newsfirstkannada.com

ಅಕ್ರಮ ಸಂಬಂಧಕ್ಕೆ ಕತ್ತು ಹಿಸುಕಿ ಹೆಂಡತಿ ಹತ್ಯೆ; ಆಮೇಲೆ ಕಿಲಾಡಿ ಗಂಡ ಮಾಡಿದ್ದೇನು ಗೊತ್ತಾ?

Share :

09-11-2023

  ಮೊದಲು ಅಸಹಜ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು

  ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಿ, ಆತ್ಮಹತ್ಯೆ ಕಥೆ ಕಟ್ಟಿದ್ದ ಆರೋಪಿ..!

  ಇಷ್ಟೇಲ್ಲ ಐಡಿಯಾ ಮಾಡಿದ್ರೂ ಕೃತ್ಯ ಎಸಗಿದವ ಸಿಕ್ಕಿ ಬಿದ್ದಿದ್ದು ಎಲ್ಲಿ ಗೊತ್ತಾ.?

ಬೆಂಗಳೂರು: ಬೇರೋಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೂಡ್ಲು ಬಳಿಯ ನಂಜಾರೆಡ್ಡಿ ಲೇಔಟ್​ನಲ್ಲಿ ನಡೆದಿದೆ.

ಅನುರಾಧ ಅಲಿಯಾಸ್ ಅಲೀಮಾ (31) ಕೊಲೆಯಾದ ಮಹಿಳೆ. ಈಕೆ 2ನೇ ಮದುವೆಯಾಗಿದ್ದ ರಾಜಶೇಖರ್ ಕೃತ್ಯ ಎಸಗಿದ ಆರೋಪಿ. ಸದ್ಯ ಈತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯು ಬೇರೆ ಮಹಿಳೆ ಜೊತೆ ಸಂಬಂಧ ಹೊಂದಿರುವುದನ್ನು ಪತ್ನಿ ಪ್ರಶ್ನಿಸಿದ್ದಾಳೆ. ನನ್ನನ್ನು ಏಕೆ ಪ್ರಶ್ನೆ ಮಾಡುತ್ತಿಯಾ ಎಂದು ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿದ್ದು ಮೊದಲು ಪತಿ ತನ್ನ ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್​ನಿಂದ ಬಿಗಿದು ಹತ್ಯೆ ಮಾಡಿದ್ದಾನೆ. ನಂತರ ಆಕೆಯನ್ನು ಅಸ್ಪತ್ರೆಗೆ ದಾಖಲು ಮಾಡಿ, ಪೊಲೀಸ್​ ಠಾಣೆಗೆ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಹೀಗಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು.

ಅದ್ರೆ ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯನ್ನು ಮೊದಲು ಕತ್ತು ಹಿಸುಕಿ ಬಲವಂತವಾಗಿ ಕೊಲೆ ಮಾಡಲಾಗಿದೆ ಎಂದು ಸತ್ಯ ಬೆಳಕಿಗೆ ಬಂದಿದೆ. ಇದನ್ನು ಆಧರಿಸಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮ ಸಂಬಂಧಕ್ಕೆ ಕತ್ತು ಹಿಸುಕಿ ಹೆಂಡತಿ ಹತ್ಯೆ; ಆಮೇಲೆ ಕಿಲಾಡಿ ಗಂಡ ಮಾಡಿದ್ದೇನು ಗೊತ್ತಾ?

https://newsfirstlive.com/wp-content/uploads/2023/11/BNG_MURDER.jpg

Load More