newsfirstkannada.com

ಫೇಸ್​​ಬುಕ್​​ ಬಳಸೋ ಹೆಣ್ಣುಮಕ್ಕಳೇ ಹುಷಾರ್; ಯಾವುದೇ ಕಾರಣಕ್ಕೂ ಈ ಕೆಲಸ ಮಾಡಲೇಬೇಡಿ!

Share :

02-08-2023

    ಸೋಷಿಯಲ್​ ಮೀಡಿಯಾದಲ್ಲಿ ಪರಿಚಯ

    ಪ್ರೀತಿಸಿದ ಹುಡುಗಿಗೆ ಕೈಕೊಟ್ಟ ಕಿಡಿಗೇಡಿ..!

    ನಂಬಿಸಿ ಮೋಸ ಮಾಡಿ ಬಳಸಿಕೊಂಡ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮಾಂಕುರವಾಗುವುದು. ಪ್ರೀತಿಯಲ್ಲಿ ಬೀಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಂತೆ ಇಲ್ಲಿ ಮೋಸ ಹೋದವರ ಸಂಖ್ಯೆ ಕೂಡಾ ಅಷ್ಟೇ ಇದೆ. ಈಗ ಇದೇ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಕಿರಾತಕನಿಂದ ಯುವತಿ ಮೋಸ ಹೋಗಿದ್ದಾಳೆ. ಅಷ್ಟೇ ಅಲ್ಲ ಆತನ ದುಷ್ಟತನದಿಂದ ನರಳಿ ಹೋಗಿದ್ದಾಳೆ.

ಒಬ್ಬ ಡ್ಯಾನ್ಸ್ ಮಾಸ್ಟರ್ ಆಗಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡ್ತಿದ್ದ. ಡ್ಯಾನ್ಸ್​ ಮಾಸ್ಟರ್​​​ ಸ್ಟೋರಿಯ ಮೈನ್​​ ವಿಲನ್​. ಇನ್ನು ಇವ್ರು ಸಂತೋಷ್ ಅಂಡ್​ ಶಶಿ ಪಾಪಿ ಜೊತೆ ಸೇರಿ ಪಾಪಕೃತ್ಯ ನಡೆಸಿದವರು.

ಪ್ರೀತಿ ಹೆಸರಲ್ಲಿ ಇಲ್ಲಿ ಎಂಥಾ ಮೋಸ ನಡೆದಿದೆ ಗೊತ್ತಾ? ಆ್ಯಂಡಿ ಜಾರ್ಜ್ ಎರಡು ವರ್ಷದ ಹಿಂದೆ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಸಾಮಾಜಿಕ‌ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದ. ಪರಿಚಯ ಮಾಡಿಕೊಂಡು ಯುವತಿಗೆ ನಾ‌ನು ಪ್ರೀತಿಸುತ್ತಿದ್ದೇನೆ ಎಂದು ನಂಬಿಸಿ ಸುತ್ತಾಡಿಸಿದ್ದ. ಜೊತೆಗೆ ಆಕೆ ಖಾಸಗಿ ಪೊಟೋಗಳನ್ನ ಇಟ್ಕೊಂಡು, ಅವುಗಳನ್ನ ವೈರಲ್ ಮಾಡ್ತಿನಿ ಎಂದು ಆಕೆಯನ್ನ ಕರಿಸಿ ಹಲವು ಬಾರಿ ಆಕೆ ಮೇಲೆ ಅತ್ಯಾಚಾರ ಕೂಡಾ ಎಸಗಿದ್ದಾನೆ.

ಪೊಲೀಸ್​​ ಬಲೆಗೆ ಸಿಕ್ಕಿಬಿದ್ದ ಆರೋಪಿಗಳು

ಇನ್ನೂ ಈ ಖರ್ತನಾಕ್ ಆಸಾಮಿ, ಆಕೆ ಖಾಸಗಿ ವಿಡಿಯೋಗಳನ್ನ ಸಹ ಇಡ್ಕೊಂಡಿದ್ದ. ಅದನ್ನೆ ಬಂಡವಾಳವಾಗಿ‌ ಮಾಡ್ಕೊಂಡು ಪ್ರತಿ ಬಾರಿ ಆಕೆಗೆ ಕಾಲ್ ಮಾಡಿ ವಿಡಿಯೋ ಶೇರ್ ಮಾಡೋದಾಗಿ‌ ಬೆದರಿಕೆ ಹಾಕಿ‌ ಕರೆಸಿಕೊಂಡು ಅತ್ಯಾಚಾರ ಮಾಡುತ್ತಿದ್ದ, ಜೊತೆಗೆ ತನ್ನ ಸ್ನೇಹಿತ ಸಂತೋಷ್, ಶಶಿಯನ್ನು ಬಿಟ್ಟು ಯುವತಿಯ ಮೇಲೆ ಅತ್ಯಾಚಾರ ಮಾಡಿಸಿದ್ದಾನಂತೆ. ಇದ್ದರಿಂದ ಆತಂಕಗೊಂಡು ಆ್ಯಂಡಿ ಚಾರ್ಜ್​​ನಿಂದ ಆಕೆ ದೂರವಾಗಿದ್ದಳು. ಆದರೆ, ಆಕೆ ದೂರ ಆಗಿದ್ದನ್ನು ಸಹಿಸಲಾಗದೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿ ತನ್ನ ಸ್ನೇಹಿತರಿಗೆ ಆ್ಯಂಡಿ ಶೇರ್ ಮಾಡಿದ್ದಾನೆ. ಇದರಿಂದ ಬೇಸತ್ತ ಯುವತಿ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಸದ್ಯ ಪೊಲೀಸರು ಆರೋಪಿ ಆ್ಯಂಡಿ ಜಾರ್ಜ್, ಸಂತೋಷ್, ಶಶಿ ಬಂಧಿಸಿ. ಅವ್ರ ಬಳಿ ಇದ್ದ ಪೆನ್​ಡ್ರೈವ್​, ಮೊಬೈಲ್​ ವಶಕ್ಕೆ ಪಡೆದಿದ್ದಾರೆ.

ಇನ್ನಾದ್ರೂ ಪ್ರೀತಿಗೆ ಯೋಗ್ಯವಾದವರ ಜೊತೆ ಮಾತ್ರ ಪ್ರೀತಿ ಬಯಸಿ. ಇಲ್ಲವಾದಲ್ಲಿ ನಂಬಿಕೆ ದ್ರೋಹದ ಜೊತೆ ಮಾನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೇಸ್​​ಬುಕ್​​ ಬಳಸೋ ಹೆಣ್ಣುಮಕ್ಕಳೇ ಹುಷಾರ್; ಯಾವುದೇ ಕಾರಣಕ್ಕೂ ಈ ಕೆಲಸ ಮಾಡಲೇಬೇಡಿ!

https://newsfirstlive.com/wp-content/uploads/2023/08/Crime-news_Bng.jpg

Load More