ಕಸ್ಟಮ್ಸ್ ಅಧಿಕಾರಿಗಳಿಂದ ವಿಶೇಷ ಕಾರ್ಯಾಚರಣೆ
ಒಟ್ಟು 2 ಕೆಜಿ ಚಿನ್ನ ವಶಕ್ಕೆ ಪಡೆದಿರುವ ಅಧಿಕಾರಿಗಳು
ಅಂಗಿಯ ಕಾಲರ್, ಪ್ಯಾಂಟ್ ಜಿಪ್ನಲ್ಲೂ ಚಿನ್ನ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳಿಂದ 1.26 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 2 ಕೆಜಿ ಚಿನ್ನವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಗುರುವಾರ ತಡರಾತ್ರಿ ಬ್ಯಾಂಕಾಕ್ನಿಂದ ಬಂದ ಮೂವರು ಪ್ರಯಾಣಿಕರು ಮತ್ತು ಕೊಲಂಬೋದಿಂದ ಬಂದ ಇಬ್ಬರು ಮಹಿಳಾ ಪ್ರಯಾಣಿಕರ ತಪಾಸಣೆ ವೇಳೆ ದಾಖಲೆ ಇಲ್ಲದ ಚಿನ್ನ ಪತ್ತೆ ಆಗಿತ್ತು.
ಚಿನ್ನದ ಸರಗಳನ್ನ ಅಂಗಿಯ ಕಾಲರ್ ಹಾಗೂ ಒಳ ಉಡುಪಿನಲ್ಲಿ ಬಚ್ಚಿಟ್ಟಿಕೊಂಡು ಕಳ್ಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಸರದ ಮೌಲ್ಯ ಒಟ್ಟು 58,39,806 ರೂಪಾಯಿ ಎನ್ನಲಾಗಿದೆ. ಇನ್ನು ಮಸ್ಕಟ್‌ನಿಂದ ಶುಕ್ರವಾರ ಆಗಮಿಸಿದ ವ್ಯಕ್ತಿಯೊಬ್ಬನ ಸೋಂಟದ ಬೆಲ್ಟ್ನಲ್ಲಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಸುಮಾರು 1.113 ಗ್ರಾಂ ತೂಕದ ಚಿನ್ನದ ಬಿಸ್ಕೆಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅದರ ಮೌಲ್ಯ 68,18,812 ಎಂದು ಅಂದಾಜಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ