newsfirstkannada.com

‘ರಾಜ್ಯ ಸರ್ಕಾರ ಬೀಳಿಸೋದು, ಶಾಸಕರನ್ನು ಖರೀದಿ ಮಾಡೋದೇ BJP ಗುರಿ’- ಮಮತಾ ಬ್ಯಾನರ್ಜಿ ಗುಡುಗು

Share :

18-07-2023

    ತಾಯಿ ನಾಡನ್ನು ಪ್ರೀತಿಸುತ್ತಾ ಜನರಿಗಾಗಿ, ದೇಶಕ್ಕಾಗಿ ದುಡಿಯಬೇಕಾಗಿದೆ

    ಬಿಜೆಪಿ ದೇಶ ಮಾರಾಟ ಮಾಡಲು ಯತ್ನಿಸುತ್ತಿದ್ದು ನಾವು ಉಳಿಸಬೇಕಿದೆ

    ದಲಿತರು, ಅಲ್ಪಸಂಖ್ಯಾತರು, ಹಿಂದೂ, ಕ್ರೈಸ್ತ ಸೇರಿ ಎಲ್ಲರ ಪರವಾಗಿ ಕೆಲಸ

ಬೆಂಗಳೂರು: ಇವತ್ತಿನ ಸಭೆ ಯಶಸ್ವಿಯಾಗಿ ಫಲಪ್ರದವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ದಲಿತ, ಅಲ್ಪಸಂಖ್ಯಾತ, ಹಿಂದೂ ಹಾಗೂ ಕ್ರೈಸ್ತರು ಸೇರಿದಂತೆ ಎಲ್ಲ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಇಂದು ವಿಪಕ್ಷಗಳ ಮಹತ್ವದ ಸಭೆ ನಡೀತು. ಈ ಸಭೆ ಬಳಿಕ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಸಭೆ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತೇವೆ. ದಲಿತರು, ಅಲ್ಪಸಂಖ್ಯಾತರು, ಹಿಂದೂ, ಕ್ರೈಸ್ತರು ಸೇರಿ ಇನ್ನುಳಿದ ಸಮುದಾಯಗಳ ಪರ ನಿಂತು ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ಗುಡುಗಿದ ದೀದಿ, ಸರ್ಕಾರಗಳನ್ನು ಬೀಳಿಸುವುದು, ಶಾಸಕರನ್ನು ಖರೀದಿ ಮಾಡುವುದೇ ಬಿಜೆಪಿಯ ಗುರಿ ಆಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ, ಇಂಡಿಯಾವನ್ನು ಚಾಲೆಂಜ್ ಮಾಡುತ್ತಾ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ನಮ್ಮ ತಾಯಿ ನಾಡನ್ನು ಪ್ರೀತಿಸುತ್ತೇವೆ. ಜನರಿಗಾಗಿ, ದೇಶಕ್ಕಾಗಿ ದುಡಿಯುತ್ತಿದ್ದೇವೆ. ಮುಂದಿನ ನಮ್ಮ ಎಲ್ಲ ಹೋರಾಟಗಳು ಇಂಡಿಯಾ ಹೆಸರಲ್ಲಿ‌ ನಡೆಯಲಿವೆ. ನಮ್ಮನ್ನು ಎದುರಿಸಲು ಎನ್​ಡಿಎ ಮೈತ್ರಿ ಕೂಟಕ್ಕೆ ಸಾಧ್ಯವಾಗುತ್ತಾ ಎಂದು ಕಿಡಿ ಕಾಡಿಕಾರಿದರು.

ಸದ್ಯ ನಾವೆಲ್ಲ ಸೇರಿ ಬಿಜೆಪಿಯಿಂದ ಭಾರತವನ್ನು ಉಳಿಸಬೇಕಿದೆ. ದೇಶ ಮಾರಾಟ ಮಾಡಲು ಬಿಜೆಪಿ ಮುಂದಾಗುತ್ತಿದ್ದು ಪ್ರಜಾಪ್ರಭುತ್ವ ಖರೀದಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈಗಾಗಲೇ ದೇಶದಲ್ಲಿನ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂಡಿಯಾಗೆ ಗೆಲುವಾಗಿ, ಬಿಜೆಪಿ ಸೋತು ಹೋಗುತ್ತದೆ ಎಂದು ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ರಾಜ್ಯ ಸರ್ಕಾರ ಬೀಳಿಸೋದು, ಶಾಸಕರನ್ನು ಖರೀದಿ ಮಾಡೋದೇ BJP ಗುರಿ’- ಮಮತಾ ಬ್ಯಾನರ್ಜಿ ಗುಡುಗು

https://newsfirstlive.com/wp-content/uploads/2023/07/MAMATA_BANERJEE.jpg

Load More