಿದ್ದಾರೆ. ಆದ್ರೆ ಇವರ ಸಂಚಿನ ತೀವ್ರತೆ ಹೇಗ್​ ಇತ್ತು ಗೊತ್ತಾ?

‘ಸೂಸೈಡ್ ಬಾಂಬರ್’ ಸ್ಕೆಚ್

ಅಪ್ಘಾನ್ ಮಾದರಿಯಲ್ಲಿ ಬೆಂಗಳೂರು ಸ್ಫೋಟಕ್ಕೆ ಉಗ್ರರು ಸ್ಕೆಚ್ ಹಾಕಿದ್ರು. ನಾಲ್ಕು ಗ್ರೆನೇಡ್ ಬಳಸಿ ನಗರದಲ್ಲಿ ಸ್ಫೋಟಕ್ಕೆ ಸಂಚು ಮಾಡಲಾಗಿತ್ತು. ಸ್ಫೋಟಕ್ಕೆ ಪವರ್ ಪುಲ್ ಗ್ರೆನೇಡ್​ 36HE ಅನ್ನ ಬಳಕೆ ಮಾಡಲಾಗಿತ್ತು ಅದನ್ನ ಸಿಸಿಬಿ ಪೊಲೀಸರು ಸೀಜ್​ ಮಾಡಿದ್ದಾರೆ. 36HE ಗ್ರೆನೇಡ್​ ಬ್ಲಾಸ್ಟ್​ ಆದ್ರೆ 4 ರಿಂದ 7 ಸೆಕೆಂಡ್​ನಲ್ಲಿ ಎಲ್ಲಾವೂ ಛಿದ್ರಛಿದ್ರವಾಗುತ್ತದೆ. ಇದಕ್ಕಾಗಿ ಸೂಸೈಡ್ ಬಾಂಬರ್ ಅನ್ನ ಕೂಡ​​ ಉಗ್ರರು ರೆಡಿ ಮಾಡಿದ್ದರು. ಇದರಲ್ಲಿ ತನ್ನನ್ನೇ ತಾನೇ ಸಿಡಿಸಿಕೊಳ್ಳುವ ಬಾಂಬರ್ ತಯಾರು ಮಾಡಲಾಗಿತ್ತು. ಹಾಗೂ ಆತನಿಗಾಗಿ ಗ್ರೆನೇಡ್​ ಅನ್ನ ಆರೋಪಿಗಳು ಸಂಗ್ರಹಿಸಿದ್ದರು. ಉಗ್ರರ ಲಿಸ್ಟ್​​ನಲ್ಲಿ ನಗರದ ಜನನಿಬಿಡ ಪ್ರದೇಶಗಳೇ ಮೇನ್​ ಟಾರ್ಗೆಟ್ ಆಗಿದ್ದವು.

ಏನಿದು ಅಫ್ಘಾನ್ ಮಾದರಿ?

ಅಫ್ಘಾನ್ ಮಾದರಿ ಅಂದ್ರೆ ಜನನಿಬಿಡ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ಬ್ಲಾಸ್ಟ್ ಮಾಡುವುದು. ಸೂಸೈಡ್​ ಬಾಂಬರ್​​​ ಮೂಲಕ ಸ್ಫೋಟಿಸುವುದು. ಪವರ್​​ಫುಲ್ ಗ್ರನೇಡ್ ಬಳಸಿ ಸ್ಫೋಟ ನಡೆಸುವುದು. ಇದರಿಂದ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಲಿದೆ. ಆತಂಕಕಾರಿ ವಿಷಯ ಅಂದ್ರೆ, ಬ್ಲಾಸ್ಟ್​ ಆದ ಕೆಲವೇ ಸೆಕೆಂಡ್​​ಗಳಲ್ಲಿ ಎಲ್ಲವೂ ಛಿದ್ರಛಿದ್ರವಾಗಲಿದೆ.

ಕೆಲವೇ ದಿನಗಳಲ್ಲಿ ಈ ಮಹಾ ಮಾಸ್ಟರ್​​ ಪ್ಲಾನ್​​ ಅನ್ನ ಲಾಂಚ್​ ಮಾಡಲು ಉಗ್ರರು ಸಂಚು ರೂಪಿಸಿದ್ರು ಅನ್ನೋದು ಒಂದ್ಕಡೆಯಾದ್ರೆ, ಬ್ಲಾಸ್ಟ್ ಮಾಡಲು ಶಂಕಿತ ಉಗ್ರರು ಟಾರ್ಗೆಟ್​ ಮಾಡಿದ ಜಾಗ ಬಿಎಂಟಿಸಿ ನಿಲ್ದಾಣ, ಸೇರಿ ಹಲವು ಪ್ರಮುಖ ಸ್ಥಳಗಳಾಗಿತ್ತು. ಇದಕ್ಕಾಗಿ ಜೈಲಿನಲ್ಲಿಯೇ ಆರೋಪಿಗಳು ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ರು ಎಂಬುವುದು ತನಿಖೆ ವೇಳೆ ತಿಳಿದುಬಂದಿದೆ.

ಅದೇನೇ ಆದ್ರೂ ಉಗ್ರರ ಮಹಾ ಸಂಚನ್ನ ಸಿಸಿಬಿ ಪೊಲೀಸರು ಟುಸ್​ ಪಟಾಕಿ ಮಾಡಿದ್ದಾರೆ. ಆದ್ರೆ ಈ ಉಗ್ರ ಕೃತ್ಯದ ಆಳ -ಅಗಲ ಮುಂದಿನ ಹಂತದ ತನಿಖೆಯಿಂದಷ್ಟೇ ಹೊರಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಫ್ಘಾನ್ ಮಾದರಿಯಲ್ಲೇ ಬೆಂಗಳೂರು ಬ್ಲಾಸ್ಟ್​​ ಮಾಡಲು ಸ್ಕೆಚ್​​.. ಈ ಸ್ಫೋಟಕ ಮಾಹಿತಿ ಹೊರಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2023/07/BMTC-Bus_Stop.jpg

Load More