newsfirstkannada.com

ಅತ್ತೆ ಮನೆಯಲ್ಲಿ ನೀರಿನ ಶಾಸ್ತ್ರಕ್ಕಿಲ್ಲ ಗೌರವ.. ಹೆಂಡತಿಯನ್ನೇ ಕೊಂದು ಹಾಕಿದ ಕಾನ್ಸ್​ಟೇಬಲ್​​!

Share :

10-11-2023

  ಗಂಡ-ಹೆಂಡತಿ ವಿಚಾರ ಸಾಮಾನ್ಯ ಅಂತ ಸುಮ್ಮನಾಗಿದ್ದ ತಾಯಿ

  2 ಮನೆಯವರು ಮಗುವಿಗೆ 9 ದಿನದ ನೀರಿನ ಶಾಸ್ತ್ರ ಮಾಡಿದ್ದರು

  1ನೇ ಪ್ಲಾನ್ ಪ್ಲಾಪ್, ಆತ್ಮಹತ್ಯೆ ಬಗ್ಗೆ ಡ್ರಾಮಾ ಮಾಡಿದ ಗಂಡ

ಮದ್ವೆಯಾಗಿ ಇನ್ನೂ 1 ವರ್ಷ ಆಗಿರಲಿಲ್ಲ. ಅದಾಗಲೇ ಒಂದು ಗಂಡು ಮಗು ಅವರ ಮನೆ ಸೇರಿತ್ತು. ಮಗುವಾಗಿ ಕೇವಲ 11 ದಿನವಾಗಿತ್ತು ಅಷ್ಟೇ. ನೂರಾರು ಕನಸುಗಳನ್ನ ಕಂಡಿದ್ದ ಆ ಬಾಣಂತಿ ಕೊಲೆಯಾಗಿಬಿಟ್ಟಿದ್ದಾಳೆ. ಆಕೆಯ ಉಸಿರು ನಿಲ್ಲಿಸಿದವನು ಮತ್ತ್ಯಾರು ಅಲ್ಲ, ಆಕೆಯ ಗಂಡ, ಪೊಲೀಸ್‌ ಕಾನ್​ಸ್ಟೇಬಲ್‌.

ಈ ಘಟನೆ ನಡೆದಿದ್ದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೊಂದಿಕೊಂಡಿರುವ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ. ಟಿನ್ ಪ್ಯಾಕ್ಟರಿಯಿಂದ ಹೊಸಕೋಟೆವರೆಗೂ ಈಗಾಗಲೆ ಸಾಕಷ್ಟು ಅಭಿವೃದ್ದಿಯಾಗಿದ್ದು ನೂರಾರು ಕಂಪನಿಗಳು ಸಾವಿರಾರು ಕಟ್ಟಡಗಳು ತಲೆ ಎತ್ತಿವೆ. ಹೀಗಾಗಿ ಹೊಸಕೋಟೆ ಸುತ್ತಾಮುತ್ತ ಭೂಮಿಯ ಬೆಲೆ ಗಗನಕ್ಕೇರಿದ್ದು ಗ್ರಾಮೀಣ ಭಾಗದಲ್ಲು ಬಹುಮಹಡಿ ಕಟ್ಟಡಗಳು ಹೆಚ್ಚಾಗಿವೆ.

ಮೃತ ಪ್ರತಿಭಾ ತಂದೆ

ಪೊಲೀಸ್ ಇಲಾಖೆಯಲ್ಲಿ ಕಾನ್​​ಸ್ಟೇಬಲ್ ಆಗಿದ್ದ ಅಳಿಯ

ಇಂತಹ ಅಭಿವೃದ್ದಿ ಹೊಂದುತ್ತಿರುವ ಗ್ರಾಮಗಳಿಂದ ಸ್ವಲ್ಪ ಜಮೀನು ಆರ್ಥಿಕವಾಗಿ ಸದೃಢವಾಗಿದ್ರೆ ಸಾಕು ಹೆಣ್ಣು ಪಡೆಯೋಕ್ಕೆ, ಕೊಡೋಕ್ಕು ಸಾಕಷ್ಟು ಜನ ತುದಿಗಾಲಲ್ಲಿ ನಿಲ್ತಾರೆ. ಇನ್ನೂ ಇದೇ ರೀತಿ ಹೊಸಕೋಟೆಯಿಂದ ಜಸ್ಟ್ 3-4 ಕಿಲೋ ಮೀಟರ್ ದೂರದಲ್ಲಿರುವ ಕೊಳತೂರು ಅನ್ನೂ ಈ ಗ್ರಾಮದ ಸುಬ್ರಮಣ್ಯ ಎನ್ನುವರ ಮನೆಯಲ್ಲಿನ ಪ್ರತಿಭಾ ಎನ್ನುವ ಹೆಣ್ಣು ಮಗಳನ್ನ ಪಡೆಯೋಕ್ಕೆ ಅದೊಂದು ಕುಟುಂಬ ತುದಿಗಾಲಲ್ಲಿ ನಿಂತಿತ್ತು. ಜೊತೆಗೆ ಅಳಿಯ ಪೊಲೀಸ್ ಇಲಾಖೆಯಲ್ಲಿ ಕಾನ್​​ಸ್ಟೇಬಲ್ ಆಗಿ ಕೆಲಸ ಮಾಡ್ತಿದ್ದು ಸರ್ಕಾರಿ ಕೆಲಸ ಮಗಳು ಸುಖವಾಗಿ 100 ವರ್ಷ ಬಾಳಿ ಬದುಕುತ್ತಾಳೆ ಅಂತಲೆ ಕುಟುಂಬಸ್ಥರು ಅಂದುಕೊಂಡಿದ್ರು.

ಹೀಗಾಗಿ ಕಳೆದ ವರ್ಷ 2022 ರ ನವಂಬರ್ 11 ರಂದು ಕೋಲಾರದ ವೀರಾಪುರ ಅನ್ನೂ ಗ್ರಾಮದ ಕಿಶೋರ್ ಅನ್ನೂ ಈ ಪೊಲೀಸ್ ಕಾನ್ಸಟೇಬಲ್ ಜೊತೆ ಹೊಸಕೋಟೆ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ರು,. ಜೊತೆಗೆ ಗಂಡನಿಗೆ ಸಾಕಷ್ಟು ಆಭರಣ, ಹಣ ಎಲ್ಲವನ್ನೂ ನೀಡಿದ್ದ ಕುಟುಂಬಸ್ಥರು ಮಗಳಿಗೆ ಯಾವುದೇ ಕೊರತೆಯಾಗಲ್ಲ ಆಕೆ 100 ಕಾಲ ಚೆನ್ನಾಗಿರ್ತಾಳೆ ಅಂತಲೆ ಅಂದುಕೊಂಡಿದ್ರು.

ಮಗುವಿಗೆ 9 ದಿನದ ನೀರಿನ ಶಾಸ್ತ್ರ

ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ಮಗಳು, ಕೆಲವೇ ದಿನಗಳಲ್ಲಿ ಗರ್ಭಿಣಿಯಾಗುವ ಮೂಲಕ ಸಿಹಿ ಸುದ್ದಿ ನೀಡಿದ್ದಳು. ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗೆ ಮಾಡಿಕೊಂಡು ಮಗಳನ್ನ ತಂದೆ ಸುಬ್ರಮಣ್ಯ ಮನೆಗೆ ಕರೆದುಕೊಂಡು ಬಂದಿದ್ರು. ಜೊತೆಗೆ 11 ದಿನಗಳಿಂದ ಮಗಳು ಪ್ರತಿಭಾ ಗಂಡು ಮಗುವಿಗೆ ಜನ್ಮ ನೀಡಿದ್ದು ಕಳೆದ 3 ದಿನಗಳಿಂದೆ ಮಗುವಿಗೆ 9 ದಿನದ ನೀರಿನ ಶಾಸ್ತ್ರವನ್ನು 2 ಮನೆಯವರು ಸೇರಿಕೊಂಡು ಮಾಡಿದ್ದರು. ಅಲ್ಲದೆ ಕೆಲ ಕಾಲ ಖುಷಿ ಖುಷಿಯಾಗೆ ತಾಯಿ ಮಗು ಜೊತೆ ಕಳೆದಿದ್ದ ನಂತರ ಗಂಡ ಕಿಶೋರ್ ಮನೆಯವರು ಊರಿನತ್ತ ಹೊರಟಿದ್ರು.

ಇಷ್ಟೆಲ್ಲ ಆದ್ಮೇಲೆ ಕಳೆದ ಭಾನುವಾರ ಪ್ರತಿಭಾ ಗಂಡನ ಜೊತೆ ಪೋನಿನಲ್ಲಿ ಯಾವುದೋ ವಿಚಾರಕ್ಕೆ ಜಗಳವಾಡಿದ್ದಾರೆ. ಇದೇ ವಿಚಾರವನ್ನ ತಾಯಿ ಗಮನಿಸಿದ್ದು ಮಗಳನ್ನ ಕೇಳಿದ್ರೆ ಏನಿಲ್ಲ ಅಂತ ಹೇಳಿ ಸುಮ್ಮನಾಗಿದ್ದಾರೆ. ತಾಯಿ, ಗಂಡ-ಹೆಂಡತಿ ವಿಚಾರ ಸಾಮಾನ್ಯ ಅಂತ ಸುಮ್ಮನಾಗಿದ್ದರು. ಅಲ್ಲದೆ ಭಾನುವಾರ ಸಂಜೆ ತಾಯಿ ಮಗುವಿಗೆ ಸ್ನಾನ ಮಾಡಿಸಿ, ಬಟ್ಟೆ ಒಣಗಿಸೋಕ್ಕೆ ಅಂತ ಮಹಡಿ ಮೇಲೆ ಹೋಗಿದ್ದಾರೆ. ಈ ವೇಳೆ ಮನೆಗೆ ಬಂದ ಅಳಿಯ ಕಿಶೋರ್ ನೇರವಾಗಿ ಪತ್ನಿಯಿದ್ದ ಕೊಣೆಯೊಳಗಡೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡಿದ್ನಂತೆ. ಹೀಗಾಗಿ ಮಹಡಿ ಮೇಲಿಂದ ಸ್ವಲ್ಪ ಸಮಯದ ನಂತರ ಕೆಳಗಡೆ ಬಂದ ತಾಯಿ ವೆಂಕಟಲಕ್ಷ್ಮಮ್ಮ ಮನೆಗೆ ಬಂದು ರೂಂ ಬಾಗಿಲು ತೆಗೆಯಲು ಮುಂದಾಗಿದ್ದಾಳೆ. ಆದ್ರೆ ಈ ವೇಳೆ ರೂಂ ಬಾಗಿಲು ಎಷ್ಟೆ ಬಡಿದ್ರು ಓಪನ್ ಆಗದಿದ್ದಾಗ ಕೂಗಾಡಿಕೊಂಡು ಬೇರೆಯವರನ್ನ ಕರೆದಿದ್ದಾಳೆ.

ತಲೆ ದಿಂಬಿನಿಂದ ಪ್ರತಿಭಾಳನ್ನ ಉಸಿರುಗಟ್ಟಿಸಿ ಕೊಲೆ

ಈ ವೇಳೆ ತಾಯಿ ಕಿರುಚಾಡುತ್ತಿದ್ದಂತೆ ಡೋರ್ ತೆಗೆದು ಹೊರ ಬಂದ ಸೈಕೋ ಅಳಿಯ ಕಿಶೋರ್ ನಿನ್ನ ಮಗಳನ್ನ ಕೊಂದು ಬಿಟ್ಟೆ.. ಕೊಂದು ಬಿಟ್ಟೆ.. ಅಂತ ತಾಯಿಯ ಮುಂದೆ ಕೂಗಾಡುತ್ತಾ ಮನೆಯಿಂದ ಬೈಕ್ ನಲ್ಲಿ ಎಸ್ಕೇಪ್ ಆಗಿದ್ನಂತೆ. ಹೀಗಾಗಿ ರೂಮ್​ ಒಳಗಡೆ ಹೋಗಿ ನೋಡಿದ ತಾಯಿಗೆ ತಲೆ ದಿಂಬಿನಿಂದ ಪ್ರತಿಭಾಳ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ. ಜೊತೆಗೆ ಪ್ರತಿಭಾಳನ್ನ ಕೊಲೆ ಮಾಡಿದ ನಂತರ ಗಂಡ ಕೋಣೆಯಲ್ಲಿದ್ದ ಫ್ಯಾನಿಗೆ ಸೀರೆಯನ್ನ ಹಾಕಿ ನೇಣು ಹಾಕುವ ಮೂಲಕ ಆತ್ಮಹತ್ಯೆಯಂತೆ ಬಿಂಬಿಸುವ ಯತ್ನ ಮಾಡಿದ್ದಾನೆ. ತಾಯಿ ರೂಂ ಬಾಗಿಲು ಬಡಿದ ಕಾರಣ ಅಲ್ಲಿಂದ ಎಸ್ಕೇಪ್ ಆಗಿರುವುದು ಗೊತ್ತಾಗಿದೆ. ಕೂಡಲೇ ಪ್ರತಿಭಾರನ್ನ ಆಸ್ಪತ್ರೆಗೆ ಸಾಗಿಸಿದರು ಪ್ರಯೋಜನವಾಗಲಿಲ್ಲ.

ವಿಚಾರ ತಿಳಿಯುತ್ತಿದ್ದಂತೆ ಹೊಸಕೋಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಶ್ವಾನದಳ ಬೆರಳಚ್ಚು ತಂಡದವರನ್ನ ಕರೆಸಿ ಸಂಪೂರ್ಣ ತನಿಖೆ ನಡೆಸಿದ್ದಾರೆ. ಜೊತೆಗೆ ಶವಾಗಾರದಲ್ಲಿ ಪ್ರತಿಭಾಳ ಶವ ಪರೀಕ್ಷೆ ನಡೆಸಿದ ನಂತರ ಪೊಲೀಸರು ಪ್ರತಿಭಾ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಜೊತೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡು ಗಂಡ ಕಿಶೋರ್ ಎಲ್ಲಿ ಹೋದ ಅಂತ ಹುಡುಕಿ ಹೊರಟವರಿಗೆ ಸಿಕ್ಕಿದ್ದು ಗಂಡನ ಡ್ರಾಮಾ ಟ್ವಿಸ್ಟ್.

ಪ್ಲಾನ್- ಎ ಸಕ್ಸಸ್ ಆಗ್ಲಿಲ್ಲ ಅಂತ ಪ್ಲಾನ್- ಬಿಗೆ ಮುಂದಾಗಿದ್ದ

ಯಾಕಂದ್ರೆ ಪತ್ನಿಯನ್ನ ಕೊಂದು ಆತ್ಮಹತ್ಯೆಯಾಗಿ ಬಿಂಬಿಸುವ ಯತ್ನ ಮಾಡಿದ್ದ ಕಿಶೋರ ಪ್ಲಾನ್- ಎ ಸಕ್ಸಸ್ ಆಗ್ಲಿಲ್ಲ ಅಂತ ಪ್ಲಾನ್- ಬಿಗೆ ಮುಂದಾಗಿದ್ದ. ಹೌದು ಮೊದಲು ಪತ್ನಿಯನ್ನ ಕೊಂದು ನೇಣುಹಾಕಿ ಆತ್ಮಹತ್ಯೆಯಾಗಿ ಬಿಂಬಿಸುವುದು ಅದು ಸಾಧ್ಯವಾಗಲಿಲ್ಲ ಅಂದ್ರೆ ತಾನು ಆತ್ಮಹತ್ಯೆ ಡ್ರಾಮಾ ಮಾಡುವುದು ಅಂತ ಪ್ಲಾನ್ ಮಾಡಿಕೊಂಡಿದ್ದಾನೆ. ಹೀಗಾಗೆ ಒಂದನೆ ಪ್ಲಾನ್ ಪ್ಲಾಪ್ ಆಯ್ತು ಅಂತ ಆತ್ಮಹತ್ಯೆ ಮಾಡಿಕೊಳ್ಳುವ ಎರಡನೆ ಪ್ಲಾನ್ ಮಾಡಿದ್ದು ವಿಷ ಸೇವಿಸಿರೂದಾಗಿ ಹೇಳಿ ಕೋಲಾರದ ಆಸ್ವತ್ರೆ ಸೇರಿದ್ದಾನೆ.

ಹೊಸಕೋಟೆ ಪೊಲೀಸರಿಗೆ ಕಿಶೋರ್ ಕೋಲಾರದ ಆಸ್ವತ್ರೆಯಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಚಿಕಿತ್ಸೆ ಪಡೆಯುತ್ತಿದ್ದ ಕಿಶೋರ್ ನನ್ನ ವಶಕ್ಕೆ ಪಡೆದಿದ್ದಾರೆ. ಕಿಶೋರ್ ಔಟ್ ಆಪ್ ಡೇಂಜರ್ ಅಂತ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ಆರೋಪಿಯ ಬಗ್ಗೆ ಹೇಳಿಕೆ ಪಡೆದಿದ್ದಾರೆ. ಈ ವೇಳೆ ಆರೋಪಿ ಕಿಶೋರ್ ಹೇಳಿದ ಮಾತನ್ನ ಕೇಳಿ ಪೊಲೀಸರು ಒಂದು ಕ್ಷಣ ತಬ್ಬೀಬಾಗಿ ಹೋಗಿದ್ದು ಇದಕ್ಕೂ ಕೊಲೆ ಮಾಡ್ತಾರಾ ಅಂತ ಶಾಕ್ ಆಗಿದ್ದಾರೆ.

ಕೊಲೆಯಾದ ಪ್ರತಿಭಾ ಮತ್ತು ಕಿಶೋರ್

ನಿಮ್ಮಿಂದ ನಮ್ಮ ಮನೆಯವರಿಗೆ ಅವಮಾನ

ಕಳೆದ 3 ದಿನಗಳಿಂದ ಮಗುವಿಗೆ ನಡೆದಿದ್ದ ನೀರಿನ ಶಾಸ್ತ್ರದ ವೇಳೆ ಕೋಲಾರದಿಂದ ಹೊಸಕೋಟೆಗೆ ಕಿಶೋರ್ ತಾಯಿ ಅಕ್ಕ ಬಾವ ಸೇರಿದಂತೆ ಕುಟುಂಬಸ್ಥರೆಲ್ಲ ಬಂದಿದ್ದರಂತೆ. ನೀರಿನ ಶಾಸ್ತ್ರದ ಕಾರ್ಯಕ್ರಮದಲ್ಲಿ ಪ್ರತಿಭಾಳ ಕುಟುಂಬಸ್ಥರು ಕಿಶೋರ್ ಕುಟುಂಬಸ್ಥರಿಗೆ ಸರಿಯಾಗಿ ಗೌರವ ಕೊಟ್ಟಿರಲಿಲ್ಲವಂತೆ. ಜೊತೆಗೆ ಇದೇ ವಿಚಾರವಾಗಿ ಮನೆಗೆ ಹೋದ ನಂತರ ಕುಟುಂಬಸ್ಥರು ಕಿಶೋರ್ ಮೇಲೆ ಗಲಾಟೆ ಮಾಡಿದ್ರಂತೆ. ಬಳಿಕ ಕಿಶೋರ್‌ ಪ್ರತಿಭಾಗೆ ಕರೆ ಮಾಡಿ, ನಿಮ್ಮಿಂದ ನಮ್ಮ ಮನೆಯವರಿಗೆ ಅವಮಾನ ಆಯ್ತು ಗಲಾಟೆ ಮಾಡಿದನಂತೆ. ಇದು ಆರೋಪಿ ಕೊಟ್ಟಿರೋ ಕಾರಣ. ಆದ್ರೆ, ಪ್ರತಿಭಾಳ ತಂದೆ ಹೇಳೋದೇ ಬೇರೆ.

ಪ್ರತಿಭಾ ಅಂತ್ಯ ಸಂಸ್ಕಾರವನ್ನ ಕುಟುಂಬಸ್ಥರು ಕೋಲಾರದ ಗಂಡನ ಊರಿನಲ್ಲೆ ಮಾಡಿದ್ದಾರೆ. ಗಂಡನ ಮನೆಯ 5 ಜನರ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಡ ಕಿಶೋರ್, ಪುಷ್ಪಲತಾ, ರಾಕೇಶ್, ಮತ್ತು ಭವ್ಯ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಂಡ ಕಿಶೋರ್‌ನ ಅನುಮಾನದ ರೋಗವೇ ಈ ಘಟನೆಗೆ ಕಾರಣ ಎಂದು ಆರೋಪಿಸಿರೋ, ಪ್ರತಿಭಾ ಕುಟುಂಬದವರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಆದ್ರೆ, ಗಂಡನ ಸಂಶಯದಿಂದ ಪತ್ನಿ ಸಾವಿಗೀಡಾದರೆ, ಏನೂ ತಪ್ಪು ಮಾಡದ ಹಸುಗೂಸು, ಅಮ್ಮನ ಪ್ರೀತಿ ಇಲ್ಲದೆ ತಬ್ಬಲಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತ್ತೆ ಮನೆಯಲ್ಲಿ ನೀರಿನ ಶಾಸ್ತ್ರಕ್ಕಿಲ್ಲ ಗೌರವ.. ಹೆಂಡತಿಯನ್ನೇ ಕೊಂದು ಹಾಕಿದ ಕಾನ್ಸ್​ಟೇಬಲ್​​!

https://newsfirstlive.com/wp-content/uploads/2023/11/BNG_WIFE.jpg

Load More