newsfirstkannada.com

ಮಹಿಳೆಯರೇ ಕ್ಯಾಬ್​​ ಹತ್ತೋ ಮುನ್ನ ಹುಷಾರ್​​; ಯಾವುದೇ ಕಾರಣಕ್ಕೂ ಈ ಕೆಲಸ ಮಾಡಲೇಬೇಡಿ!

Share :

03-08-2023

    ಕ್ಯಾಬ್​ ಹತ್ತೋ ಮುನ್ನ ಹುಷಾರ್​​

    ಮಹಿಳೆಯರೇ ಹುಷಾರ್​ ಆಗಿರಿ!

    ಅಪರಿಚಿತರನ್ನು ನಂಬಲೇಬೇಡಿ

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ದಿಢೀರ್​ ಎಲ್ಲಿಗಾದ್ರೂ ಹೋಗಬೇಕು ಎಂದರೆ ತಕ್ಷಣ ನೆನಪಾಗೋದು ಆನ್​​ಲೈನ್​​ ಕ್ಯಾಬ್​ ಸರ್ವೀಸ್​​. ಬುಕ್ ಮಾಡಿದ ಕೂಡಲೇ ಕ್ಯಾಬ್​​ ಬರುತ್ತವೆ. ಕ್ಯಾಬ್​​ ಹತ್ತಿದ ಮೇಲೆ ಫೋನ್​​ನಲ್ಲೋ, ಪರ್ಸನಲ್​ ಆಗಿ ಯಾರಿಗಾದ್ರೂ ನಿಮ್ಮ ಸ್ಟೋರಿ ಹೇಳೋಕೆ ಶುರು ಮಾಡಿದ್ರೆ ಮುಗಿಯಿತು ಕಥೆ. ಕಾರಣ ಈ ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

ಇಬ್ಬರು ಸ್ನೇಹಿತೆಯರು! ಎಷ್ಟೋ ವರ್ಷಗಳ ಬಳಿಕ ಮೀಟ್‌ ಆದರು. ಪರಸ್ಪರ ಮೀಟ್ ಆಗುತ್ತಿದ್ದಂತೆ ಹಳೇ ನೆನಪಿನ ಬುತ್ತಿ ಓಪನ್‌ ಆಗಿತ್ತು. ಇಬ್ಬರು ಖುಷಯಿಂದ ಹೊಟೇಲ್ ಒಂದರಲ್ಲಿ ಜೊತೆಯಾಗಿ ಊಟ ಕೂಡ ಮಾಡಿದ್ರು. ನಂತರ ಜೊತೆಯಲ್ಲೇ ಹೋಗುವ ಎಂದು ಕ್ಯಾಬ್​ ಬುಕ್​ ಮಾಡಿದ್ರು. ಕೆಲವೇ ಕ್ಷಣಗಳಲ್ಲಿ ಕ್ಯಾಬ್​ ಕೂಡ ಬಂತು. ಅಲ್ಲಿಯವರೆಗೂ ಎಲ್ಲವೂ ಓಕೆ ಇದ್ದಿದ್ದು, ಇದಾದ ಮೇಲೆ ಅಸಲಿ ಕಥೆ ಶುರುವಾಯ್ತು.

ಕ್ಯಾಬ್‌ನಲ್ಲಿ ಕೂತಿದ್ದೇ ತಡ ಇಬ್ಬರೂ ಮಹಿಳೆಯರು ತಮ್ಮ ನೆನಪಿನ ಡಬ್ಬ ಓಪನ್‌ ಮಾಡಿದ್ರು. ಕ್ಯಾಬ್ ಡ್ರೈವರ್‌ ಇದ್ದಾನೆ ಅನ್ನೋದನ್ನೂ ಮರೆತು ಮಾತು ಶುರು ಮಾಡಿದ್ರು. ಅದರಲ್ಲೂ ಓರ್ವ ಮಹಿಳೆ ತನ್ನ ಜೀವನದ ನೋವನ್ನ ಹಂಚಿಕೊಳ್ಳೋದಕ್ಕೆ ಶುರು ಮಾಡಿದಳು. ಯಾಕಾದ್ರೂ ಮದುವೆಯಾದ್ನೋ, ಬಾಲ್ಯದ ಸ್ನೇಹಿತ ಶ್ರೀನಿವಾಸ್ ನನ್‌ ಲೈಫ್‌ ಪಾರ್ಟನರ್ ಆಗಿದ್ರೆ ಚೆನ್ನಾಗಿತ್ತು ಎಂದು ಮರುಗಲು ಶುರು ಮಾಡಿದಳು. ಅವನ ಜೊತೆಗಿನ ಪ್ರೀತಿಯ ಕತೆಯನ್ನ ಮೆಲುಕು ಹಾಕಿದಳು. ಹೀಗೆ ಮಾತಾಡಿದ ಮೇಲೆ ಇಬ್ಬರು ತಮ್ಮ ಸ್ಥಳ ಬಂದಾಗ ಕ್ಯಾಬ್​ ಇಳಿದು ಹೋದರು.

ಇಷ್ಟು ಹೊತ್ತು ನೀವು ಕೇಳಿದ್ದು ಕತೆಯ ಒಂದು ಭಾಗ. ಸಿಕ್ಕಿದ್ರು, ತಮ್ಮ ಬಗ್ಗೆ ಮಾತಾಡಿಕೊಂಡರು. ಕೊನೆಗೆ ಮನೆಗೆ ಹೋದರು. ಇದಾದ 4 ದಿನಕ್ಕೆ ಕತೆ ಹೇಳಿಕೊಂಡವಳಿಗೆ ಕರೆಯೊಂದು ಬಂದಿತ್ತು. ಇಲ್ಲೇ ಇರೋದು ಟ್ವಿಸ್ಟ್​​.

ಕ್ಯಾಬ್‌ನಲ್ಲಿ ಕತೆ ಕೇಳಿದವನು ಮಹಿಳೆಗೆ ತೋಡಿದ್ದ ಖೆಡ್ಡಾ!

ಮಹಿಳೆಗೆ ಶ್ರೀನಿವಾಸ್​ ಹೆಸರು ಹೇಳಿಕೊಂಡು ಕರೆ ಬಂದಿತ್ತು. ಯಾವುದೇ ಅನುಮಾನ ಪಡದೇ ಶ್ರೀನಿವಾಸ್‌ ಎಂದು ಕರೆ ಮಾಡಿದವನ ಜೊತೆ ಮಹಿಳೆ ಮಾತು ಶುರು ಮಾಡಿದಳು. ಆಗ ಕರೆ ಮಾಡಿದವನು ಬ್ಯುಸಿನೆಸ್​ ಮಾಡಬೇಕು ಹೆಲ್ಪ್​ ಮಾಡ್ತೀಯಾ ಎಂದ. ಇದಕ್ಕೆ ಮರುಗಿದ ಮಹಿಳೆ ಹಳೇ ಲವರ್​ ಎಂದು 22 ಲಕ್ಷ ಹಣ ಕೊಟ್ಟಳು. ಪದೇ ಪದೇ ಹಣ ಕೇಳಿದಾಗ ಮಹಿಳೆಗೆ ಅನುಮಾನ ಬಂದಿದೆ. ಹಾಗಾಗಿ ಪ್ರಶ್ನೆ ಕೇಳಲು ಶುರು ಮಾಡಿದಳು. ಆಗ ಸತ್ಯ ಗೊತ್ತಾದ ಕೂಡಲೇ ಮಹಿಳೆ ಕುಸಿದು ಬಿದ್ದಳು.

ಕರೆ ಮಾಡಿದವನು ಶ್ರೀನಿವಾಸನಲ್ಲ, ಕಿರಣ್‌ ಕುಮಾರ್‌!

ಎಂಥಾ ಆಘಾತಕಾರಿ ಸುದ್ದಿ ನೋಡಿ. ತಾನೇ ಶ್ರೀನಿವಾಸ ಅಂತ ಯಾಮಾರಿಸದವನು ಬೇಱರು ಅಲ್ಲ, ಆವತ್ತು ಈ ಮಹಿಳೆಯರು ಕತೆ ಹೇಳಬೇಕಾದರೆ ಕ್ಯಾಬ್‌ ಡ್ರೈವ್‌ ಮಾಡಿದ್ದವನು. ಈ ಸತ್ಯ ಗೊತ್ತಾದ ಮೇಲೆ ಮಹಿಳೆ ಏನೂ ಮಾಡೋಕೆ ಸಾಧ್ಯವಾಗಲಿಲ್ಲ. ಏಕೆಂದರೆ, ಕಿರಣ್​​​​ ಹಳೇ ಲವರ್​ ಕಥೆಯನ್ನು ಗಂಡನಿಗೆ ಹೇಳುವುದಾಗಿ ಹೆದರಿಸಿದ್ದ. ಮತ್ತೆ ಮಹಿಳೆಯಿಂದ 750 ಗ್ರಾಂ ಚಿನ್ನ ವಸೂಲಿ ಮಾಡಿದ್ದ. ಕೊನೆಗೆ ಏನೂ ಮಾಡೋಕಾಗದೆ ಮಹಿಳೆ ರಾಮಮೂರ್ತಿನಗರ ಪೊಲೀಸ್ ಸ್ಟೇಷನ್‌ ಮೆಟ್ಟಿಲು ಹತ್ತಿದ್ರು. ಇಷ್ಟಾಗುತ್ತಿದ್ದಂತೆಯೇ ಕ್ಯಾಬ್‌ನಲ್ಲಿ ಕತೆ ಕೇಳಿ ಯಾಮಾರಿಸಿದ ಡ್ರೈವರ್‌ ಕಿರಣ್​ಗೆ ಪೊಲೀಸರು ಖೆಡ್ಡಾ ತೋಡಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆಯರೇ ಕ್ಯಾಬ್​​ ಹತ್ತೋ ಮುನ್ನ ಹುಷಾರ್​​; ಯಾವುದೇ ಕಾರಣಕ್ಕೂ ಈ ಕೆಲಸ ಮಾಡಲೇಬೇಡಿ!

https://newsfirstlive.com/wp-content/uploads/2023/08/BNG_CAB-5.jpg

Load More