newsfirstkannada.com

ಭೂ ವಿಜ್ಞಾನಿ ಪ್ರತಿಮಾ ಕೊಲೆ ಕೇಸ್​: ಹತ್ಯೆ ಹಿಂದಿನ ಸ್ಫೋಟಕ ಸತ್ಯ ಬಿಚ್ಚಿಟ್ಟ ಡ್ರೈವರ್ ಕಿರಣ್

Share :

19-11-2023

    ಪೊಲೀಸರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹತ್ಯೆ ಆರೋಪಿ

    ಮನೆಯಲ್ಲಿದ್ದ ದುಡ್ಡು, ಚಿನ್ನಾಭರಣ ನೋಡಿ ಆರೋಪಿ ಸಂಚು ಮಾಡಿದ್ದ

    ಹತ್ಯೆ ಬಳಿಕ ಪ್ರತಿಮಾ ಕೈಯಲ್ಲಿ ಚಿನ್ನದ 2 ಬಳೆ, ಬ್ರೇಸ್​ಲೈಟ್​ ಕೂಡ ಕದ್ದಿದ್ದ

ಬೆಂಗಳೂರು: ಹಿರಿಯ ಭೂ ವಿಜ್ಞಾನಿ ಕೆಎಸ್ ಪ್ರತಿಮಾ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಮನೆಯಲ್ಲಿ ಹಣ, ಚಿನ್ನಾಭರಣಗಳನ್ನು ನೋಡಿ ಪ್ಲಾನ್​ ಮಾಡಿ ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ಕಿರಣ್ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನಲಾಗಿದೆ.

ತಲಘಟ್ಟಪುರದ ಇನ್​​ಸ್ಪೆಕ್ಟರ್​ ಜಗದೀಶ್ ನೇತೃತ್ವದಲ್ಲಿ ಆರೋಪಿ ಕಿರಣ್​ನನ್ನು ವಿಚಾರಣೆ ಮಾಡಲಾಗಿದೆ. ಪ್ರತಿಮಾರ ಬಳಿ ಹಣ, ಚಿನ್ನದ ಆಭರಣಗಳು ನೋಡಿದ್ದ ಆರೋಪಿಯು ಕೊಲೆಗೆ ಸಂಚು ರೂಪಿಸಿದ್ದ. ಹೀಗಾಗಿಯೇ ಮೊದಲೇ ಪ್ಲಾನ್ ಮಾಡಿಕೊಂಡು ಮನೆಗೆ ಬಂದು ಪ್ರತಿಮಾರನ್ನು ಕೊಲೆ ಮಾಡಿದ್ದ. ಹತ್ಯೆ ಬಳಿಕ ಕೈಯಲ್ಲಿದ್ದ ಚಿನ್ನದ ಬಳೆ ಹಾಗೂ ಬ್ರೇಸ್​ಲೈಟ್​ಗಳನ್ನು ದೋಚಿದ್ದ. ಆವತ್ತು ಒಟ್ಟು ಮೂರೂವರೆಯಿಂದ 4 ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ. ಅಲ್ಲದೇ ಮನೆಯಲ್ಲಿದ್ದ 5 ಲಕ್ಷ ರೂ.ಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಕೊಲೆಯಾದ ಪ್ರತಿಮಾ

ಹಣವನ್ನೆಲ್ಲ ಸ್ನೇಹಿತನ ಮನೆಯಲ್ಲಿಟ್ಟಿದ್ದ ಆರೋಪಿ

ದೋಚಿದ್ದ ಹಣವನ್ನೆಲ್ಲ ಕೋಣನಕುಂಟೆಯಲ್ಲಿನ ತನ್ನ ಸ್ನೇಹಿತ ಶಿವು ಎನ್ನುವರ ನಿವಾಸದಲ್ಲಿಟ್ಟಿದ್ದ. ಈ ಬಗ್ಗೆ ಶಿವು ವಿಚಾರಿಸಿದಾಗ ನನಗೆ ಯಾರೋ ಕೊಡಬೇಕಿತ್ತು ಎಂದು ಹೇಳಿ ಸದ್ಯಕ್ಕೆ ಇದೆಲ್ಲ ನಿಮ್ಮ ಮನೆಯಲ್ಲಿ ಇರಲಿ. ನಾನು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಬಂದು ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದನು. ಹೀಗಾಗಿ ಶಿವು ಏನು ಗೊತ್ತಿಲ್ಲದೇ ಹಣವನ್ನ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಆರೋಪಿ ಸ್ನೇಹಿತನ ಸಾಕ್ಷಿಯಾಗಿ ಪರಿಗಣಿಸಿದ್ರಾ ಪೊಲೀಸರು?

ಆರೋಪಿಯು ಹಣ ತಂದುಕೊಟ್ಟಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಪೊಲೀಸರು ಶಿವುನನ್ನು ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಆರೋಪಿಯಿಂದ 5 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಕಥೆ ಕಟ್ಟಿ ಪೊಲೀಸರ ದಾರಿ ತಪ್ಪಿಸಿದ್ದ. ಕೊಲೆ ಮಾಡಲು ಆಯುಧ ತರದೇ ಪ್ಲಾನ್ ಪ್ರಕಾರ ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಗೊತ್ತಾಗಿದೆ.

ಆರೋಪಿ ಕಿರಣ್

ಹತ್ಯೆ ಮಾಡಿದ ನಂತರ ಆರೋಪಿಯನ್ನು ಅರೆಸ್ಟ್​ ಮಾಡಿದ್ದ ಪೊಲೀಸರು ಪ್ರಾಥಮಿಕ ವಿಚಾರಣೆ ಮಾಡಿದ್ದರು. ಈ ವೇಳೆ ಎಲ್ಲ ಸುಳ್ಳಿನ ಕಥೆ ಕಟ್ಟಿದ್ದ. ನನ್ನನ್ನು ಕ್ಷಮಿಸಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಿ. ಇದಕ್ಕೆ ಒಪ್ಪದಿದ್ದಕ್ಕೆ ಕೋಪದಲ್ಲಿ ಪ್ರತಿಮಾರನ್ನು ಕೊಲೆ ಮಾಡಿದೆ. ಏನು ಗೊತ್ತಾಗದೇ ಮನೆಯಲ್ಲಿದ್ದ 15 ಸಾವಿರ ತೆಗೆದುಕೊಂಡು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದೆ ಎಂದು ಆರೋಪಿ ಕಥೆ ಕಟ್ಟಿದ್ದನು. ಆದ್ರೆ ಈಗ ಎಲ್ಲ ಸತ್ಯವನ್ನು ಪೊಲೀಸರು ಬಾಯಿ ಬಿಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂ ವಿಜ್ಞಾನಿ ಪ್ರತಿಮಾ ಕೊಲೆ ಕೇಸ್​: ಹತ್ಯೆ ಹಿಂದಿನ ಸ್ಫೋಟಕ ಸತ್ಯ ಬಿಚ್ಚಿಟ್ಟ ಡ್ರೈವರ್ ಕಿರಣ್

https://newsfirstlive.com/wp-content/uploads/2023/11/Prathima-5.jpg

Load More