Advertisment

ಇಂದು ಇಡೀ ದಿನ CM ಜನತಾ ದರ್ಶನ.. ಸಿದ್ದರಾಮಯ್ಯರಿಂದ ಪರಿಹಾರ ಬೇಕೆಂದರೆ ಈ ದಾಖಲೆ ಮಿಸ್ ಮಾಡಬೇಡಿ!

author-image
Bheemappa
Updated On
ಇಂದು ಇಡೀ ದಿನ CM ಜನತಾ ದರ್ಶನ.. ಸಿದ್ದರಾಮಯ್ಯರಿಂದ ಪರಿಹಾರ ಬೇಕೆಂದರೆ ಈ ದಾಖಲೆ ಮಿಸ್ ಮಾಡಬೇಡಿ!
Advertisment
  • ಮುಖ್ಯಮಂತ್ರಿ ಜನಸ್ಪಂದನದಲ್ಲಿ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸಿಗತ್ತದೆ!
  • ಲೋಕಸಭೆ ಚುನಾವಣೆಗೂ ಮುನ್ನ ಜನರನ್ನು ತಲುಪಲು ಜನತಾ ಮಾರ್ಗ
  • ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ಪೂರ್ಣಾವಧಿ ಜನತಾ ದರ್ಶನ

ಇಂದು ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಕಾರ್ಯಕ್ಕೆ ಇಳಿಯುತ್ತಿದ್ದಾರೆ. ಬೆಳಗ್ಗೆ 9.30 ಗಂಟೆಯಿಂದ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಸಿಎಂ ಸಚಿವಾಲಯವು ಸಕಲ ಸಿದ್ಧತೆ ಮಾಡಿಕೊಂಡಿದೆ.

Advertisment

ಜನತಾ ದರ್ಶನ ಇದು ಜನರ ದರ್ಶನವಾಗಿದೆ. ಜನರ ಸಮಸ್ಯೆಗಳ ದರ್ಶನ. ಸ್ಥಳೀಯ ಸಮಸ್ಯೆಗಳನ್ನ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಹಳೆ ಪರಂಪರೆಯ ಹೊಸ ವಿಧಾನ. ನಾಗರಿಕರ ನೋವು-ನಲಿವಿಗೆ ಸ್ಪಂದಿಸುವ ಮಹತ್ಕಾರ್ಯ. ಸಾರ್ವಜನಿಕರ ಅಹವಾಲು ಸ್ವೀಕರಿಸುವ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಕಾಳಜಿ ಈ ಜನತಾ ದರ್ಶನದ ಹಿಂದಿದೆ.

[caption id="attachment_32275" align="aligncenter" width="800"]publive-image ಸಿಎಂ ಸಿದ್ದರಾಮಯ್ಯ[/caption]

ಜನರ ಬಳಿಗೆ ಸಿದ್ದರಾಮಯ್ಯ ಸರ್ಕಾರದ ವಿನೂತನ ಹೆಜ್ಜೆ!

ಸಿಎಂ ಸಿದ್ದರಾಮಯ್ಯರ 2.0 ಸರ್ಕಾರದ ಆಗಮನದ ಬಳಿಕ ಜನತಾ ದರ್ಶನಕ್ಕೆ ಚಾಲನೆ ಸಿಕ್ಕಿದೆ.. ಕಳೆದ ಸೆಪ್ಟೆಂಬರ್​​ನಲ್ಲೇ ಒಂದು ಹಂತದ ಜನತಾ ದರ್ಶನ ಅಂತ್ಯವಾಗಿದ್ದು, ಎರಡನೇ ಚರಣಕ್ಕೆ ಇವತ್ತು ಮುಹೂರ್ತ ಫಿಕ್ಸ್​ ಆಗಿದೆ.. ಸ್ವತಃ ಸಿಎಂ ಸಿದ್ದರಾಮಯ್ಯ ಒಂದಿಡಿ ದಿನ ಜನರ ಸಮಸ್ಯೆಗಳಿಗೆ ಕಿವಿಯಾಗಿ ಪರಿಹಾರದ ಮಂತ್ರದಂಡವಾಗಿ ಜನತಾ ದರ್ಶನದಲ್ಲಿ ನಿರತರಾಗ್ತಿದ್ದಾರೆ..

Advertisment

ಈಗಾಗಲೇ ಕೆಲವು ಬಾರಿ ಜನತಾ ದರ್ಶನ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿರುವ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಗೂ ಮುನ್ನ ಜನರನ್ನು ತಲುಪಲು ಜನತಾ ಮಾರ್ಗ ಆಯ್ದುಕೊಂಡಿದ್ದಾರೆ.. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ಒಂದು ದಿನದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ..

ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಲು ಬರುವ ನಾಗರಿಕರು ತಮ್ಮ ಗುರುತಿನ ಪತ್ರಗಳನ್ನ ತರೋದು ಕಡ್ಡಾಯವಾಗಿದೆ. ಆಧಾರ್‌ ಕಾರ್ಡ್‌ ಅಥವಾ ಪಡಿತರ ಚೀಟಿ ತರಲು ಕೋರಲಾಗಿದೆ ರಾಜ್ಯ ಸರ್ಕಾರ ಟ್ವೀಟ್​​ ಮಾಡಿ ಮಾಹಿತಿ ನೀಡಿದೆ. ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಬೆಳಿಗ್ಗೆ 9.30 ಗಂಟೆಯಿಂದ ಜನಸ್ಪಂದನ ನಡೆಯಲಿದೆ.

ಪರಿಹಾರಕ್ಕೆ ಆದ್ಯತೆ, ಅಧಿಕಾರಿ ವರ್ಗ ಕಡ್ಡಾಯ ಹಾಜರಿಗೆ ಸೂಚನೆ

ಇದು ಸಿದ್ದರಾಮಯ್ಯ 2ನೇ ಅವಧಿಗೆ ಸಿಎಂ ಆದ ಬಳಿಕ ನಡೆಯುತ್ತಿರುವ ಪೂರ್ಣಾವಧಿ ಜನತಾ ದರ್ಶನ. ಹೀಗಾಗಿ ಸಕಲ ಮುನ್ನೆಚ್ಚರಿಕೆ ವಹಿಸಲಾಗಿದೆ. ಮುಖ್ಯಮಂತ್ರಿ ಸಚಿವಾಲಯವು ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಸಂಜೆ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದ್ರು.

Advertisment

ಜನಸ್ಪಂದನಕ್ಕೆ ಹೇಗಿದೆ ವ್ಯವಸ್ಥೆ?

  • ಜನತಾ ದರ್ಶನದಲ್ಲಿ ಕಡ್ಡಾಯ ಹಾಜರಿರಲಿದ್ದಾರೆ ಅಧಿಕಾರಿಗಳು
  • ಜನತಾ ದರ್ಶನದಲ್ಲಿ ವೈದ್ಯ ಸಿಬ್ಬಂದಿ ಸ್ಥಳದಲ್ಲಿರಲು ಸೂಚನೆ
  • ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ 20 ಕೌಂಟರ್​ ಓಪನ್​​​
  • ಜನರ ಅರ್ಜಿ ಸ್ವೀಕರಿಸಲಿರುವ ನೂರಕ್ಕೂ ಹೆಚ್ಚು ಅಧಿಕಾರಿಗಳು
  • ವಿಶೇಷ ಚೇತನರು & ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್​
  • ಅಹವಾಲುಗಳ ದಾಖಲೀಕರಣಕ್ಕೆ ಅಧಿಕಾರಿ ತಂಡದ ಕಾರ್ಯ

ಸ್ವೀಕರಿಸಿದ ಅಹವಾಲುಗಳನ್ನ ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಾಗಲಿದೆ. ಬಳಿಕ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಸಿಎಂ ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಿದ್ದಾರೆ.. ಇನ್ನು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜನಸ್ಪಂದನಾ ಕಾರ್ಯಕ್ರಮಕ್ಕೆ ಭಾರೀ ಭದ್ರತೆ ಆಯೋಜಿಸಲಾಗಿದೆ.

ಜನಸ್ಪಂದನಕ್ಕೆ ಹೇಗಿದೆ ಭದ್ರತೆ?

  • ಒಬ್ಬರು ಡಿಸಿಪಿ, ಮೂವರು ಜನ ಎಸಿಪಿ ನೇತೃತ್ವದಲ್ಲಿ ಭದ್ರತೆ
  • 9-10 ಜನ ಪೊಲೀಸ್ ಇನ್ಸ್​​​ಪೆಕ್ಟರ್​​​​, 15 ಜನ ಪಿಎಸ್​​ಐಗಳು
  • ಭದ್ರತೆಗೆ 500 ಪೊಲೀಸ್ ಕಾನ್ಸ್​​​​ಟೇಬಲ್​ಗಳ ನಿಯೋಜನೆ
  • ಅಹವಾಲು ಸ್ವೀಕಾರ ಮತ್ತು ಪರಿಶೀಲನೆಗೆ ಅಧಿಕಾರಿ ವರ್ಗ
  • ಎಲ್ಲ ಇಲಾಖೆಗಳ ಅಧಿಕಾರಿಗಳು & ಸಿಬ್ಬಂದಿ ಸಂಖ್ಯೆ 350
  • ಇತರೆ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1,000 ಜನ ಕೆಲಸ
  • ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರಿಗೆ ವ್ಯವಸ್ಥೆ
  • ಕುಡಿಯುವ ನೀರು, ಆಹಾರ, ಶೌಚಾಲಯ, ಇತರ ವ್ಯವಸ್ಥೆ
Advertisment

[caption id="attachment_32276" align="alignnone" width="800"]publive-image ಸಿಎಂ ಜನತಾ ದರ್ಶನ[/caption]

ಜನತಾ ದರ್ಶನ, ಜನರ ದನಿಗೆ ವೇದಿಕೆ ಆಗಬೇಕಿದೆ. ನೊಂದು ಬೆಂದವರ ಸಮಸ್ಯೆಗಳಿಗೆ ಪರಿಹಾರ ಕಾಣಬೇಕಿದೆ. ಕೇವಲ ಫೋಟೋ ಸೆಷನ್​ಗೆ ಸೀಮಿತವಾಗದೇ ನಿಜ ಜನಸ್ಪಂದನವಾದ್ರೆ, ಬಡವರ ಭಾರ ಕಡಿಮೆ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment