newsfirstkannada.com

ಆಷಾಢದಲ್ಲಿ ಏರಿಕೆ ಕಂಡ ಹೂವಿನ ದರಗಳು! ಕನಕಾಂಬರ ಮುಟ್ಟುವಂಗಿಲ್ಲ, ಮಲ್ಲಿಗೆ ಮುಡಿಯೋಂಗಿಲ್ಲ

Share :

Published July 5, 2023 at 9:23am

Update July 5, 2023 at 9:40am

    ಶಾಕ್​ ಮೇಲೆ ಶಾಕ್​​ ನೀಡಿದ ಹೂವಿನ ದರಗಳು

    ಆಷಾಢದಲ್ಲೂ ಹೂಗಳು ತುಂಬಾ ದುಬಾರಿಯಾಗಿವೆ

    ಪ್ರತಿ ಕೆಜಿ ಹೂವಿನ ದರ ಎಷ್ಟು? ಇಲ್ಲಿದೆ ಮಾಹಿತಿ

ಒಂದೆಡೆ ರಾಜ್ಯದಲ್ಲಿ ಮಳೆಯ ಅವಾಂತರ ಜೋರಾಗಿದೆ. ಕೆಲವೆಡೆ ಆರೆಂಜ್​ ಅಲರ್ಟ್​​ ಘೋಷಣೆ ಮಾಡುವಷ್ಟು ವರುಣ ಅಬ್ಬರಿಸಿದ್ದಾನೆ. ಮತ್ತೆ ಹಲವೆಡೆ ಶಾಲಾ ಕಾಲೇಜಿಗೆ ರಜೆ ನೀಡುವಷ್ಟು ತನ್ನ ಪ್ರತಾಪ ತೋರಿಸಿದ್ದಾನೆ. ಇದರ ನಡುವೆ ಮಳೆರಾಯ ಹೂ ಪ್ರಿಯರಿಗೆ ಶಾಕ್ ಕೊಟ್ಟಿದ್ದಾನೆ.

ಹೌದು. ಆಷಾಢದಲ್ಲೂ ಹೂಗಳು ತುಂಬಾ ದುಬಾರಿಯಾಗಿವೆ. ಮುಂಗಾರು ಮಳೆಯ ಕೊರತೆಯಿಂದಾಗಿ ಹೂವಿನ ಫಸಲಿನಲ್ಲಿ ಗಣನೀಯ ಇಳಿಕೆ ಕಂಡಿದೆ. ಇನ್ನು ಹೂ ಕೊಂಡು ಕೊಳ್ಳಲು ಮುಂದಾದವರಿಗೆ ಹೂವಿನ ದರ ಶಾಕ್​ ಕೊಟ್ಟಿದೆ.

ಸಾಮಾನ್ಯವಾಗಿ ಆಷಾಢದಲ್ಲಿ ಹೂವಿನ ದರ ಕೊಂಚ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಕಡಿಮೆ ಬೆಲೆಯಲ್ಲಿ ಹೂವು ಸಿಗಬೇಕಿತ್ತು. ಆದ್ರೆ ಈ ಬಾರಿ ಮಳೆಯಿಂದಾಗಿ ಹೂಗಳ ಬೆಲೆ ಡಬಲ್ ಆಗಿದೆ. ಜನರಿಗೆ ಹೂವಿನ ಒನ್ ಟು ಡಬಲ್ ರೇಟ್ ನೋಡಿ ಶಾಕ್ ಆಗಿದೆ.

ಅಂದಹಾಗೆಯೇ ಪ್ರತಿ ಕೆಜಿ ಹೂವಿನ ದರ ಎಷ್ಟು..? 

ಸದ್ಯ ಮಲ್ಲಿಗೆಯ ಬೆಲೆ ನೋಡುವುದಾದರೆ, ಮಾರುಕಟ್ಟೆಯಲ್ಲಿ ಕೆ.ಜಿ 1,200 ರೂಪಾಯಿಯಷ್ಟು ಇದೆ. ಅತ್ತ ಕನಕಾಂಬರ ಹೂವಿನ ಬೆಲೆ 2,000 ರೂಪಾಯಿ ಆಗಿದೆ. ಸೇವಂತಿಗೆ 400 ರೂಪಾಯಿಗೆ ಏರಿಕೆಯಾಗಿದೆ. ಚೆಂಡು ಹೂವು 200 ರೂಪಾಯಿಗೆ ಸಿಗುತ್ತಿದೆ. ಸುಗಂಧರಾಜ 200 ರೂಪಾಯಿಯಷ್ಟಾಗಿದೆ. ಇನ್ನು ಮಲ್ಲಿಗೆ ಹಾರ (ಒಂದು ಜೊತೆ) 800 ರೂ. ನಿಂದ 1,000 ರೂ.ಗಳಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಷಾಢದಲ್ಲಿ ಏರಿಕೆ ಕಂಡ ಹೂವಿನ ದರಗಳು! ಕನಕಾಂಬರ ಮುಟ್ಟುವಂಗಿಲ್ಲ, ಮಲ್ಲಿಗೆ ಮುಡಿಯೋಂಗಿಲ್ಲ

https://newsfirstlive.com/wp-content/uploads/2023/07/Flower.jpg

Load More