ಜಾಮೀನಿಗಾಗಿ ವಕೀಲರನ್ನೇ ಕಿಡ್ನ್ಯಾಪ್ ಮಾಡಿದ ಗ್ಯಾಂಗ್
ವಕೀಲರನ್ನು ಅರೆಬೆತ್ತಲೆ ಮಾಡಿದ್ದ ರೌಡಿಶೀಟರ್ಗಳು
ರಾತ್ರಿಯಿಂದ ಬೆಳಗಿನವರೆಗೆ ಕಿರುಕುಳ ಕೊಟ್ಟ ಆರೋಪ
ಬೆಂಗಳೂರು: ಜೈಲಿನಲ್ಲಿರೋ 8 ಕೈದಿಗಳಿಗೆ ಜಾಮೀನು ಕೊಡಿಸಬೇಕು. ಇದರ ಜೊತೆಗೆ 5 ಲಕ್ಷ ಹಣ ಕೊಡಬೇಕೆಂದು ರೌಡಿ ಗ್ಯಾಂಗ್, ವಕೀಲರನ್ನೇ ಕಿಡ್ನಾಪ್ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಚೆನ್ನಮ್ಮನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರೌಡಿ ಶೀಟರ್ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್, ಭರತ್ ಸೇರಿ ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಇದರಲ್ಲಿ ಆರೋಪಿಗಳಾದ ರಾಜೇಶ್, ಹರ್ಷಿತ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರೌಡಿಶೀಟರ್ ಹರ್ಷಿತ್ ಆ್ಯಂಡ್ ಗ್ಯಾಂಗ್ನಿಂದ ವಕೀಲನನ್ನು ಕಿಡ್ನಾಪ್ ಮಾಡಿ ಕಾರಿನ ಒಳಗೆ ಹಾಕಿಕೊಂಡಿದ್ದಾರೆ. ಬಳಿಕ ಲಾಯರ್ನ ಬಟ್ಟೆಗಳನ್ನು ಬಿಚ್ಚಿಸಿ ಅರೆ ಬೆತ್ತಲೆಯಲ್ಲಿ ಇಡೀ ರಾತ್ರಿ ಕೂರಿಸಿದ್ದಾರೆ. ಈ ವೇಳೆ ಜೈಲಿನಲ್ಲಿರುವ 8 ಜನರಿಗೆ ಬೇಲ್ ಕೊಡಿಸಬೇಕು. ಹಾಗೇ 5 ಲಕ್ಷ ಹಣ ಕೊಡಬೇಕು ಎಂದು ಬೆದರಿಸಿದ್ದಾರೆ. ಬಳಿಕ ಕಾರಿನಲ್ಲಿದ್ದ ಜಾಕ್ ರಾಡ್ ಮತ್ತು ಸ್ಪಾನರ್ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ರೌಡಿಗಳು ವಕೀಲನ ಮೇಲೆ ಬೆಳಗಿನ ಜಾವದವರೆಗೆ ಹಲ್ಲೆ ನಡೆಸಿ 10 ಸಾವಿರ ರೂಪಾಯಿ ಕಿತ್ತುಕೊಂಡಿದ್ದಾರೆ. ಈ ವಿಷ್ಯವನ್ನು ಪೊಲೀಸರಿಗೆ ಹೇಳಿದರೆ, ನಾವು ಹೇಳಿದಷ್ಟು ಹಣ ಕೊಡದಿದ್ದರೇ ನಮ್ಮ ಹುಡುಗರನ್ನು ಬಿಟ್ಟು ನಿನ್ನ ಹತ್ಯೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಸದ್ಯ ದೂರಿನನ್ವಯ ಕೋಳಿ ರಾಜೇಶ್ ಮತ್ತು ಹರ್ಷಿತ್ನನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ