newsfirstkannada.com

×

HD ಕುಮಾರಸ್ವಾಮಿ ಅವರಿಗೆ ನಿಜಕ್ಕೂ ಆಗಿದ್ದೇನು?; ಮಾಜಿ ಸಿಎಂ ಆರೋಗ್ಯದ ಬಗ್ಗೆ ಡಾ. ಸತೀಶ್ ಚಂದ್ರ ಸ್ಪಷ್ಟನೆ

Share :

Published August 30, 2023 at 7:40pm

    ತಡರಾತ್ರಿ ಹೆಚ್‌.ಡಿ ಕುಮಾರಸ್ವಾಮಿ ಅಪೋಲೊ ಆಸ್ಪತ್ರೆಗೆ ದಾಖಲು

    ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಬಂದಾಗ ಮಾತಿನಲ್ಲಿ ತೊದಲಿತ್ತು

    ಹೆಚ್‌ಡಿಕೆ ಆರೋಗ್ಯದ ಬಗ್ಗೆ ಆಸ್ಪತ್ರೆ ಡಾ. ಸತೀಶ್ ಚಂದ್ರ ಹೇಳಿದ್ದೇನು?

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತಡರಾತ್ರಿ 3.40ರ ಸುಮಾರಿಗೆ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಈಗಾಗಲೇ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಸದ್ಯ ಕುಮಾರಸ್ವಾಮಿ ಅವರ ಆರೋಗ್ಯ ಚೇತರಿಕೆ ಕಂಡಿದ್ದು, ಸಣ್ಣ ಸ್ಟ್ರೋಕ್ ಆಗಿತ್ತು ಎಂದು ಅಪೋಲೊ ಆಸ್ಪತ್ರೆಯ ವೈದ್ಯ ಸತೀಶ್ ಚಂದ್ರ ಅವರು ಮಾಹಿತಿ ನೀಡಿದ್ದಾರೆ.

ಡಾ. ಸತೀಶ್ ಚಂದ್ರ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಗ್ಯ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದರು. ಮಧ್ಯರಾತ್ರಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಸಣ್ಣ ಸ್ಟ್ರೋಕ್​ ಕಾಣಿಸಿಕೊಂಡಿದೆ. ಈ ರೀತಿ ಕಾಯಿಲೆಯಿಂದ ರಕ್ಷಣೆ ಮಾಡುವುದು ಬಹಳ ಮುಖ್ಯ. ಇಂತಹ ಸ್ಟ್ರೋಕ್ ಕಾಣಿಸಿಕೊಂಡ 3 ಗಂಟೆ ಒಳಗೆ ದೊಡ್ಡ ಆಸ್ಪತ್ರೆಗೆ ಬಂದರೆ ಗುಣಮುಖ ಮಾಡಬಹುದು. HDK ತಕ್ಷಣ ಆಸ್ಪತ್ರೆಗೆ ಬಂದಿದ್ದರಿಂದ ಚಿಕಿತ್ಸೆ ನೀಡಲಾಗಿದೆ. ಅವರ ಎಡ ಭಾಗದ ದೇಹದೊಳಗೆ ರಕ್ತನಾಳದ ಸಮಸ್ಯೆಯಾಗಿದೆ. ಹೀಗಾಗಿ ದೇಹದ ಬಲಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿತ್ತು ಎಂದು ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸತೀಶ್ ಚಂದ್ರ ಹೇಳಿದ್ದಾರೆ.

HD ಕುಮಾರಸ್ವಾಮಿ, ಮಾಜಿ ಸಿಎಂ

ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಬಂದಾಗ ಮಾತಿನಲ್ಲಿ ತೊದಲಿತ್ತು. ಕೈನಲ್ಲಿ ವೀಕ್ನೆಸ್ ಇತ್ತು. ವಿಂಡೋ ಪಿರೀಯಡ್ ಹಂತ ಇರುವ ಅವಧಿಯಲ್ಲಿ ಕರೆದುಕೊಂಡು ಬಂದಿದ್ದಾರೆ. ತಕ್ಷಣವೇ ಪರಿಶೀಲನೆ ಮಾಡಿ ಎಂಆರ್​ಐ ಸ್ಕ್ಯಾನ್ ಮಾಡಿ ಚಿಕಿತ್ಸೆಯನ್ನ ತಕ್ಷಣಕ್ಕೆ ನೀಡಲಾಗಿದೆ. ಹೀಗಾಗಿ ಬೇಗ ಅಂದರೆ ಕೇವಲ 1 ಗಂಟೆಯಲ್ಲಿ ಸುಧಾರಿಸಿಕೊಂಡಿದ್ದಾರೆ. ಈಗೇನೂ ಸಮಸ್ಯೆ ಇಲ್ಲ. ಎಲ್ಲರ ಜೊತೆಗೆ ಚೆನ್ನಾಗಿ ಮಾತನಾಡುತ್ತಿದ್ದು ಬೆಡ್​ ಮೇಲೆ ಕುಳಿತು ಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಹೃದಯವು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು ರಕ್ತ ಚಲನೆ ಕಡಿಮೆ ಇದ್ದಿದ್ದರಿಂದ ಈ ಸ್ಟ್ರೋಕ್ ಸಮಸ್ಯೆ ರಾತ್ರಿ ಕಾಣಿಸಿತ್ತು. ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ. ನಾಳೆ ಬೇರೆ ವಾರ್ಡ್​ಗೆ ಶಿಫ್ಟ್ ಮಾಡುತ್ತೇವೆ. ಯಾವುದೇ ತೊಂದರೆ ಇಲ್ಲ. ಕುಮಾರಸ್ವಾಮಿ ಅವರಿಗೆ ವಿಶ್ರಾಂತಿಯೇನು ಬೇಕಾಗಿಲ್ಲ. ಎರಡ್ಮೂರು ದಿನಗಳ ಬಳಿಕ ಕೆಲಸ ಪ್ರಾರಂಭಿಸಬಹುದು ಎಂದು ಹಿರಿಯ ವೈದ್ಯರು ಹೇಳಿದ್ದಾರೆ.

ಇನ್ನು ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್​ನ ಅಧಿಕೃತ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

HD ಕುಮಾರಸ್ವಾಮಿ ಅವರಿಗೆ ನಿಜಕ್ಕೂ ಆಗಿದ್ದೇನು?; ಮಾಜಿ ಸಿಎಂ ಆರೋಗ್ಯದ ಬಗ್ಗೆ ಡಾ. ಸತೀಶ್ ಚಂದ್ರ ಸ್ಪಷ್ಟನೆ

https://newsfirstlive.com/wp-content/uploads/2023/08/HD_KUMARASWAMY.jpg

Load More