newsfirstkannada.com

ಬೆಳಗ್ಗೆ ಟಿಪ್​-ಟಾಪ್ ಆಗಿ ರೀಲ್ಸ್.. ಸಂಜೆ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ.. ಏನೆಲ್ಲಾ ಅನಾಹುತ ಮಾಡಿದ್ದಾನೆ ಆರೋಪಿ..?   

Share :

27-06-2023

    ಸುಮಾರು 25ಕ್ಕೂ ಹೆಚ್ಚು ವಾಹನಗಳಿಗೆ ಕಾರಿನಿಂದ ಗುದ್ದಿ ಜಖಂ

    ಐ20 ಕಾರ್​ನಿಂದಾಗಿ ಏರಿಯಾದ ಎಲ್ಲರು ಭಯಭೀತರು ಆಗಿದ್ದರು..!

    ಸ್ಥಳೀಯರು ಕೊನೆಗೆ ಐ20 ಕಾರನ್ನ ಚೇಸ್ ಮಾಡಿಯೇ ಬಿಟ್ಟರು..!

ಅದು ರಾತ್ರಿ ಸಮಯ ಊಟ ಮುಗಿಸಿದ ಏರಿಯಾದ ಜನರು ಹೊರಗಡೆ ವಾಕಿಂಗ್​ಗೆ ಅಂತ ಬಂದಿದ್ರು. ಇತ್ತ ಅಂಗಡಿ ಮಾಲೀಕರು ತಮ್ಮ ಅಂಗಡಿ ಬಾಗಿಲು ಮುಚ್ಚಿ ಮನೆ ಕಡೆ ಹೋಗುವ ತಯಾರಿಯಲ್ಲಿದ್ರು. ಆದ್ರೆ ಇದೇ ಸಮಯಕ್ಕೆ ಏರಿಯಾಗಿ ಎಂಟ್ರಿ ಕೊಟ್ಟ ಕಾರ್​ವೊದು ಎಲ್ಲರನ್ನೂ ಒಂದು ಕ್ಷಣ ದಂಗು ಬಡಿಸಿತ್ತು. ಯಾವುದು ಆ ಕಾರ್​?.

ಸರಿಸುಮಾರಿ ರಾತ್ರಿ 9:30ಕ್ಕೆ ಬೆಂಗಳೂರಿನ ಗಾಯಿತ್ರಿ ನಗರದ 7ನೇ ಕ್ರಾಸ್​ನಲ್ಲಿ ಕೆಲವರು ಎಂದಿನಂತೆ ಊಟ ಮುಗಿಸಿ ವಾಕಿಂಗ್​ಗೆ ಅಂತ ಮನೆಯಾಚೆ ಬಂದಿದ್ರು. ಇನ್ನು ಕೆಲವರು, ಅಂಗಡಿ ಮುಚ್ಚಿ ಮನೆ ಕಡೆ ಹೋಗೋಣ ಅಂತ ಅಂಗಡಿ ಆಚೆ ಇದ್ದ ಸಾಮಾಗ್ರಿಗಳನ್ನ ತೆಗೆದೊಳಗಿಡ್ತಿದ್ರು. ಈ ವೇಳೆ ಅಲ್ಲಿಗೆ ಬಂದ ನೀಲಿ ಬಣ್ಣದ ಐ20 ಕಾರ್ ಒಂದು ಕ್ಷಣ ಎಲ್ಲರನ್ನೂ ಭಯಭೀತರನ್ನಾಗಿಸಿತ್ತು. ಎಣ್ಣೆ ಏಟಲ್ಲಿ ಎದ್ವಾತದ್ವ ಡ್ರೈವಿಂಗ್ ಮಾಡಿದ ಪುಂಡರು ಸಿಕ್ಕ ಸಿಕ್ಕ ಗಾಡಿಗಳಿಗೆ ಡಿಕ್ಕಿ ಹೊಡೆದು ಸುಮಾರು 25ಕ್ಕೂ ಹೆಚ್ಚು ವಾಹನಗಳ ಜಖಂ ಗೊಳಿಸಿದ್ದರು.

ಕಾರ್​ನ ಅಡ್ಡಾ ದಿಡ್ಡಿ ಚಲಾಯಿಸಿದ ಪುಂಡ. ಈ ಹಿಂದೆ ಇದೇ ಏರಿಯಾದ ನಿವಾಸಿಯಾಗಿದ್ದ ಈತ ಇತ್ತೀಚೆಗೆ ಸುಬ್ರಮಣ್ಯ ನಗರಕ್ಕೆ ಶಿಫ್ಟ್ ಆಗಿದ್ದನಂತೆ. ಬಳಿಕ ಇವತ್ತು ತನ್ನ ಗೆಳೆಯನ ಜೊತೆಗೂಡಿದ ಈತ ಎಣ್ಣೆಯೋ ಗಾಂಜಾವೋ ತಿಳಿದಿಲ್ಲ. ಆದರೆ ಒಟ್ನಲ್ಲಿ ನಶೆಯಲ್ಲಿ ತೇಲಿಕೊಂಡು ಬಂದ ಇವನು ಕಾರ್​ನ ಅಡ್ಡಾದಿಡ್ಡಿ ಚಲಾಯಿಸಿಕೊಂಡು ಬಂದಿದ್ದಾನೆ. ಏರಿಯಾದಲ್ಲಿದ್ದ 12ಕ್ಕೂ ಹೆಚ್ಚು ಕಾರ್, 10 ಕ್ಕೂ ಅಧಿಕ ಬೈಕ್ ಗಳಿಗೆ ಡಿಕ್ಕಿ ಹೊಡೆದು ಪುಂಡಾಟ ಮೆರೆದಿದ್ದಾನೆ.

ಯುವಕರ ಪುಂಡಾಟ ಹೆಚ್ಚಾಯಿತು, ಅಲರ್ಟ್​ ಆದ ಸ್ಥಳೀಯರು

ಇನ್ನು ಯಾವಾಗ ಕಾರ್​ನಲ್ಲಿ ಬಂದ ಈ ಇಬ್ಬರು ಯುವಕರ ಪುಂಡಾಟ ಹೆಚ್ಚಾಯ್ತೋ ಅಲರ್ಟ್​ ಆದ ಸ್ಥಳೀಯರು ಕೊನೆಗೆ ಆ ಐ20 ಕಾರನ್ನ ಚೇಸ್ ಮಾಡಿ ಹಿಡಿದ್ದಾರೆ. ಬಳಿಕ ಬೇಕಾ ಬಿಟ್ಟಿ ಡ್ರೈವ್ ಮಾಡಿ ಗಾಡಿಗಳ ಜಖಂ ಮಾಡಿದ ಪುಂಡರಿಗೆ ಧರ್ಮದೇಟು ಕೊಟ್ಟು ಮಲ್ಲೇಶ್ವಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಅಂದಹಾಗೆ ಆರೋಪಿ ಚಂದ್ರು ನಾಯ್ಡು ಅಲಿಯಾಸ್ ಸೇಟು ಬೆಳಗ್ಗೆ ಆದ್ರೆ ಫುಲ್​ ಟಿಪ್​ ಟಾಪ್​ ಆಗಿ ರೆಡಿಯಾಗಿ ರೀಲ್ಸ್​ ಮಾಡ್ತಿದ್ದನಂತೆ. ಸಂಜೆ ಆಗ್ತಿದ್ದಂತೆ ವೈನ್ಸ್​ ಕಡೆ ಮುಖ ಮಾಡಿ ಕಂಠ ಪೂರ್ತಿ ಕುಡಿದು ಇಲ್ಲ ಗಾಂಜಾ ಮತ್ತಲ್ಲಿ ತೇಲಾಡುತ್ತಿದ್ದನಂತೆ. ಬಳಿಕ ಕಾರ್​ನಲ್ಲಿ ಸಾಂಗ್​ ಹಾಕ್ಕೊಂಡು ಫುಲ್​ ಸೌಂಡ್​ ಹಾಕೊಂಡು ಎಕ್ಸಲೇಟರ್​ ರೇಸ್​ ಮಾಡಿ ಹೊರಟ ಅಂದ್ರೆ ರಸ್ತೆಯಲ್ಲಿ ಯಾರೇ ಬಂದ್ರು ನೋಡದೆ ಅಡ್ಡಾದಿಡ್ಡಿ ಡ್ರೈವ್​ ಮಾಡ್ತಿದ್ದನಂತೆ. ಫಾಸ್ಟ್​ ಅಂಡ್​ ಫ್ಯೂರಿಯಸ್​ ಸಿನಿಮಾ ಸ್ಟೈಲ್​ನಲ್ಲಿ ಕಾರ್​ ಚಾಲಯಿಸಿ ಮನೆ ಬಳಿ ಪಾರ್ಕ್​ ಮಾಡಿದ್ದ ಕಾರ್​ಗಳನ್ನ ಗುದ್ಕೊಂಡು ಹೋಗಿ ರಂಪಾಟಗಳನ್ನ ಮಾಡಿ ಬಿಡೋದೆ ಇವನ ಕೆಲಸವಂತೆ.

ಮೇಲ್ನೋಟಕ್ಕೆ ನಶೆಯಲ್ಲಿ ಈ ಕೃತ್ಯ ಎಸಗಿರೊದು ಗೊತ್ತಾಗಿದೆ. ಆದ್ರೆ, ಹುಡುಗಿ ವಿಚಾರಕ್ಕೆ ತಲೆ ಕೆಟ್ಟು ಈ ರೀತಿ ಮಾಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ್ದ ಮಲ್ಲೇಶ್ವರಂ ಸಂಚಾರಿ ಪೊಲೀಸರು ಪುಂಡಾಟ ಮೆರೆದ ಇಬ್ಬರು ಯುವಕರ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಅದೇನೆ ಇರಲಿ ಬೆಂಗಳೂರಲ್ಲಿ ಈ ಪುಂಡರ ಪುಂಡಾಟ ಮಾತ್ರ ಹೆಚ್ಚಾಗ್ತಾನೆ ಸಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳಗ್ಗೆ ಟಿಪ್​-ಟಾಪ್ ಆಗಿ ರೀಲ್ಸ್.. ಸಂಜೆ ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ.. ಏನೆಲ್ಲಾ ಅನಾಹುತ ಮಾಡಿದ್ದಾನೆ ಆರೋಪಿ..?   

https://newsfirstlive.com/wp-content/uploads/2023/06/BNG_DRINK_AND_DRIVE.jpg

Load More