newsfirstkannada.com

ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎನ್ನುವ ಕಾಂಗ್ರೆಸ್​ನ ಟೀಕೆಗೆ ಹೆಚ್​.ಡಿ ಕುಮಾರಸ್ವಾಮಿ ತಿರುಗೇಟು.. ಏನಂದ್ರು ಗೊತ್ತಾ..?

Share :

Published September 9, 2023 at 2:58pm

    ಕಾಂಗ್ರೆಸ್​ನವರು ಹೇಳಿಕೆ ಕೊಡುವಾಗ ಅದ್ದುಬಸ್ತಿನಲ್ಲಿರುವುದು ಸೂಕ್ತ

    2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಬಂದಿತ್ತು- ಹೆಚ್​ಡಿಕೆ

    ಕಾಂಗ್ರೆಸ್​ ವಿರುದ್ಧ ಮಾಜಿ ಸಿಎಂ HD ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎನ್ನುವ ಸಚಿವ ದಿನೇಶ್​ ಗುಂಡೂರಾವ್​ ಹೇಳಿಕೆಗೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. 2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಬಂದಿತ್ತೆಂದು ನೆನಪು ಮಾಡಿಕೊಳ್ಳಿ ಎಂದು ಹೆಚ್​ಡಿಕೆ ಕಿಡಿ ಕಾರಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾತನಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಯವರು, ಕಾಂಗ್ರೆಸ್​ ನಾಯಕರಿಗೆ ಮನವಿ ಮಾಡುವುದು ಏನೆಂದರೆ, ಈಗ ಅಧಿಕಾರದಲ್ಲಿದ್ದೀರಿ. ಜನರು ನಿಮಗೆ ಆಶೀರ್ವಾದ ಮಾಡಿದ್ದಾರೆ. ಅವರಿಗಾಗಿ ಒಳ್ಳೆಯ ಕೆಲಸ ಮಾಡಿ, ಇದಕ್ಕೆ ನಮ್ಮ ತಕರಾರು ಏನು ಇಲ್ಲ. ನಮ್ಮ ಪಕ್ಷದ ನಿಲುಗಳ ಬಗ್ಗೆ ನಿಮ್ಮ ಹೇಳಿಕೆಗಳಿವೆಯಲ್ಲ ಅದಕ್ಕೆ ಸ್ವಲ್ಪ ಅದ್ದುಬಸ್ತಿನಲ್ಲಿರುವುದು ಸೂಕ್ತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿನೇಶ್ ಗುಂಡೂರಾವ್ ಅವರ ಹೆಸರನ್ನು ಹೇಳದೇ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. 2018ರಲ್ಲಿ ಯಾವ ಅನ್ನ ಹಳಸಿತ್ತು, ಯಾವ ನಾಯಿ ಬಂದಿತ್ತು ಎಂದು ಸ್ವಲ್ಪ ಅದನ್ನು ನೆನಪು ಮಾಡಿಕೊಳ್ಳಿ. ಇದು ರಾಜಕಾರಣದಲ್ಲಿ ನಡೆಯುತ್ತಿರುತ್ತದೆ ಎಂದು ಸಚಿವ ಗುಂಡೂರಾವ್​ ವಿರುದ್ಧ ಹೆಚ್​ಡಿಕೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ನಿನ್ನೆ ತಮ್ಮ ಅಧಿಕೃತ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ರಾಜ್ಯದಲ್ಲಿ BJP-JDS ಮೈತ್ರಿ, ಎರಡೂ ಪಕ್ಷದವರಿಗೂ ಅನ್ನ ಹಳಸಿತ್ತು. ನಾಯಿ ಹಸಿದಿತ್ತು ಎಂಬಂತಾಗಿದೆ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದರು. ಸದ್ಯ ಇದಕ್ಕೆ ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎನ್ನುವ ಕಾಂಗ್ರೆಸ್​ನ ಟೀಕೆಗೆ ಹೆಚ್​.ಡಿ ಕುಮಾರಸ್ವಾಮಿ ತಿರುಗೇಟು.. ಏನಂದ್ರು ಗೊತ್ತಾ..?

https://newsfirstlive.com/wp-content/uploads/2023/09/HD_KUMARASWAMY_1.jpg

Load More