newsfirstkannada.com

ಕಾರಿನಲ್ಲಿಯೇ ಕಿತ್ತಾಡಿಕೊಂಡ ಗಂಡ-ಹೆಂಡತಿ.. ಕೋಪದಲ್ಲಿ ಸ್ಟೇರಿಂಗ್​ ಎಳೆದ ಪತ್ನಿ.. ಮುಂದೇನಾಯಿತು?

Share :

14-07-2023

    ರಸ್ತೆಯಲ್ಲಿ ಬೇರೆಯವರ ಜೀವದ ಜೊತೆ ಗಂಡ-ಹೆಂಡ್ತಿ ಚೆಲ್ಲಾಟ

    ಮಾರ್ಕೆಟ್​ ಕಡೆಯಿಂದ ಬರುವಾಗ ಇಬ್ಬರ ನಡುವೆ ಗಲಾಟೆ

    ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

ಬೆಂಗಳೂರು: ಗಂಡ.. ಹೆಂಡತಿ ಜಗಳವಾಡಿದರೆ, ಮನೆಯಲ್ಲಿದ್ದ ವಸ್ತುಗಳು ಒಡೆದು ಹೋಗುವುದು ಕಾಮನ್. ಅದೇ ಗಂಡ-ಹೆಂಡತಿ ಜಗಳ ರೋಡ್​ಗೆ ಬಂದು ಕಾರಿನೊಳಗೆ ಕಿತ್ತಾಡಿಕೊಂಡರೇ ಏನು​ ಆಗುತ್ತೆ ಅನ್ನೋದನ್ನ ಹಲಸೂರು ಗೇಟ್ ಠಾಣೆ ಬಳಿ ದಂಪತಿ ತೋರಿಸಿಕೊಟ್ಟಿದ್ದಾರೆ.

ಮಾರ್ಕೆಟ್ ಕಡೆಯಿಂದ ಐ20 ಕಾರಿನಲ್ಲಿ ಬರುತ್ತಿದ್ದ ವೇಳೆ ಪತಿ, ಪತ್ನಿ ನಡುವೆ ಯಾವುದೋ ವಿಚಾರಕ್ಕೆ ಚಾಲನೆಯಲ್ಲಿದ್ದ ಕಾರಿನಲ್ಲೇ ಮಾತಿನ ಚಕಮಕಿ ಶುರುವಾಗಿದೆ. ಪತಿಯು ಕಾರ್ ಡ್ರೈವ್​ ಮಾಡುತ್ತಿದ್ದರು. ಆಗ ಇಬ್ಬರ ಮಾತಿನ ಸಮರ ತಾರಕ್ಕೇರಿದ್ದು, ಕೋಪದಲ್ಲಿ ಪತ್ನಿ ದಿಢೀರ್‌ ಅಂತ ಕಾರಿನ ಸ್ಟೇರಿಂಗ್ ಎಳೆದಾಡಿ ಬಿಟ್ಟಿದ್ದಾರೆ.

ಅಷ್ಟೇ ನೋಡಿ, ಸ್ಟೇರಿಂಗ್ ಎಳೆದ ರಭಸಕ್ಕೆ ರಸ್ತೆಯಲ್ಲೇ ಕಾರು ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಹಾಗದೇ ಇಬ್ಬರಿಗೂ ಸಣ್ಣಪುಟ್ಟ ಗಾಯಗಳು ಆಗಿವೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಹಲಸೂರು ಗೇಟ್ ಪೊಲೀಸರು ಪಲ್ಟಿ ಹೊಡೆದ ಕಾರಿನಲ್ಲಿದ್ದ ದಂಪತಿಯನ್ನ ರಕ್ಷಣೆ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾರಿನಲ್ಲಿಯೇ ಕಿತ್ತಾಡಿಕೊಂಡ ಗಂಡ-ಹೆಂಡತಿ.. ಕೋಪದಲ್ಲಿ ಸ್ಟೇರಿಂಗ್​ ಎಳೆದ ಪತ್ನಿ.. ಮುಂದೇನಾಯಿತು?

https://newsfirstlive.com/wp-content/uploads/2023/07/CAR.jpg

Load More