newsfirstkannada.com

ಕಲಾಸಿಪಾಳ್ಯ ಮರ್ಡರ್​ಗೆ ಬಿಗ್​ ಟ್ವಿಸ್ಟ್.. ಗೆಳೆಯನ ಕೊಲೆಗೆ ಅಸಲಿ ಕಾರಣವೇನು?

Share :

15-11-2023

    ವಿಶ್ರಾಂತಿ ಮಾಡೋಕೆ ಅಂತ ಮಾರ್ಕೆಟ್ ಟೆರೆಸ್​ನತ್ತ ಹೋಗಿದ್ರು

    ಹಣ್ಣು ಕತ್ತರಿಸೋ ಚಾಕುವಿನಿಂದ ಕುಳ್ಳನ ಕತ್ತಿಗೆ ಚುಚ್ಚಿ, ಎಸ್ಕೇಪ್​

    ತನಿಖೆ ನಡೆಸಿದಾಗ ಅಸಲಿ ಮ್ಯಾಟರ್ ಕೇಳಿ ಪೊಲೀಸರೇ ಶಾಕ್

ಬೆಂಗಳೂರಿನ ಕಲಾಸಿಪಾಳ್ಯದ ತರಕಾರಿ ಮಂಡಿಯಲ್ಲಿ ನಡೆದ ಮರ್ಡರ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಹಣದ ವಿಚಾರವಾಗಿ ಗೆಳೆಯರ ಮಧ್ಯೆ ಜಗಳ ನಡೆದು ಕೊಲೆಯಾಗಿತ್ತು ಅಂತ ಹೇಳಲಾಗಿತ್ತು. ಆದ್ರೆ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಮ್ಯಾಟರ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಜೊತೆಗಿದ್ದ ಗೆಳೆಯನನ್ನೆ ಕೊಂದಿದ್ದೇಕೆ? ಕೊಲೆಯ ಅಸಲಿ ಕಾರಣ ಏನು?.

ಕಲಾಸಿಪಾಳ್ಯ.. ಯಾವಾಗ್ಲೂ ಜನರಿಂದ ಗಿಜಿಗುಡುವ ಪ್ರದೇಶ.. ಇಂಥದೊಂದು ಬ್ಯುಸಿ ಜಾಗದಲ್ಲಿ ಕಳೆದ 11ನೇ ತಾರೀಖು ಬೆಂಗಳೂರನ್ನೇ ಬೆಚ್ಚಿ ಬೀಳಿಸೋ ಭೀಕರ ಕೊಲೆಯೊಂದು ನಡೆದು ಹೋಗಿತ್ತು. ಆರಂಭದಲ್ಲಿ ಈ ಕೊಲೆಗೆ ಹಣದ ಮ್ಯಾಟರ್ ಕಾರಣ ಎನ್ನಲಾಗಿತ್ತು. ಆದ್ರೆ ಇದರ ಜಾಲ ಹಿಡಿದು ಹೊದ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿ ಬಿಚ್ಚಿಟ್ಟ ಕಥೆ ಕೇಳಿ ಪೊಲೀಸರೆ ಶಾಕ್​ ಆಗಿದ್ದಾರೆ. ಅಸಲಿಗೆ ಇದು ಎಣ್ಣೆ ಮತ್ತು ಹೆಣ್ಣಿನ ಖತರ್ನಾಕ್ ಕ್ರೈಮ್ ಕಹಾನಿ.

ಹೆಣ್ಣು, ಎಣ್ಣೇ ಮ್ಯಾಟರ್​.. ಕಲಾಸಿಪಾಳ್ಯ ತರಕಾರಿ ಮಂಡಿಯಲ್ಲಿ ಮರ್ಡರ್!

ಆರೋಪಿಗಳಲ್ಲಿನ ಒಬ್ಬನ ಹೆಸರು ವಿಜಯಕುಮಾರ್. ಇನ್ನೊಬ್ಬನ ಹೆಸರು ಸುಧಾರಣ್. ಇಬ್ಬರು ಪಕ್ಕದ ತಮಿಳುನಾಡಿನವರು. ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದ ಇಬ್ಬರೂ ಕಲಾಸಿಪಾಳ್ಯದ ತರಕಾರಿ ಮಂಡಿಯಲ್ಲಿ ಕೂಲಿ ಕೆಲಸ ಮಾಡ್ತಿದ್ದರು. ವಿಜಯ್​ಕುಮಾರ್​ಗೆ ಕುಡಿತದ ಚಟ ಇತ್ತು.. ಮದುವೆಯಾಗಿದ್ರೂ ಜವಾಬ್ದಾರಿ ಇರಲಿಲ್ಲ. ಹೀಗಾಗಿ 2015ರಲ್ಲೇ ವಿಜಯ್​ಕುಮಾರ್​​ನನ್ನ ರಿಹ್ಯಾಬಿಲಿಯೇಷನ್ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದ್ರೆ ಅಲ್ಲಿಂದ ಹೊರ ಬಂದ ವಿಜಯ್​ಕುಮಾರ್​​ಗೆ ಶಾಕ್ ಆಗಿತ್ತು. ಯಾಕಂದ್ರೆ ವಿಜಯ್​ಕುಮಾರ್ ಹೆಂಡತಿ ಇನ್ನೊಬ್ಬನ ಜೊತೆ ಮದುವೆಯಾಗಿದ್ದಳು.

ಇಂಟರೆಸ್ಟಿಂಗ್ ವಿಚಾರ ಏನಂದ್ರೆ ಈ ವಿಜಯ್​ಕುಮಾರ್ ಸ್ನೇಹಿತ ಸುಧಾರಣ್​ ವಿಜಯ್ ಪತ್ನಿಗೆ ಬೇರೊಬ್ಬರ ಜೊತೆ ಮತ್ತೊಂದು ಮದ್ವೆ ಮಾಡಿಸಿದ್ದ. ಈ ವಿಚಾರ ಗೊತ್ತಾಗ್ತಿದಂತೆ ವಿಜಯ್​​ಕುಮಾರ್ ಕೋಪ ನೆತ್ತಿಗೇರಿ ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದಾನೆ.

ಕೊಲೆಗೆ ಸಂಚು ಮೊದಲೇ ಪ್ಲಾನ್ ಮಾಡಿದ್ನಾ?

  • ನ.11ರಂದು ಕಲಾಸಿಪಾಳ್ಯ ಮಾರ್ಕೆಟ್​ನಲ್ಲಿ ಇಬ್ಬರೂ ಭೇಟಿ
  • ಆರೋಗ್ಯ ಸರಿ ಇಲ್ಲ ನೀನೇ ಕುಡಿ ಅಂತ ಕ್ವಾರ್ಟರ್ ಕೊಟ್ಟಿದ್ದ
  • ಬಳಿಕ ಸುಧಾಹರನ್​ಗೆ ಮತ್ತೊಂದು ಕ್ವಾರ್ಟರ್ ಸಹ ಕುಡಿಸಿದ್ದ
  • ವಿಶ್ರಾಂತಿ ಮಾಡೋಕೆ ಅಂತ ಮಾರ್ಕೆಟ್ ಟೆರೆಸ್​ನತ್ತ ಹೋಗಿದ್ರು
  • ಮೆಟ್ಟಿಲ ಮೇಲೆಯೇ ನಿದ್ದೆಗೆ ಜಾರಿಬಿಟ್ಟಿದ್ದ ಸುಧಾಹರನ್ @ ಕುಳ್ಳ
  • ಕುಳ್ಳನನ್ನ ಎಬ್ಬಿಸಿ 140 ರೂಪಾಯಿ ಕಾಣಿಸುತ್ತಿಲ್ಲ ಅಂತ ಜಗಳ
  • ಮಾತಿಗೆ ಮಾತು ಬೆಳೆದು ವಿಜಯ್ ಕಪಾಳಕ್ಕೆ ಹೊಡೆದ ಸ್ನೇಹಿತ
  • ಹಣ್ಣು ಕತ್ತರಿಸೋ ಚಾಕುವಿನಿಂದ ಕುಳ್ಳನ ಕತ್ತಿಗೆ ಚುಚ್ಚಿ, ಎಸ್ಕೇಪ್​

ಗೆಳೆಯನ ಸಂಸಾರದಲ್ಲಿ ಮೂಗು ತೂರಿಸಿದ್ದ ಸುಧಾರಣ್​ ಉದ್ದೇಶ ಏನಿತ್ತೋ ಗೊತ್ತಿಲ್ಲ. ಆದ್ರೆ ವಿಜಯ್​ಕುಮಾರ್ ಜೊತೆಗಿದ್ದವನನ್ನೆ ಕೊಲೆ ಮಾಡೋ ನಿರ್ಧಾರ ಕೈಗೊಂಡಿದ್ದು ದುರಂತವೇ ಸರಿ. ಕುಡಿತದ ಕಾರಣಕ್ಕೆ ವರ್ಷಗಳ ಕಾಲ ರಿಹ್ಯಾಬಿಲಿಯೇಷನ್ ಸೆಂಟರ್​​ನಲ್ಲಿದ್ದ ವಿಜಯ್ ಇದೀಗ ಕೋಪದ ಕೈಗೆ ಬುದ್ದಿ ಕೊಟ್ಟು ಜೈಲು ಸೇರಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಲಾಸಿಪಾಳ್ಯ ಮರ್ಡರ್​ಗೆ ಬಿಗ್​ ಟ್ವಿಸ್ಟ್.. ಗೆಳೆಯನ ಕೊಲೆಗೆ ಅಸಲಿ ಕಾರಣವೇನು?

https://newsfirstlive.com/wp-content/uploads/2023/11/MARKET_MURDER.jpg

Load More