newsfirstkannada.com

Video: ಹಾಡಹಗಲೇ ಪುಂಡರ ಅಟ್ಟಹಾಸ; BBMP ಕಸದ ಆಟೋ ಚಾಲಕನ ಮೇಲೆ ಮನಸೋ ಇಚ್ಛೆ ದಾಳಿ

Share :

05-07-2023

  ಸಿಲಿಕಾನ್ ಸಿಟಿಯಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ

  ಯುವಕನೋರ್ವನನ್ನು ಅಡ್ಡಗಟ್ಟಿ ಅಟ್ಯಾಕ್ ಮಾಡಿದ ಗ್ಯಾಂಗ್​

  ಆಟೋದಲ್ಲಿ ಹೋಗುತ್ತಿದ್ದ ವೇಳೆ ಪುಂಡರ ಗ್ಯಾಂಗ್​ ಅಟ್ಯಾಕ್​

ಸಿಲಿಕಾನ್ ಸಿಟಿಯಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಯುವಕನೋರ್ವನನ್ನು ಅಡ್ಡಗಟ್ಟಿ ಅಟ್ಯಾಕ್ ಮಾಡಿದ ಘಟನೆ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ನಡೆದಿದೆ. ದೊಣ್ಣೆ, ಬ್ಯಾಟ್ ನಿಂದ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. ಸದ್ಯ ಹಲ್ಲೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದೆ.

ಬಿಬಿಎಂಪಿ ಕಸದ ಆಟೋ ಚಾಲಕ ಸತೀಶ್ ಎಂಬಾತನ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ. ಕೆಲಸ ಮುಗಿಸಿ 11 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದ ಚಾಲಕ ಸತೀಶ್ ಮೇಲೆ ಗುಂಪೊಂದು ಏಕಾಏಕಿ ದಾಳಿ ಮಾಡಿದ್ದಾರೆ.

ಚಾಲಕ ಸತೀಶ್​ ಜಾಲಿ ಮೊಹಲ್ಲಾ ರಸ್ತೆಯಲ್ಲಿ ಆಟೋದಲ್ಲಿ ಹೋಗುತ್ತಿದ್ದ ವೇಳೆ ಪುಂಡರ ಗ್ಯಾಂಗ್​ ಏಕಾಏಕಿ ಅಟ್ಯಾಕ್ ಮಾಡಿದೆ. ರಾಜೇಂದ್ರ, ಮನು ಮತ್ತು ಗ್ಯಾಂಗ್ ನಿಂದ ಅಟ್ಯಾಕ್ ನಡೆದಿದೆ. ಕ್ರಿಕೆಟ್ ಬ್ಯಾಟ್, ದೊಣ್ಣೆಯಿಂದ ಪುಂಡರು ಹಲ್ಲೆ ನಡೆಸಿದ್ದಾರೆ. ಹಲ್ಲೆಯ ನಡೆಸುತ್ತಿದ್ದಂತೆ ಬ್ಯಾಟ್​ನಿಂದ ಏಟು ತಿನ್ನುತ್ತಿದ್ದ ಸತೀಶ್​ ಬಳಿಕ ಹಲ್ಲೆಕೋರರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಸತೀಶ್ ಗೆ ಪುಂಡರ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾನೆ.

ಹಲ್ಲೆ ನಡೆಸಿದ ರಾಜೇಂದ್ರ, ಮನು ಮತ್ತು ಗ್ಯಾಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಹಾಡಹಗಲೇ ಪುಂಡರ ಅಟ್ಟಹಾಸ; BBMP ಕಸದ ಆಟೋ ಚಾಲಕನ ಮೇಲೆ ಮನಸೋ ಇಚ್ಛೆ ದಾಳಿ

https://newsfirstlive.com/wp-content/uploads/2023/07/Attack.jpg

Load More