newsfirstkannada.com

VIDEO: ಕಾರ್​​​, 3 ಬೈಕ್​​ಗಳ ಮಧ್ಯೆ ಭಯಾನಕ ಆ್ಯಕ್ಸಿಡೆಂಟ್​​.. ಅಸಲಿಗೆ ಆಗಿದ್ದೇನು..?

Share :

13-11-2023

    ಕಾರಿನ ಡಿಕ್ಕಿ ರಭಸಕ್ಕೆ ಮೇಲೆ‌ ಹಾರಿ‌ ಬಿದ್ದ ಬೈಕ್ ಸವಾರ

    ಚಾಲಕನ ನಿಯಂತ್ರಣ ತಪ್ಪಿ 3 ಬೈಕ್​ಗಳಿಗೆ ಕಾರು ಡಿಕ್ಕಿ

    ಅಪಘಾತದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು 3 ಬೈಕ್​ಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದ ಘಟನೆ ಹುಳಿಮಾವು ಬಳಿಯ ಕಾಳೇನ ಅಗ್ರಹಾರ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೈಕ್ ಸವಾರ ಕಿರಣ್, ಜಸ್ಮಿತಾ ಹಾಗೂ ಬಸಂತ್ ಕುಮಾರ್​ ಗಾಯಗೊಂಡವರು. ಆದ್ರೆ ಜಸ್ಮಿತಾಗೆ ಗಂಭೀರ ಗಾಯಗಳಾಗಿವೆ. ಅಗ್ರಹಾರ ರಸ್ತೆಯಲ್ಲಿ ವಾಹನಗಳು ಸ್ಲೋ ಮೂವಿಂಗ್​ನಲ್ಲಿರುತ್ತಾವೆ. ಈ ವೇಳೆ ಅಭಿಷೇಕ್ ಅಗರವಾಲ್ ಕಾರು ಚಾಲನೆ ಮಾಡುತ್ತಿದ್ದ. ಆಗ ನಿಯಂತ್ರಣ ತಪ್ಪಿ ಮುಂದಿದ್ದ ಬೈಕ್​ ಸವಾರನಿಗೆ ಮೊದಲು ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಮೇಲೆ ಹಾರಿ ಇನ್ನೊಂದು ಕಾರಿನ ಮೇಲೆ ಬಿದ್ದಿದ್ದಾನೆ.

ನಂತರ ಕಾರು ಮುಂದಿನ ಇನ್ನೆರಡು ಬೈಕ್​ಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದು ಹಾಗೆ ಹೋಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದ್ರೆ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾರ್​​​, 3 ಬೈಕ್​​ಗಳ ಮಧ್ಯೆ ಭಯಾನಕ ಆ್ಯಕ್ಸಿಡೆಂಟ್​​.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/11/CAR_ACCIDENT.jpg

Load More