newsfirstkannada.com

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ -HAL ವಿಮಾನ ನಿಲ್ದಾಣದ ಹೊರಗೆ ಮೋದಿ ಘೋಷಣೆ

Share :

26-08-2023

    ನಾನು ದೂರದ ದೇಶದಿಂದ ನೇರ ಬೆಂಗಳೂರಿಗೆ ಬಂದಿದ್ದೇನೆ

    ಬರುತ್ತಿದ್ದಂತೆ ಮೊದಲ ಕೆಲಸ ವಿಜ್ಞಾನಿಗಳಿಗೆ ನಮಿಸುವುದು

    ವಿಜ್ಞಾನಿಗಳ ಈ ಕೆಲಸಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ

ಬೆಂಗಳೂರು: ಪ್ರಧಾನಿ ಮೋದಿಯವರು ಹೆಚ್​ಎಎಲ್ ವಿಮಾನ ನಿಲ್ದಾಣದ ಹೊರಗೆ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದು ಹೇಳಿ, ವಿಜ್ಞಾನದಲ್ಲಿ ನಾವು ನಂಬಿಕೆ, ವಿಶ್ವಾಸ ಇಡಬೇಕು ಎಂದು ಹೇಳಿದರು.

ಹೆಚ್​ಎಎಲ್ ವಿಮಾನ ನಿಲ್ದಾಣದ ಬಳಿ ಮಕ್ಕಳ ಸಂಭ್ರಮ

ನಗರದ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಜನರನ್ನುದ್ದೇಶಿಸಿ ಮಾತನಾಡಿದರು. ವಿಜ್ಞಾನದಲ್ಲಿ ನಾವು ನಂಬಿಕೆ, ವಿಶ್ವಾಸ ಇಡಬೇಕು. ಇದು ಭಾರತದ ಭವಿಷ್ಯ. ವಿಜ್ಞಾನಿಗಳ ಸಾಧನೆಗೆ ಇಡೀ ವಿಶ್ವವೇ ಅಚ್ಚರಿ ವ್ಯಕ್ತಪಡಿಸಿದೆ. ವಿಜ್ಞಾನಿಗಳ ಈ ಕೆಲಸಕ್ಕೆ ಇಡೀ ದೇಶವೇ ಹೆಮ್ಮೆ ಪಡುವಂತೆ ಆಗಿದೆ. ಹೀಗಾಗಿ ದೂರದ ದೇಶದಿಂದ ನೇರ ಭಾರತಕ್ಕೆ ಬಂದು ವಿಜ್ಞಾನಿಗಳಿಗೆ ನಮಿಸುವುದು ಆಗಿತ್ತು. ಸ್ವಾಗತಿಸಲು ಬಂದಿದ್ದ ಮಕ್ಕಳನ್ನು ನೋಡಿ ಮೋದಿಯವರು ಮಕ್ಕಳೇ ಮುಂದಿನ ಭವಿಷ್ಯ, ಅವರು ದೇಶದ ಶಕ್ತಿ ಎಂದು ಹೇಳಿದ್ದಾರೆ.

ಚಂದ್ರಯಾನ-3 ಸಕ್ಸಸ್ ಆಗುವ ವೇಳೆ ನಾನು ವಿದೇಶದಲ್ಲಿದ್ದೆ. ಹೀಗಾಗಿ ಅವರನ್ನು ಬಂದು ತಕ್ಷಣಕ್ಕೆ ಬಂದು ಅಭಿನಂದಿಸಲು ಆಗಲಿಲ್ಲ. ಸದ್ಯ ಇದೀಗ ಬಂದಿದ್ದೇನೆ. ಇಸ್ರೋಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಇನ್ನು ಸಿಎಂ, ಡಿಸಿಎಂ ಅವರು ಇಸ್ರೋಗೆ ತೆರಳಿ ಅವರನ್ನು ಅಭಿನಂದಿಸಿದ್ದಾರೆ ಎಂದು ರಾಜ್ಯ ಸರ್ಕಾರದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಹೆಚ್​ಎಎಲ್ ವಿಮಾನ ನಿಲ್ದಾದಿಂದ ಪೀಣ್ಯದಲ್ಲಿನ ಇಸ್ರೋ ಬರೋಬ್ಬರಿ 26 ಕಿಲೋ ಮೀಟರ್ ಇದೆ. ಭಾಷಣ ಮುಗಿದ ತಕ್ಷಣ ಮೋದಿ ಪೀಣ್ಯ ಕಡೆಗೆ ತೆರಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ -HAL ವಿಮಾನ ನಿಲ್ದಾಣದ ಹೊರಗೆ ಮೋದಿ ಘೋಷಣೆ

https://newsfirstlive.com/wp-content/uploads/2023/08/BNG_MODI.jpg

Load More