newsfirstkannada.com

ಮಣಿಪುರ ಸೇರಿ ಕೆಲ ರಾಜ್ಯಗಳಲ್ಲಿನ ಅಭದ್ರತೆ ತೊಡೆದು ಹಾಕಲು ‘INDIA’ ಉದಯ; DCM ಡಿ.ಕೆ ಶಿವಕುಮಾರ್

Share :

15-08-2023

    ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೇನು?

    ಗದ್ದಲ ಬೇಡವೆಂದು ತಮಿಳುನಾಡು ಸರ್ಕಾರಕ್ಕೆ ಡಿಕೆಶಿ ಮನವಿ

    ಅಭದ್ರತೆ ನಿವಾರಣೆಗೆ ಕರ್ನಾಟಕದಲ್ಲಿ INDIA ಉದಯವಾಗಿದೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಜ್ಯದ ಜನತೆಗೆ ಶುಭಾಶಯಗಳನ್ನು ಕೋರಿದರು.

ಧ್ವಜಾರೋಹಣ ನಂತರ ಮಾಧ್ಯಮದ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಮಣಿಪುರ ಸೇರಿಂದತೆ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಅಭದ್ರತೆ ಇದೆ. ಇವತ್ತು ಈ ದೇಶದ ಐಕ್ಯತೆ ಸಮಗ್ರತೆಯನ್ನ ಕಾಪಾಡಬೇಕಿದೆ. ಭಾರತದ ಉಳಿವಿಗಾಗಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು. ದೇಶದ ಕೆಲವು ರಾಜ್ಯಗಳಲ್ಲಿ ಮೂಡಿರುವ ಅಶಾಂತಿ, ಆರ್ಥಿಕ ಸಮಸ್ಯೆಗಳು ಕಂಟಕ ಉಂಟು ಮಾಡಬಲ್ಲವು. ಇದನ್ನು ತೊಡೆದು ಹಾಕುಲು ಕರ್ನಾಟಕದಲ್ಲಿ INDIA ಉದಯವಾಗಿದ್ದು, ಇದು ರಕ್ಷಣೆಗೆ ಮುಂದಾಗಲಿದೆ ಎಂದು ಹೇಳಿದರು.

ಕಾವೇರಿ ನೀರಿಗಾಗಿ ತಮಿಳುನಾಡು ತಗಾದೆ

ಇದೇ ವೇಳೆ ಕಾವೇರಿ ನೀರಿಗಾಗಿ ತಮಿಳುನಾಡು ತಗಾದೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರೈತರಿಗೆ ಮುನ್ನೆಚ್ಚರಿಕೆ ಕೊಟ್ಟಿದ್ದು ಎಷ್ಟು ನೀರು ಬಿಡಬೇಕೋ ಅಷ್ಟು ನೀರನ್ನು ಬಿಡಲು ಹೇಳಿದ್ದೇವೆ. ಗದ್ದಲ ಬೇಡವೆಂದು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈಗಾಗಲೇ 10 ಟಿಎಂಸಿ ನೀರು ಬಿಡಲು ಬದ್ಧರಿದ್ದೇವೆ ಎಂದು ಹೇಳಿದರು.

ಕಳೆದ ಬಾರಿ 400 ಟಿಎಂಸಿ ನೀರು ಸಮುದ್ರಕ್ಕೆ ಹೋಗಿದೆ. ನೀರು ಬಂದರೆ ನಾವು ಬಿಡಲು ತಯಾರಿದ್ದೇವೆ. ಮೇಕೆದಾಟು ಅಣೆಕಟ್ಟು ಕಟ್ಟಿದರೆ ನಿಮಗೂ ಅನುಕೂಲವಾಗಲಿದೆ. ಇದಕ್ಕೆ ತಮಿಳುನಾಡು ಸರ್ಕಾರ ಅವಕಾಶ ಮಾಡಿಕೊಡಬೇಕು. ಅವಕಾಶ ಕೊಟ್ಟಿಲ್ಲ ಎಂದರೆ ನಿಮಗೆ ನಷ್ಟವಾಗಲಿದೆ. ನಿಮ್ಮ ಅನುಕೂಲಕ್ಕಾಗಿ ಮೇಕೆದಾಟು ಇದೆ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರ ಸೇರಿ ಕೆಲ ರಾಜ್ಯಗಳಲ್ಲಿನ ಅಭದ್ರತೆ ತೊಡೆದು ಹಾಕಲು ‘INDIA’ ಉದಯ; DCM ಡಿ.ಕೆ ಶಿವಕುಮಾರ್

https://newsfirstlive.com/wp-content/uploads/2023/08/DK_SHIVAKUMAR.jpg

Load More