newsfirstkannada.com

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಕೃತ್ಯ.. ಹೆಂಡತಿಯ ಕೈಬೆರಳುಗಳನ್ನು ಕಚ್ಚಿ ಕಚ್ಚಿ ತಿಂದ ಪತಿರಾಯ..!

Share :

03-08-2023

    20 ವರ್ಷಗಳಿಂದ ನಿರಂತರ ಕಿರುಕುಳ

    ಕೋಣನಕುಂಟೆ ಠಾಣೆಯಲ್ಲಿ ಕೇಸ್

    ವಿಕೃತ ಮನಸ್ಸಿನ ಗಂಡನ ಉಪಟಳ

ಬೆಂಗಳೂರು: ಕೆಲವು ವಿಚಿತ್ರ ವ್ಯಕ್ತಿಗಳು ಕೋಪಕ್ಕೆ ಬುದ್ಧಿಕೊಟ್ಟು ಏನೆಲ್ಲ ಮಾಡುತ್ತಾರೆ ಎಂದು ಹೇಳೋದೇ ಕಷ್ಟ. ಇಲ್ಲೊಬ್ಬ ಭೂಪ, ತನ್ನ ಹೆಂಡತಿಯ ಕೈಬೆರಳುಗಳನ್ನೇ ಕಚ್ಚಿ ಕಚ್ಚಿ ತಿಂದಿದ್ದಾನೆ.

23 ವರ್ಷಗಳ ಹಿಂದೆ ಮದುವೆ

ಸುಮಾರು 23 ವರ್ಷಗಳ ಹಿಂದೆ ಆರೋಪಿ ವಿಜಯಕುಮಾರ್, ಪುಷ್ಪಾ ಎಂಬಾಕೆಯನ್ನು ಮದುವೆಯಾಗಿದ್ದ. ತುಂಬಿದ ಸಂಸಾರಕ್ಕೆ ಆ ದೇವರು ಓರ್ವ ಪುತ್ರನನ್ನೂ ಕರುಣಿಸಿದ್ದ. ಮದುವೆಯಾದ ಆರಂಭದಲ್ಲಿ ಚೆನ್ನಾಗಿಯೇ ಇದ್ದ, ವಿಜಯ್ ಕುಮಾರ್ ವರ್ಷಗಳು ಉರುಳುತ್ತಿದ್ದಂತೆ ಹೆಂಡತಿ ಜೊತೆ ಕಿರಿಕ್ ಮಾಡಲು ಶುರುಮಾಡಿದ್ದನಂತೆ.

ಪತ್ನಿ ಜೊತೆ ಆರೋಪಿ ವಿಜಯ್​ಕುಮಾರ್
ಪತ್ನಿ ಜೊತೆ ಆರೋಪಿ ವಿಜಯ್​ಕುಮಾರ್

20 ವರ್ಷಗಳಿಂದ ಗಂಡನ ಟಾರ್ಚರ್ ಸಹಿಸಿಕೊಂಡಿದ್ದ ಪುಷ್ಪಾ, ಇತ್ತೀಚೆಗಿನ ವರ್ಷಗಳಲ್ಲಿ ಗಂಡನಿಂದ ದೂರವಾಗಿದ್ದಳು. ಗಂಡನ ಬಿಟ್ಟು ಮಗನ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಜುಲೈ 28 ರಂದು ಆರೋಪಿ ವಿಜಯ್​ಕುಮಾರ್​ಗೆ ಇದ್ದಕ್ಕಿದ್ದ ಹಾಗೆ ಪತ್ನಿ ನೆನಪಾಗಿದ್ದಾಳೆ. ಪತ್ನಿ ಮನೆಗೆ ಬಂದ ಆತ, ಆಕೆಯ ಜೊತೆಗೆ ಜಗಳಕ್ಕೆ ಮುಂದಾಗಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಎಡಗೈ ಬೆರಳನ್ನು ಕಚ್ಚಿಕಚ್ಚಿ ತಿಂದಿದ್ದಾನಂತೆ.

ಗಂಡನಿಂದ ಹಲ್ಲೆಗೆ ಒಳಗಾದ ಪತ್ನಿ ಪುಷ್ಪಾ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನನ್ನ ಎಡಗೈ ಬೆರಳುಗಳನ್ನು ಕಚ್ಚಿ ಕಚ್ಚಿ ತಿಂದಿದ್ದಾನೆ. ರೌಡಿಗಳನ್ನು ಬಿಟ್ಟು ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಆತನಿಂದ ನನ್ನ ಮತ್ತು ಮಗನ ಪ್ರಾಣಕ್ಕೆ ಅಪಾಯ ಇದೆ. ದಯವಿಟ್ಟು ಆತನಿಂದ ನನ್ನನ್ನು ಕಾಪಾಡಿ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಕೃತ್ಯ.. ಹೆಂಡತಿಯ ಕೈಬೆರಳುಗಳನ್ನು ಕಚ್ಚಿ ಕಚ್ಚಿ ತಿಂದ ಪತಿರಾಯ..!

https://newsfirstlive.com/wp-content/uploads/2023/08/BNG_FINGER.jpg

Load More