newsfirstkannada.com

ತಮ್ಮದೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಬೊಮ್ಮಾಯಿ ಗರಂ; ದಾಖಲೆ ಕೊಟ್ಟು ಮಾತನಾಡಿ ಎಂದು ಎಚ್ಚರಿಕೆ

Share :

15-06-2023

    ಹೊಂದಾಣಿಕೆ ರಾಜಕಾರಣದ ಆರೋಪ ಮಾಡಿದ್ದ ಸಂಸದರು

    ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಅವಶ್ಯಕತೆಯಿಲ್ಲ

    ರಾಜಕಾರಣದಲ್ಲಿ ಬೇರೆ ಪಕ್ಷದ ಸ್ನೇಹಿತರಿರುವುದು ಸಾಮಾನ್ಯ

ಬೆಂಗಳೂರು: ಹೊಂದಾಣಿಕೆ ರಾಜಕಾರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಸಂಸದ ಪ್ರತಾಪ್ ಸಿಂಹ ಅವರು ದಾಖಲೆಗಳನ್ನು ನೋಡಿ ಮಾತನಾಡಬೇಕು. ಸಿಎಂ ಸಿದ್ದರಾಮಯ್ಯ ವಿರುದ್ಧ 5 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ 5 ಕೇಸ್‌ಗಳಲ್ಲಿ ಸಿದ್ದರಾಮಯ್ಯನವರೇ ಆರೋಪಿಯಾಗಿದ್ದಾರೆ. 60 ಕೇಸ್‌ಗಳನ್ನು ಎಸಿಬಿಯಿಂದ ಲೋಕಾಯುಕ್ತ ಇಲಾಖೆಗೆ ವರ್ಗಾಯಿಸಿದ್ದೆವು ಎಂದು ಸ್ಪಷ್ಟನೆ ನೀಡಿದರು.

ನನ್ನ ಬದುಕಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮುಂದೆನು ಮಾಡುವುದಿಲ್ಲ. ಹೊಂದಾಣಿಕೆ ರಾಜಕಾರಣದ ಅವಶ್ಯಕತೆಯೂ ನನಗಿಲ್ಲ. ರಾಜಕೀಯದಲ್ಲಿ ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡುವುದು ಸರ್ವೇ ಸಾಮಾನ್ಯ. ಎಲ್ಲ ಪಕ್ಷಗಳಲ್ಲೂ ಎಲ್ಲರಿಗೂ ಸ್ನೇಹಿತರು ಇದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಪ್ರತಾಪ್ ಸಿಎಂ ಆರೋಪ ಏನಾಗಿತ್ತು..?

ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್​ನವರು ಬಿಟ್ ಕಾಯಿನ್ ಹಗರಣ ಎಂದರು. 40 ಪರ್ಸೆಂಟ್ ಅಂದ್ರು, ಪಿಎಸ್​ಐ ಹಗರಣ ಎಂದರು. ಸ್ವಾಮಿ, ಸಿದ್ದರಾಮಯ್ಯ ಅವರೇ ನೀವು ತನಿಖೆಗೆ ಆದೇಶ ಮಾಡಿ. ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ಅರ್ಕಾವತಿ ಡಿನೋಟಿಫಿಕೇಷನ್, ರೀಡೋ ಎನ್ನುತ್ತಾರೆ. ನಿಮ್ಮ ವಿರುದ್ಧ ಏನೋ ಬಿಟ್ಟು ಬಿಡ್ತೀವಿ ಅನ್ನೋ ರೀತಿಯಲ್ಲಿ ತೋಳ ಬಂತು ತೋಳ ಕಥೆ ಹೇಳ್ತಾರೆ, ಆದರೆ ಬಿಡಲ್ಲ. ನೀವು ಅಧಿಕಾರಕ್ಕೆ ಬಂದ ಕೂಡಲೇ ಈ ಕಥೆ ಹೇಳ್ತೀರಿ. ಅಂದರೆ ನೀವೆಲ್ಲ ಹೊಂದಾಣಿಕೆಯಲ್ಲಿದ್ದೀರಾ? ಸೀನಿಯರ್ಸ್ ಅಡ್ಜೆಸ್ಟ್​ಮೆಂಟ್​ನಲ್ಲಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮ್ಮದೇ ಸಂಸದ ಪ್ರತಾಪ್ ಸಿಂಹ ವಿರುದ್ಧ ಬೊಮ್ಮಾಯಿ ಗರಂ; ದಾಖಲೆ ಕೊಟ್ಟು ಮಾತನಾಡಿ ಎಂದು ಎಚ್ಚರಿಕೆ

https://newsfirstlive.com/wp-content/uploads/2023/06/BASAVARAJ_BOMMAI-1.jpg

Load More