2047ರ ವೇಳೆಗೆ ಹೆಚ್ಚಾಗುವ ಟ್ರಾಫಿಕ್ಗೆ ಈಗಲೇ ಕ್ರಮ
BDA & BMRCL ಅಧಿಕಾರಿಗಳ ಜೊತೆ ಡಿಸಿಎಂ ಸಭೆ
ಹೆಬ್ಬಾಳ ಟ್ರಾಫಿಕ್ ಜಂಕ್ಷನ್ ಪರಿಶೀಲನೆ ನಡೆಸಿದ ಡಿಕೆಶಿ
ಬ್ರಾಂಡ್ ಬೆಂಗಳೂರನ್ನ ಬೆಟರ್ ಬೆಂಗಳೂರು ಮಾಡಲು ಹೊರಟಿರುವ ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಪ್ರತಿ ದಿನವು ನಗರದ ಸಮಸ್ಯೆಗಳ ಬಗ್ಗೆ ತಮ್ಮ ಚಿತ್ತ ಹರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂದು BDA & BMRCL ಅಧಿಕಾರಿಗಳ ಜೊತೆ ಮಹತ್ವವಾದ ಸಭೆ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್ ಬಳಿಕ ಹೆಬ್ಬಾಳ ಪ್ಲೈಓವರ್ ಕಡೆಗೆ ತಮ್ಮ ದೃಷ್ಟಿ ನೆಟ್ಟಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಅದ್ರಲ್ಲೂ ಮುಖ್ಯವಾಗಿ ಟ್ರಾಫಿಕ್ ಜಾಮ್. ಸಂಜೆ ಎಷ್ಟೇ ಬೇಗ ಕೆಲಸ ಮುಗಿತು ಅಂತ ಖುಷಿಪಟ್ರು ಮನೆಗೆ ಬರೋದು ಮಾತ್ರ ಹೆಚ್ಚು ಕಮ್ಮಿ ಸೇಮ್ ಟೈಂಗೆ ಯಾಕಂದ್ರೆ ಅಷ್ಟು ವಾಹನ ದಟ್ಟಣೆ ಇರುತ್ತದೆ. ಹೀಗಾಗಿ ನಗರದ ಟ್ರಾಫಿಕ್ ಜಂಕ್ಷನ್ಗಳ ಅಭಿವೃದ್ಧಿಗೆ ಸರ್ಕಾರ ಪಣತೊಟ್ಟಿದೆ.
ಹೆಬ್ಬಾಳ ಫ್ಲೈಓವರ್ ಇಲ್ಲಿನ ಟ್ರಾಫಿಕ್ ಜಾಮ್ನಿಂದ ಕಂಗೆಟ್ಟಿರುವ ಬೆಂಗಳೂರು ಉತ್ತರ ಮಂದಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿಯೇ ಇಂದು ಬಿಡಿಎ ಕೇಂದ್ರ ಕಚೇರಿಯಿಂದ ಹೊರಟ ಡಿಸಿಎಂ ಹಾಗೂ ಅಧಿಕಾರಿಗಳ ತಂಡ ಹೆಬ್ಬಾಳ ಟ್ರಾಫಿಕ್ ಜಂಕ್ಷನ್ ಅನ್ನ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹೆಬ್ಬಾಳದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ, ರಸ್ತೆ, ಮೇಲ್ಸೇತುವೆ ಅಗಲೀಕರಣ ಹಾಗೂ ಹೆಬ್ಬಾಳ ಕೆರೆಯ ಸೌಂದರ್ಯಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ರು. ಅಲ್ಲದೆ 2047ರ ವೇಳೆಗೆ ಹೆಚ್ಚಾಗುವ ವಾಹನ ದಟ್ಟಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ವಿವರಣೆಯನ್ನು ನೀಡಿ 63 ಕಿ.ಮೀ. ಅವಳಿ ಸುರಂಗ ಮಾರ್ಗ ನಿರ್ಮಾಣದ ಬ್ಲೂ ಪ್ರಿಂಟ್ ಮೂಲಕ ಸಲಹೆ ನೀಡಿದರು. ಅಷ್ಟೇ ಅಲ್ಲ, ಹೆಬ್ಬಾಳದಲ್ಲಿ ಮೆಟ್ರೋ ಸ್ಟೇಷನ್, ಮೆಟ್ರೋ ಲೈನ್ಸ್ ನಿರ್ಮಾಣದ ಬಗ್ಗೆ ನುರಿತ ಇಂಜಿನಿಯರ್ ಗಳಿಂದ ಸ್ಥಳದಲ್ಲಿ ಮಾಹಿತಿಯನ್ನೂ ಪಡೆದ್ರು.
ಮೇಜರ್ ಆಗಿ 5-6 ಪಾಯಿಂಟ್ಸ್ಗಳಲ್ಲಿ ಟ್ರಾಫಿಕ್ ಜಾಮ್ ಅನ್ನು ಕಡಿಮೆ ಮಾಡಬೇಕು.
ಡಿ.ಕೆ.ಶಿವಕುಮಾರ್, ಡಿಸಿಎಂ
ಟ್ರಾಫಿಕ್ ಕಿರಿಕಿರಿ ಹಿನ್ನೆಲೆ IT-BT, MNC ಕಂಪನಿಗಳಿಂದಲೂ ಆಕ್ಷೇಪ ಇದೆ. ಬೆಂಗಳೂರು-ಏರ್ಪೋಟ್ ಮಾರ್ಗದಲ್ಲಿನ ಟ್ರಾಫಿಕ್ ಜಾಮ್ ನೋಡಿ ನಗರಕ್ಕೆ ಕಾಲಿಡಲು ಹೂಡಿಕೆದಾರರು ಕೂಡ ಹಿಂದೇಟು ಹಾಕ್ತಿದ್ದಾರೆ. ಇದೆಲ್ಲವನ್ನ ಮನಗಂಡ ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ