ನಂಬ್ತೀರಾ? ಬಾಡಿಗೆಗೆ ಸಿಗ್ತಾನೆ ಪಿಒಪಿ ಗಣೇಶ
ಸರ್ಕಾರ ಪಿಒಪಿ ಗಣಪನಿಗೆ ನಿಷೇಧ ಹೇರಿದೆ
ಕೆರೆ ಮಾಲಿನ್ಯವು ತಡೆಗಟ್ಟಲು ಇದೆಂಥಾ ಐಡಿಯಾ
ಗೌರಿ-ಗಣೇಶಕ್ಕೆ ದಿನಗಣನೇ ಆರಂಭವಾಗಿದೆ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸಂಭ್ರಮ, ಸಡಗರಕ್ಕೆ ಸಿದ್ಧತೆ ಜೋರಾಗಿದೆ. ಗಣೇಶ ಮೂರ್ತಿಗಳಿಗಾಗಿ ಅಡ್ವಾನ್ಸ್ ಬುಕ್ಕಿಂಗ್ ಮಾಡ್ತಿದ್ದಾರೆ. ಸಿಟಿಯ ಅಂಗಡಿಗಳು ಮಕ್ಕಳು ಯುವಕರಿಂದ ಫುಲ್ ರಶ್ ಆಗಿದೆ. ಆದರೆ ಮಣ್ಣಿನ ಮೂರ್ತಿಗಳ ತಯಾರಿ ಬೇಡಿಕೆಯಷ್ಟು ಆಗ್ತಿಲ್ಲ. ಅತ್ತ ಸರ್ಕಾರ ಪಿಒಪಿ ಗಣಪನಿಗೆ ನಿಷೇಧ ಹೇರಿದೆ. ಅದಕ್ಕಾಗಿ ಹೊಸ ದಾರಿ ಹುಡುಕಿದ್ದಾರೆ ಗಣೇಶ ತಯಾರಕರು. ಮಾರಾಟ ಮಾಡುವ ಬದಲು ಪಿಒಪಿ ಗಣೇಶನ ಮೂರ್ತಿ ಬಾಡಿಗೆ ನೀಡಲು ಮುಂದಾಗಿದ್ದಾರೆ.
ಕೆರೆಗಳು ಕಲುಷಿತವಾಗುತ್ತೆ ಅಂತ ಪಿಒಪಿ ಗಣೇಶನ ಮೂರ್ತಿಗಳ ಮಾರಾಟಕ್ಕೆ ಸರ್ಕಾರ ನಿಷೇಧ ಹೇರಿದೆ. ಆದರೆ ನಿಷೇಧಕ್ಕೂ ಮೊದಲೇ ತಯಾರಿಸಿದ ಸಾಹಸ್ರರು ಮೂರ್ತಿಗಳು ತಯಾರಕರಿಗೆ ದೊಡ್ಡ ತಲೆನೋವು ತರಿಸಿದೆ. ಹೀಗಾಗಿ ಮಾರಾಟ ಮಾಡುವ ಬದಲು ಪಿಒಪಿ ಗಣೇಶನ ಮೂರ್ತಿ ಬಾಡಿಗೆ ನೀಡಲು ಮುಂದಾಗಿದ್ದಾರೆ.
ಪಿಒಪಿ ಗಣೇಶನ ಮೂರ್ತಿಯ ಜತೆಗೆ ಒಂದು ಮಣ್ಣಿನ ಮೂರ್ತಿಯನ್ನು ನೀಡ್ತಾರೆ. ಜನರು ಮೆರವಣಿಗೆಯವರೆಗೆ ಎರಡೂ ಜತೆಗಿರುತ್ತವೆ. ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುತ್ತಾರೆ. ಆಮೇಲೆ ಪಿಒಪಿ ಗಣೇಶನನ್ನು ಮಾಲೀಕರಿಗೆ ವಾಪಸ್ ನೀಡ್ತಾರೆ. ಇದರಿಂದ ಜನರ ಹಣವೂ ಇಳಿಯುತ್ತೆ. ಕೆರೆ ಮಾಲಿನ್ಯವು ತಡೆಗಟ್ಟು ಅಂತಾರೆ ಗಣೇಶ ಮೂರ್ತಿ ತಯಾರಕರು
ಬಾಡಿಗೆಗೆ ಗಣೇಶನ ಮೂರ್ತಿ ಲಭ್ಯ
1. ಮೂರ್ತಿಗಳ ಎತ್ತರ, ವಿನ್ಯಾಸದ ಮೇಲೆ ಬಾಡಿಗೆಗೆ ದರ ನಿಗದಿ ಮಾಡಲಾಗಿದೆ
2. ಸಾಮಾನ್ಯವಾಗಿ ದಿನಕ್ಕೆ 2 ಸಾವಿರದಿಂದ 10 ಸಾವಿರ ರೂ.ವರೆಗೆ ಬಾಡಿಗೆ ದರವಿದೆ
3. ಹಬ್ಬಕ್ಕೆ ಒಂದು ತಿಂಗಳ ಮುಂಚೆ ಬೆಂಗಳೂರಿನಲ್ಲಿ ಬಾಡಿಗೆ ಗಣಪನಿಗೆ ಭಾರಿ ಬೇಡಿಕೆ
4. ಬಾಡಿಗೆ ಪಡೆಯುವವರು ಮೂರ್ತಿಯ ಅಸಲು ಮೊತ್ತವನ್ನು ಠೇವಣಿ ಇಡಬೇಕು.
5. ಎಷ್ಟು ದಿನಕ್ಕೆ ಬೇಕೋ ಅಷ್ಟು ದಿನಗಳ ಬಾಡಿಗೆಗೆ ಮುಂಗಡವಾಗಿ ನೀಡಿ ತೆಗೆದುಕೊಂಡು ಹೋಗಬೇಕು
6. ಮೂರ್ತಿ ತೆಗೆದುಕೊಂಡು ಹೋಗುವ ಸಂಚಾರ ವೆಚ್ಚವನ್ನು ಗ್ರಾಹಕರೇ ನೀಡಬೇಕು
ಯುವಕರು-ಮಕ್ಕಳು ತಂಡೋಪತಂಡವಾಗಿ ಗಣಪನ ಮೂರ್ತಿ ಇರೋ ಅಂಗಡಿಗಳಿಗೆ ಭೇಟಿ ಕೊಡ್ತಿದ್ದಾರೆ. ಹಬ್ಬ ಹತ್ತಿರವಾಗ್ತಿದ್ದಂತೆ ರೇಟ್ ಕೂಡ ಹೆಚ್ಚಾಗ್ತಾ ಹೋಗೋದರಿಂದ ಈಗಿನಿಂದಲೇ ಗಣಪನ ಮೂರ್ತಿಗಳನ್ನ ಬುಕ್ಕಿಂಗ್ ಮಾಡ್ತಿದ್ದಾರೆ. ಅಲ್ಲದೆ ಪಿಒಪಿ ಬಾಡಿಗೆಗೆ ನಿರ್ಧಾರ ಬೆಸ್ಟ್ ಅಂತಿದ್ದಾರೆ ಜನರು
ಒಟ್ಟಿನಲ್ಲಿ ಒಂದು ಕಡೆ ಗಣಪನ ಹಬ್ಬಕ್ಕೆ ಗಣಪನ ಮೂರ್ತಿಗಳ ತಯಾರಿ ಜೊತೆಗೆ ಬುಕ್ಕಿಂಗ್ ಶುರುವಾಗಿದ್ರೆ, ಮತ್ತೊಂದೆಡೆ ಪಿಓಪಿ ಗಣಪನಿಗೆ ಕಡಿವಾಣ ಹಾಕಿರೋದು ವ್ಯಾಪಾರಿಗಳನ್ನ ಹೈರಾಣಾಗಿಸಿದೆ. ಸದ್ಯ ಗಣಪನ ಮೂರ್ತಿ ಮಾರಾಟ ಆಗಲಿ ಅಂತಾ ಸಣ್ಣ ಗಣಪ-ಗೌರಿಯ ಮೂರ್ತಿಗಳನ್ನ ಉಚಿತವಾಗಿ ಕೊಡೋದಕ್ಕೂ ವ್ಯಾಪಾರಿಗಳು ಚಿಂತನೆ ನಡೆಸಿದ್ದಾರೆ. ಇನ್ನು ಈ ಬಾರಿಯಿಂದ ಗಣಪನನ್ನ ರೆಂಟ್‌ಗೆ ನೀಡೋ ಹೊಸ ಪ್ಲಾನ್ ಕೂಡ ಮಾಡಿದ್ದು, ಪಿಓಪಿ ಗಣಪನ ರೆಂಟ್ ಪ್ಲಾನ್‌ಗೆ ಮತ್ತ್ಯಾವ ವಿಘ್ಣ ಬಾರದಿರಲಿ ಅಂತಾ ವ್ಯಾಪಾರಿಗಳು ವಿಘ್ನೇಶ್ವರನಿಗೆ ಪ್ರಾರ್ಥಿಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ