newsfirstkannada.com

ಸಿವಿಲ್ ಡಿಫೆನ್ಸ್‌ ನಾಗೇಂದ್ರನ ಕೊನೆ ಆಸೆಯನ್ನು ಫೈಟ್ ಮಾಡಿ ಈಡೇರಿಸಿದ ತಂದೆ

Share :

08-06-2023

    ಡಿಫೆನ್ಸ್ ನಾಗೇಂದ್ರನ ತಂದೆ ನಿರ್ಧಾರ ನಿಜಕ್ಕೂ ಗ್ರೇಟ್‌

    ನಾಗೇಂದ್ರನ ಕೊನೆ ಆಸೆ ಈಡೇರಿಸಲು ತಂದೆಯ ಪಟ್ಟು

    ಯಾರಿಗೆ ಸಮಸ್ಯೆ ಆದ್ರೂ ಸ್ಪಂದಿಸಲು ಬರುತ್ತಿದ್ದ ನಾಗೇಂದ್ರ

ಬೆಂಗಳೂರು: ಈಗಿನ ಕಾಲದಲ್ಲಿ ಕಷ್ಟದಲ್ಲಿದ್ದಾಗ ಸ್ನೇಹಿತರು, ಸಂಬಂಧಿಕರು, ಒಡಹುಟ್ಟಿದವರೇ ಸಹಾಯಕ್ಕೆ ಬರೋದಿಲ್ಲ. ತಾನಾಯ್ತು, ತಮ್ಮ ಪಾಡಾಯ್ತು ಅಂತಾ ಪಕ್ಕಕ್ಕೆ ಜಾರಿಕೊಂಡು ಹೋಗ್ತಾರೆ. ಸ್ವಾರ್ಥ ತುಂಬಿದ ಈ ಲೋಕದಲ್ಲಿ ನಮ್ಮ ಜನರು ಸಮಸ್ಯೆಯಲ್ಲಿದ್ದವರು ಕಣ್ಣಿಗೆ ಬಿದ್ದರೂ ಮಾನವೀಯತೆ ಮರೆತು ವರ್ತಿಸುತ್ತಾರೆ. ಇಂತಹ ಬ್ಯೂಸಿ ಲೈಫ್‌ನಲ್ಲಿ ಸಿವಿಲ್ ಡಿಫೆನ್ಸ್ ನಾಗೇಂದ್ರ ಎಲ್ಲರಿಗೂ ಮಾದರಿಯಾಗಿದ್ದರು.

ಬೆಂಗಳೂರಲ್ಲಿ ಮಳೆ ಬಂದಾಗ ಎಲ್ಲೇ ಸಮಸ್ಯೆ ಆದರೂ ಎಲ್ಲರಿಗಿಂತ ಮೊದಲು ರೀಚ್ ಆಗ್ತಾಯಿದ್ದದ್ದೇ ಈ ನಾಗೇಂದ್ರ. ಅದರಲ್ಲೂ ವಿದ್ಯಾರಣ್ಯಪುರದ ಆಸುಪಾಸಿನಲ್ಲಿ ಯಾರಿಗೆ ಸಮಸ್ಯೆ ಆದ್ರೂ ಮೊದಲು ಸ್ಪಂದಿಸುತ್ತಾ ಇದ್ದಿದ್ದೇ ನಾಗೇಂದ್ರ. ಇಂತಹ ಸಮಾಜಮುಖಿ, ಪರೋಪಕಾರಿ, ಕರುಣಾಮಯಿ ನಾಗೇಂದ್ರ ಅವರು ಇಂದು ನಮ್ಮೊಂದಿಗಿಲ್ಲ.

ಸಿವಿಲ್ ಡಿಫೆನ್ಸ್​ ಅನ್ನೇ ತನ್ನ ಜೀವ ಅಂದುಕೊಂಡು ಎಲ್ಲರಿಗೂ ಸಹಾಯ ಮಾಡಿಕೊಂಡಿದ್ದ ನಾಗೇಂದ್ರ ಅವರು ನಿನ್ನೆ ಬೆಳಗ್ಗೆ ಕೂತಿದ್ದ ಜಾಗದಲ್ಲಿಯೇ ಕುಸಿದು ಬಿದ್ದಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಬದುಕಿನುದ್ದಕ್ಕೆ ಮತ್ತೊಬ್ಬರಿಗೆ ಸಹಾಯ ಮಾಡಲು ತುಡಿಯುತ್ತಿದ್ದ ನಾಗೇಂದ್ರ ಅವರು ಸಾವಿನಲ್ಲೂ ಸಾರ್ಥಕತೆ ಮೆರೆಯುತ್ತಿದ್ದಾರೆ. ನಾಗೇಂದ್ರ ಅವರ ಇಚ್ಛೆಯಂತೆ ದೇಹದಾನ ಮಾಡಲು ಅವರ ತಂದೆ ಮಣಿಮಾರಂ ಹೋರಾಟ ನಡೆಸಿದ್ದಾರೆ.

ಡಿಫೆನ್ಸ್ ನಾಗೇಂದ್ರ ಅವರ ಕೊನೆ ಆಸೆ ಈಡೇರಿಸಲು ಅವರ ತಂದೆ ಆರ್‌.ಮಣಿಮಾರಂ ನಿರ್ಧರಿಸಿದ್ದಾರೆ. ನಿನ್ನೆ ನಗರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನಾಗೇಂದ್ರ ಅವರ ಮೃತದೇಹವನ್ನು ಇರಿಸಲಾಗಿತ್ತು. ಇಲ್ಲಿ ವೈದ್ಯರು, ಪೊಲೀಸರು ಪೋಸ್ಟ್ ಮಾರ್ಟಂ ಮಾಡಲು ಮುಂದಾಗಿದ್ದರು. ಪೋಸ್ಟ್ ಮಾರ್ಟಂ ಮಾಡಿದರೆ ದೇಹದಾನ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಾಗೇಂದ್ರ ಅವರ ತಂದೆ ಮಣಿಮಾರಂ ಪೊಲೀಸರು, ಡಾಕ್ಟರ್ ಬಳಿ ಯಾವುದೇ ಕಾರಣಕ್ಕೂ ಪೋಸ್ಟ್ ಮಾರ್ಟಂ ಮಾಡದಂತೆ ಪಟ್ಟು ಹಿಡಿದಿದ್ದಾರೆ.

ಕೊನೆಗೆ ನಾಗೇಂದ್ರನ ಇಚ್ಛೆಯಂತೆ ಇಂದು ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲು ತೀರ್ಮಾನಿಸಲಾಗಿದೆ. ಬದುಕಿದ್ದಾಗ ಬಡವರು, ನೊಂದವರು, ಕಷ್ಟದಲ್ಲಿದ್ದವರಿಗೆ ಆಪ್ತಮಿತ್ರನಂತಿದ್ದ ಡಿಫೆನ್ಸ್ ನಾಗೇಂದ್ರ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು ನಿಜಕ್ಕೂ ಗ್ರೇಟ್. ತನ್ನ ಮಗನ ಕೊನೇ ಆಸೆ ಈಡೇರಿಸಲು ದೇಹದಾನದಂತ ಕಠಿಣ ನಿರ್ಧಾರ ತೆಗೆದುಕೊಂಡ ನಾಗೇಂದ್ರನ ತಂದೆ ಆರ್‌.ಮಣಿಮಾರಂ ಅವರಿಗೂ ಒಂದು ಸಲಾಂ ಹೇಳಲೇಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸಿವಿಲ್ ಡಿಫೆನ್ಸ್‌ ನಾಗೇಂದ್ರನ ಕೊನೆ ಆಸೆಯನ್ನು ಫೈಟ್ ಮಾಡಿ ಈಡೇರಿಸಿದ ತಂದೆ

https://newsfirstlive.com/wp-content/uploads/2023/06/Nagendra-1-1.jpg

Load More