ಪಾನಮತ್ತರಾದ ಯುವತಿ ಮತ್ತು ಕೆಲ ಯುವಕರಿಂದ ಹುಚ್ಚಾಟ
ಕೆಲ ಸಾರ್ವಜನಿಕರಿಗೆ ಹಾಗೂ ಪೊಲೀಸರ ಮೇಲೆ ಹಲ್ಲೆ ಆರೋಪ
ಕಾರು ಚಾಲನೆಯಲ್ಲಿದ್ರೂ ಮೇಲೆ ಏರಿ ರೌಡಿಯಂತೆ ಗರ್ಲ್ ಪೋಸ್
ಬೆಂಗಳೂರು: ಕೋರಮಂಗಲದ ಡ್ರಂಕನ್ ಡ್ಯಾಡಿ ಎಂಬ ಪಬ್ ಮುಂದೆ ಯುವತಿಯರಿಬ್ಬರು ಪಾನಮತ್ತರಾಗಿ ಸಾರ್ವಜನಿಕರು ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ ರಸ್ತೆಯಲ್ಲಿ ಬರುತ್ತಿದ್ದ ಕಾರಿನ ಮೇಲೆ ಕುಳಿತು, ನಿಂತು ಕೂಗಿ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಇದರಿಂದ ಕೆಲ ಗಂಟೆ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಸವಾರರು ತೊಂದರೆ ಅನುಭವಿಸಿದರು.
ಡ್ರಂಕನ್ ಡ್ಯಾಡಿ ಪಬ್ ಮುಂದೆ ಇಬ್ಬರು ಯುವತಿಯರು ಹಾಗೂ ಯುವಕರು ನಿನ್ನೆ ರಾತ್ರಿ 12:30 ರಿಂದ 1 ಗಂಟೆ ಸಮಯದಲ್ಲಿ ದೊಡ್ಡ ಹೈಡ್ರಾಮವನ್ನೇ ಮಾಡಿದ್ದಾರೆ. ಕಾರಿನ ಮೇಲೆ ಏರಿ ಕೂಳಿತುಕೊಂಡು ಪೋಸ್ ಕೊಟ್ಟಿದ್ದಲ್ಲದೇ, ನಿಂತು ಕೂಗಾಡಿದ್ದಾಳೆ. ಇನ್ನೊಬ್ಬ ಯುವತಿ ನಿಲ್ಲೋಕು ಆಗದೇ ರಸ್ತೆಯಲ್ಲೇ ಅಡ್ಡಾಡ್ಡ ಉದ್ದುದ್ದ ಮಲಗಿ ಹೊರಳಾಡಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯರು, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪವೂ ಈ ಯುವತಿಯರ ಮೇಲೆ ಕೇಳಿ ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹೋಗಿ ಪುಂಡಾಟ ಮಾಡುತ್ತಿದ್ದವರನ್ನ ವಶಕ್ಕೆ ಪಡೆದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ