newsfirstkannada.com

×

BREAKING: ಶಿವಾಜಿನಗರದ ಮಸೀದಿಗೆ ಬಾಂಬ್​ ಬೆದರಿಕೆ ಕರೆ.. ಪೊಲೀಸರಿಗೆ ಫೋನ್​ ಮಾಡಿದ ಆ ಅಪರಿಚಿತ ಯಾರು?

Share :

Published July 6, 2023 at 10:24am

Update July 6, 2023 at 10:34am

    ತಡರಾತ್ರಿ ಬಂದ ಕಾಲ್​ಗೆ ಬೆಚ್ಚಿ ಬಿದ್ದ ಬೆಂಗಳೂರು ಪೊಲೀಸರು..!

    ರಾತ್ರಿ 10 ಗಂಟೆ ಸುಮಾರಿಗೆ ಕಾಲ್​ ಮಾಡಿದ ವ್ಯಕ್ತಿಗಾಗಿ ಹುಡುಕಾಟ

    ಟೆರೆರಿಸ್ಟ್​ಗಳು ಬಾಂಬ್ ಇಟ್ಟಿದ್ದಾರೆಂದು ಕರೆ ಮಾಡಿದ ಅಪರಿಚಿತ

ಬೆಂಗಳೂರು: ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಟೆರೆರಿಸ್ಟ್​ಗಳು ಬಾಂಬ್ ಇಟ್ಟಿದ್ದಾರೆಂದು ರಾತ್ರಿ 10 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಫೋನ್​ ಕರೆ ಮಾಡಿದ್ದಾನೆ. ಇದರಿಂದ ಆತಂಕಗೊಂಡ ಪೊಲೀಸರು ಸ್ಥಳಕ್ಕಾಗಮಿಸಿ ರಾತ್ರಿಯೆಲ್ಲ ಪರಿಶೀಲನೆ ನಡೆಸಿದ್ದಾರೆ. ಆದರೆ ಮಸೀದಿಯಲ್ಲಿ ಯಾವುದೇ ಬಾಂಬ್​ ಅಥವಾ ಸ್ಫೋಟದ ವಸ್ತುಗಳು ಕಂಡುಬಂದಿಲ್ಲ. ಇದರಿಂದ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ನಿನ್ನೆ ರಾತ್ರಿ ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ವ್ಯಕ್ತಿಯೊಬ್ಬರು ರಾತ್ರಿ 10 ಗಂಟೆ ಸುಮಾರಿಗೆ 112 ನಂಬರ್​ಗೆ ಕಾಲ್ ಮಾಡಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಿವಾಜಿನಗರ ಪೊಲೀಸರು ರಾತ್ರಿಯೆಲ್ಲ ಮಸೀದಿಯನ್ನು ಪರಿಶೀಲನೆ ಮಾಡಿದ್ದಾರೆ. ಯಾವುದೇ ಸ್ಫೋಟದ ವಸ್ತು ಇಲ್ಲದ ಕಾರಣ ಇದೊಂದು ಸುಳ್ಳು ಮಾಹಿತಿ ಎಂದು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಪರಿಶೀಲನೆ ವೇಳೆ ಹಿರಿಯ ಪೊಲೀಸ ಅಧಿಕಾರಿಗಳು ಕೂಡ ಇದ್ದರು.

ಠಾಣೆಗೆ ಕರೆ ಮಾಡಿದ ವ್ಯಕ್ತಿ ಬೆಂಗಳೂರಿನಿಂದ ಹೊರಗಡೆ ಕುಳಿತು ಕಾಲ್ ಮಾಡಿದ್ದಾನೆ. ಸದ್ಯ ಪೊಲೀಸರಿಗೆ ಸುಳ್ಳು ಮಾಹಿತಿ ಕೊಟ್ಟ ಆರೋಪಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಶಿವಾಜಿನಗರದ ಮಸೀದಿಗೆ ಬಾಂಬ್​ ಬೆದರಿಕೆ ಕರೆ.. ಪೊಲೀಸರಿಗೆ ಫೋನ್​ ಮಾಡಿದ ಆ ಅಪರಿಚಿತ ಯಾರು?

https://newsfirstlive.com/wp-content/uploads/2023/07/SHIVAJINAGAR_Masjid.jpg

Load More