HDD, HDKಗೆ ಒಬ್ಬೊಬ್ಬರಾಗಿ ಅಭಿಪ್ರಾಯ ತಿಳಿಸಿದ JDS ಶಾಸಕರು
ಮಾಜಿ ಪ್ರಧಾನಿಗಳು ಎನ್ಡಿಎ ಮೈತ್ರಿಕೂಟದ ಬಗ್ಗೆ ಹೇಳುವುದೇನು..?
ಲೋಕ ಸಮರಕ್ಕೆ ದಳ ಯಾರ ಜೊತೆ ಹೆಜ್ಜೆ ಹಾಕುತ್ತೆ ಎನ್ನುವುದೇ ಪ್ರಶ್ನೆ
ಸರ್ ನೀವು NDA ಸಭೆಗೆ ಹೋಗ್ತೀರಾ, ಇಲ್ಲ ಮಹಾಘಟಬಂಧನ್ ಸಭೆಗೆ ಹೋಗ್ತೀರಾ ಎಂದು ಕೇಳಿದ್ದ ಪ್ರಶ್ನೆಗೆ ಮಾಜಿ ಸಿಎಂ ಕುಮಾರಸ್ವಾಮಿ ನಮ್ಮನ್ನ ಯಾರು ಕರೆದಿಲ್ಲ ಎಂದಿದ್ರು. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಯಾರಿಗೆ ಬೆಂಬಲ ಸೂಚಿಸುತ್ತೆ ಅನ್ನೋ ವಿಚಾರಕ್ಕೆ ನಿನ್ನೆ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಸಿ ಎಲ್ಲಾ ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ.
ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಸಮರಾಭ್ಯಾಸ ಶುರುಮಾಡಿವೆ. ಮಿತ್ರಪಕ್ಷಗಳ ಜೊತೆ ಶಕ್ತಿ ಪ್ರದರ್ಶನ ಮಾಡ್ತಿವೆ. NDA ವಿಪಕ್ಷಗಳು ಇಂಡಿಯಾ ಅಸ್ತ್ರ ಪ್ರಯೋಗಿಸಿವೆ. ತಮ್ಮ ಮೈತ್ರಿ ಕೂಟಕ್ಕೆ ಇಂಡಿಯಾ ಅಂತಾ ಹೆಸರಿಟ್ಟು ಲೋಕಾ ಸಮರಕ್ಕೆ ನಾವ್ ರೆಡಿ ಅಂತಾ ತೊಡೆ ತಟ್ಟಿದೆ. ಇತ್ತ ವಿಪಕ್ಷಗಳ ಇಂಡಿಯಾ ಅಸ್ತ್ರಕ್ಕೆ ಕೌಂಟರ್ ಕೊಟ್ಟ ಬಿಜೆಪಿ ತನ್ನ ಮಿತ್ರಪಕ್ಷಗಳ ಜೊತೆಗೆ ಸಭೆ ಮಾಡಿ ಶಕ್ತಿ ಪ್ರದರ್ಶನ ಮಾಡಿದೆ.
ಹೀಗೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ತಾಲೀಮು ಶುರುಮಾಡಿದ್ರೆ, ಅತ್ತ ಜೆಡಿಎಸ್ ಮಾತ್ರ ಅತಂತ್ರಕ್ಕೆ ಸಿಲುಕಿತ್ತು. NDA ಹಾಗೂ ವಿಪಕ್ಷಗಳ ಸಭೆಗೆ ಯಾವುದೇ ಆಹ್ವಾನ ಬರದೇ ಒಂಟಿಯಾಗಿತ್ತು. ಬಳಿಕ ಜೆಡಿಎಸ್ ಯಾರ ಜೊತೆ ಮೈತ್ರಿ ಮಾಡಿಕೊಳ್ಳುತ್ತೆ ಎಂಬ ಕುತೂಹಲ ಮನೆ ಮಾಡಿತ್ತು. ಲೋಕ ಸಮರಕ್ಕೆ ದಳ ಯಾರ ಜೊತೆ ಹೆಜ್ಜೆ ಹಾಕುತ್ತೆ ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಲೋಕಸಭೆ ಚುನಾವಣೆಗೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೆ ಅಂತಾನೇ ಹೇಳಲಾಗ್ತಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸಸ್ಪೆಂಡ್ ಆದ ಬಿಜೆಪಿ ಶಾಸಕರ ವಿರುದ್ಧದ ಹೋರಾಟಕ್ಕೆ ಜೆಡಿಎಸ್ ಬೆಂಬಲ ಸೂಚಿಸಿ, ಅಧಿವೇಶನಕ್ಕೆ ಗೈರು ಹಾಜರಾಗಿತ್ತು. ಇದು ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ಸುಳಿವು ನೀಡಿತ್ತು. ಆದ್ರೆ ನಿನ್ನೆ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಲೆಕ್ಕಾಚಾರ ಬುಡಮೇಲಾಗಿದೆ. ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಚುನಾವಣೆ ಎದುರಿಸೋಕೆ ಜೆಡಿಎಸ್ ನಿರ್ಧರಿಸಿದೆ.
ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಮಹತ್ವದ ಮೀಟಿಂಗ್
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಮಹತ್ವದ ಮೀಟಿಂಗ್ ಮಾಡಲಾಯ್ತು. ರಾಜ್ಯ ರಾಜಕೀಯ ಪರಿಸ್ಥಿತಿ ಹಾಗೂ ಲೋಕಸಭೆ ಚುನಾವಣೆ ಕುರಿತು ಚರ್ಚೆ ನಡೆಸಲಾಯ್ತು. ಈ ವೇಳೆ ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆಯಂತೆ.
ದಳಪತಿಗಳ ‘ದಾಳ’
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಹೆಚ್ಡಿಡಿ ಹೇಳಿಕೆ
ಜೆಡಿಎಸ್ ಶಾಸಕರು, ಎಂಎಲ್‌ಸಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ನಮ್ಮ ಪಕ್ಷಕ್ಕಾಗಿರುವ ಅನ್ಯಾಯವನ್ನು ಜನರ ಮುಂದೆ ಇಟ್ಟು, ನಮ್ಮ ಸಾಮಾರ್ಥ್ಯವನ್ನ ಸಾಬೀತು ಮಾಡ್ತೇವೆ. ರಾಜಕೀಯ ಲಾಭ ಮತ್ತು ತೋರಿಕೆಗಾಗಿ ಹೇಳುತ್ತಿಲ್ಲ. ಜೀವನದ್ದುಕ್ಕೂ ಹೋರಾಟ ಮಾಡ್ತೇವೆ. ಎನ್ಡಿಎನೂ ಇಲ್ಲ, ಇಂಡಿಯಾನೂ ಇಲ್ಲ. ಸ್ವತಂತ್ರವಾಗಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ ಅಂತಾ ಗುಡುಗಿದ್ರು.
‘ಸ್ವತಂತ್ರ ಹೋರಾಟ’
ಕರ್ನಾಟಕದ ಅಭಿವೃದ್ಧಿಗೆ ಆಗಿರುವಂತ ಅನ್ಯಾಯವನ್ನು ಎದುರಿಸುವಂತ ಸಾಮರ್ಥ್ಯ ಪ್ರಾದೇಶಿಕ ಪಕ್ಷಕ್ಕೆ ಇದೆ ಎನ್ನುವುದು ಸಾಬೀತು ಮಾಡಿ ತೋರಿಸುತ್ತೇವೆ. ಇದು ಕೇವಲ ತೋರ್ಪಡಿಕೆ, ರಾಜಕೀಯ ಲಾಭಕ್ಕಲ್ಲ. ಜೀವನದೂದ್ದಕ್ಕು ಹೋರಾಟ ಮಾಡುತ್ತಿದ್ದೇನೆ. ಯಾವ ಎನ್ಡಿಎನೂ ಇಲ್ಲ. ಸ್ವತಂತ್ರವಾಗಿ ಹೋರಾಟ ಮಾಡುತ್ತೇವೆ.
ಸದನದಲ್ಲಿ ಜೆಡಿಎಸ್, ಬಿಜೆಪಿ ಒಗ್ಗೂಡಿ ಹೋರಾಟ ಮಾಡಿದ್ದವು. ಇದಕ್ಕೆ ಯಾವುದೇ ಸಂಬಂಧವನ್ನು ದಯವಿಟ್ಟು ಕಲ್ಪಿಸಬೇಡಿ. ಪಕ್ಷದ ವಿಧಾನ ಪರಿಷತ್, ವಿಧಾನಸಭೆ ಸದಸ್ಯರು ಒಗ್ಗಟ್ಟಾಗಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಪ್ರಾದೇಶಿಕ ಪಕ್ಷವನ್ನು ಹೇಗೆ ಉಳಿಸಬೇಕು ಎನ್ನುವುದರ ಬಗ್ಗೆ ಸುದೀರ್ಘ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ.
ಹೆಚ್.ಡಿ ದೇವೇಗೌಡರು, ಮಾಜಿ ಪ್ರಧಾನಿ
ಜೆಡಿಎಸ್ ಮೈತ್ರಿ ಬಗ್ಗೆ ಎದ್ದಿದ್ದ ಗೊಂದಲಕ್ಕೆ ಖುದ್ದು ದೇವೇಗೌಡರೇ ತೆರೆ ಎಳೆದಿದ್ದಾರೆ. ಯಾವ ಪಕ್ಷದ ಜೊತೆಯಲ್ಲೂ ಮೈತ್ರಿ ಇಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಲೋಕಾ ಸಮರಕ್ಕೆ ಮುಂದಿನ ಜೆಡಿಎಸ್ ಹೋರಾಟ ಹೇಗಿರಲಿದೆ ಅಂತಾ ಕಾದು ನೋಡಬೇಕಷ್ಟೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ