/newsfirstlive-kannada/media/post_attachments/wp-content/uploads/2024/11/MAAYA-MUDRER-MISTRY.jpg)
ಅವಳು ಅಸ್ಸಾಂ ಚೆಲುವೆ, ಇವನು ಕೇರಳ ಆಣ್​ಕುಟ್ಟಿ. ಒಂದು ದಿನದ ಹಿಂದಷ್ಟೇ ಒಟ್ಟಿಗೆ ಕಾಣಿಸಿಕೊಂಡಿದ್ದರು. ಮಾರನೇ ದಿನ ಅಪಾರ್ಟ್​​ಮೆಂಟ್​​ನಿಂದ ಒಬ್ಬನೇ ಎದ್ದು ಬಂದಿದ್ದ. ಏನಾಯ್ತು ಅಂತಾ ನೋಡಿದ್ರೆ ಬೆಂಗಳೂರೇ ಬೆಚ್ಚಿ ಬಿದ್ದಿದೆ. ಇಂದಿರಾನಗರದ ಅಪಾರ್ಟ್​​ಮೆಂಟ್​ ದಾರುಣ ಕಥೆ ಹೇಳುತ್ತಿದೆ. ಆ 2 ಸಿಸಿಟಿವಿ ದೃಶ್ಯ ಹತ್ತಾರು ಸಂಶಯದ ಸಾಕ್ಷಿ ನುಡಿಯುತ್ತಿವೆ. ಅಲ್ಲಿ ಸಿಕ್ಕ 2 ವಸ್ತು ಘೋರ ತಪ್ಪಿರೋ ಸುಳಿವು ನೀಡುತ್ತಿವೆ. ಅಷ್ಟಕ್ಕೂ ಲವರ್​ ಜೊತೆ ಅಪಾರ್ಟ್​​ಮೆಂಟ್​​ನಲ್ಲಿ ಹೆಣವಾದವಳು ಯಾರು? ಇದು ಪ್ರೇಯಸಿಯೇ ಮಾಯವಾದ ಮರ್ಡರ್ ಸ್ಟೋರಿ.
ಈ ಬೆಳ್ಳಕ್ಕಿ ಜೋಡಿ ಪ್ರೀತಿಯಲ್ಲಿ ಈ ಲೋಕವನ್ನೇ ಮರೆತಿದ್ದವು. ಈ ಸಿಸಿಟಿವಿ ದೃಶ್ಯ ಇವರ ಪ್ರೇಮಕ್ಕೆ ಸಾಕ್ಷಿ ನುಡಿಯುತಿತ್ತು. ನಾಚುತ್ತಾ ನಿಂತಿದ್ದವಳನ್ನ ತಾನಾಗೇ ಸೋಫಾ ಮೇಲೆ ಕೂರಿಸಿದ್ದ. ಕೊನೆಗೆ ಅವಳ ಬ್ಯಾಗನ್ನೂ ಹಿಡಿದುಕೊಂಡು ಒಳಕ್ಕೆ ಹೋದ. ಇದೇ, ಇದೇ ದೃಶ್ಯವೇ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡ ಕಟ್ಟಕಡೆಯ ದೃಶ್ಯ. ಬೆಂಗಳೂರಿನ ಇಂದಿರಾನಗರದ ಇದೇ ಅಪಾರ್ಟ್​​ಮೆಂಟ್​ನಲ್ಲಿ ಇದೇ ಶನಿವಾರ ತಂಗಿದ್ದರು. ನಗು ನಗುತ್ತಲೇ ಅಪಾರ್ಟ್​​ಮೆಂಟ್​​ನ ರೂಮಿನೊಳಕ್ಕೆ ಹೋಗಿದ್ದರು. ಒಂದು ದಿನವೇ ಉರುಳಿದರೂ, ರೂಮ್​​ನಿಂದ ಯಾರೂ ಬಂದ ಹಾಗೆ ಅನಿಸಲಿಲ್ಲ. ಆದರೆ, ವಾಸನೆಯೊಂದು ಆ ರೂಮಿನಿಂದ ಆಚೆ ಬಂದಿತ್ತು.
/newsfirstlive-kannada/media/post_attachments/wp-content/uploads/2024/11/MAAYA-MUDRER-MISTRY-3.jpg)
ಕೆಟ್ಟ ವಾಸನೆಗೆ ಸಿಬ್ಬಂದಿ ಬೆಚ್ಚಿಬಿದ್ರು, ಪೊಲೀಸರಿಗೆ ದೂರಿದ್ರು!
ನಾಚುತ್ತಲೇ ಅಪಾರ್ಟ್​​ಮೆಂಟ್​ ರೂಮಿನೊಳಕ್ಕೆ ಕಾಲಿಟ್ಟದ್ದಳು ಮಾಯಾ ಎಂಬ ಹೆಸರಿನ ಈ ಯುವತಿ, ಮಾಯಾ ಜೊತೆ ಬಂದಿದ್ದ ಪ್ರೇಮಿ ಹೆಸರು ಆರವ್ ಹನೋಯ್. ಮೂಲತಃ ಕೇರಳದವನು. ಇಬ್ಬರ ಪ್ರೀತಿ ಎಂಥದ್ದೋ? ಬೆಳಕ್ಕಿ ಜೋಡಿಯಂತೆ ಕಾಣಿಸಿತ್ತು. ರೂಮಿನೊಳಕ್ಕೆ ಇಬ್ಬರೂ ಹೋಗಿದ್ದರು. ಅಪಾರ್ಟ್​​ಮೆಂಟ್​ ಸಿಬ್ಬಂದಿ ಕೆಟ್ಟ ವಾಸನೆ ಬರ್ತಿದೆ ಅಂತಾ ಪೊಲೀಸರಿಗೆ ದೂರಿದ್ದರು. ತೀರಾ ಪೊಲೀಸರು ಸ್ಥಳಕ್ಕೆ ಆಗಮಿಸಿ ರೂಮಿನ ಬಾಗಿಲು ತೆಗೆದಾಗಲೇ ಆ ಘೋರ ದೃಶ್ಯ ಕಂಡಿದ್ದು.
ಪೊಲೀಸರು, ವಿಧಿ ವಿಜ್ಞಾನ ತಂಡ, ಸೋಸ್ಕೋ ಟೀಮ್ ಕಣ್ಣಿಗೆ ಮಾಯ ಹೆಣವಾಗಿ ಬಿದ್ದಿರೋ ದೃಶ್ಯ ಕಂಡಿತ್ತು. ಆ ಕ್ಷಣವೇ ಪೊಲೀಸರನ್ನ ಬೆಚ್ಚಿಬೀಳಿಸಿದ್ದು ಮಾಯಾ ಜೊತೆಯಲ್ಲಿದ್ದ ಆರವ್ ಅಲ್ಲಿ ಇರಲಿಲ್ಲ. ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ ಬೆಳಗ್ಗೆ 8.19ಕ್ಕೆ ಅಲ್ಲಿಂದ ಕಾಲ್ಕಿತ್ತ ವಿಚಾರ ಗಮನಕ್ಕೆ ಬಂದಿದೆ. ನೋಡಿ, ಸಿಸಿಟಿವಿ ದೃಶ್ಯದಲ್ಲಿ ಆರವ್ ಹನೋಯ್ ಒಬ್ಬನೇ ಗಾಬರಿಯಿಂದ ಹೋಗುತ್ತಿರುವುದು ಕಾಣಿಸುತ್ತದೆ.
/newsfirstlive-kannada/media/post_attachments/wp-content/uploads/2024/11/MAAYA-MUDRER-MISTRY-1.jpg)
ಮಾಯಾ 15 ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ಳು!
ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಮಾಯಾ ಕೇವಲ 15 ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದಳು. ಕಳೆದ ಕೆಲ ತಿಂಗಳ ಹಿಂದಷ್ಟೇ ಮಾಯಾ ಆರವ್ ನಡುವೆ ಪರಿಚಯ ಆಗಿತ್ತು. ಅದು ಸ್ನೇಹಕ್ಕೆ ತಿರುಗಿ ಪ್ರೀತಿಯ ಹಾದಿ ಹಿಡಿದಿತ್ತು. ಯುಟ್ಯೂಬರ್​ ಕೂಡ ಆಗಿದ್ದ ಮಾಯಾ ಒಂದಷ್ಟು ಶಾರ್ಟ್ಸ್​​ ಕೂಡ ಮಾಡುತ್ತಿದ್ದಳು. ಆದರೆ, ಇದೇ ಮಾಯಾ ಹಾಗೂ ಆರವ್ ನವೆಂಬರ್ 23ರ ಶನಿವಾರ ಒಟ್ಟಿಗೆ ಅಪಾರ್ಟ್​​ಮೆಂಟ್​ಗೆ ಬಂದ ಮೇಲೆ ಏನಾಯ್ತು? ಬೆಳಗ್ಗೆ 8.19ಕ್ಕೇ ಒಬ್ಬನೇ ರೂಮಿನಿಂದ ಕಾಲ್ಕಿತ್ತಿದ್ದು ಏಕೆ? ಪ್ರಿಯಕರ ಆರವ್ ಹನೋಯೇ ಇದೀಗ ಮಾಯಾಳನ್ನ ಕೊಂದಿದ್ದಾನಾ? ಇಂಥಾ ಹಲವು ಅನುಮಾನಗಳು ಪೊಲೀಸರನ್ನ ಕಾಡ್ತಿವೆ. ಅಷ್ಟೇ ಅಲ್ಲ, ಅತ್ಯಂತ ನಿರ್ದಯವಾಗಿ ಮಾಯಾಳನ್ನು ಕೊಲ್ಲಲಾಗಿದೆ.
ಎದೆಯ ಭಾಗಕ್ಕೆ ಹಲವು ಸಲ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ!
ನಾಚುತ್ತಾ ರೂಮಿನೊಳಕ್ಕೆ ಬಂದಿದ್ದ ಮಾಯಾ ಬೆಡ್​​ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಇಂದಿರಾ ನಗರ ಪೊಲೀಸರ ತಂಡ ಆ ದೃಶ್ಯವನ್ನು ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಮಾಯಾಳನ್ನ ಹಲವು ಸಲ ಚುಚ್ಚಿ ಚುಚ್ಚಿ ಕೊಲ್ಲಲಾಗಿದೆ. ಆಕೆಯ ತಲೆಯ ಭಾಗಕ್ಕೂ ಬಲವಾಗಿ ಪೆಟ್ಟು ಬಿದ್ದಿರುವುದು ಖಚಿತವಾಗಿದೆ. ಪೊಲೀಸ್ ಅಧಿಕಾರಿಯೇ ಹೇಳೋ ಪ್ರಕಾರ ಇದು ಪಕ್ಕಾ ಪ್ಲಾನ್ ಹಾಕಿಕೊಂಡು ಮಾಡಿರೋ ಮರ್ಡರ್​ ಎನ್ನುತ್ತಿದ್ದಾರೆ.
ಇದನ್ನೂ ಓದಿ:‘ಬ್ಯೂಟಿ’ ಬ್ಯಾಡ್‌ಲಕ್.. ಶವದ ಮುಂದೆ 24 ಗಂಟೆ ಕಾಲ ಕಳೆದ ಪ್ರಿಯಕರ; ಬೆಂಗಳೂರಲ್ಲಿ ಭಯಾನಕ ಕೃತ್ಯ!
ಸದ್ಯ, ಪೊಲೀಸರಿಗೆ ಪ್ರಿಯಕರ ಆರವ್ ಮೇಲೆ ಅನುಮಾನವಿದ್ದು ತನಿಖೆ ಆರಂಭಿಸಿದ್ದಾರೆ. ಪೊಲೀಸರೇ ಹೇಳೋ ಪ್ರಕಾರ ಮಾಯಾಳನ್ನ ಕೊಂದ ಬಳಿಕ ಆರವ್ ಕೋಣೆಯಿಂದ ಗಾಬರಿಯಾಗಿ ಹೋಗಿದ್ದಾನೆ. ಇಲ್ಲಿಂದ ಸೀದಾ ಬೆಂಗಳೂರಿನ ಮೆಜೆಸ್ಟಿಕ್​ ರೈಲ್ವೇ ನಿಲ್ದಾಣದವರೆಗೂ ಹೋಗಿದ್ದಾನೆ ಎನ್ನಲಾಗುತ್ತಿದೆ. ರೈಲು ನಿಲ್ದಾಣ ಸಮೀಪ ಹೋಗ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಮೂಲಗಳ ಪ್ರಕಾರ ಆರೋಪಿ ಕೇರಳಕ್ಕೆ ಎಸ್ಕೇಪ್ ಆಗಿರುವ ಶಂಕೆ ಇದೆ. ಆದರೇ, ರೂಮಿನೊಳಗಿನ ಚಿತ್ರಣ ನಿಜಕ್ಕೂ ಇವನು ವಿಕೃತನೇ ಅನ್ನೋ ಅನುಮಾನ ಮೂಡಿಸುತ್ತಿದೆ.
/newsfirstlive-kannada/media/post_attachments/wp-content/uploads/2024/11/MAAYA-MUDRER-MISTRY-2.jpg)
ಇಡೀ ರಾತ್ರಿ ಮೃತ ಮಾಯಾ ಶವದ ಜತೆ ಆರವ್ ಮಾಡಿದ್ದೇನು?
ಮಾಯಾಳನ್ನು ಚುಚ್ಚಿ ಚುಚ್ಚಿ ಕೊಂದ ಬಳಿಕ ಶಂಕಿತ ಆರವ್ ಅಲ್ಲೇ ಇದ್ದ. ನರಳಿ ನರಳಿ ಸಾಯುವುದನ್ನು ನೋಡಿದ್ದ. ಮಾಯಾ ಸತ್ತ ಬಳಿಕ ಇಡೀ ರಾತ್ರಿ ಮೃತ ದೇಹದೊಂದಿಗೆ ಕಾಲ ಕಳೆದಿದ್ದ. ಇದೇ ಸಂದರ್ಭ ಸಾಕಷ್ಟು ಯೋಚಿಸುತ್ತಲೇ ಸಿಗರೇಟು ಸೇದಿದ್ದ. ಆ ಸಿಗರೇಟ್​ ತುಂಡುಗಳೇ ಪೊಲೀಸರಿಗೆ ಈ ಪ್ರಕರಣವನ್ನು ಮತ್ತೊಂದು ದೃಷ್ಟಿಕೋನದಿಂದ ತನಿಖೆ ನಡೆಸೋದಕ್ಕೆ ಸುಳಿವು ನೀಡಿದೆ. ಇಡೀ ರಾತ್ರಿ ಮೃತ ಮಾಯಾ ಶವದೊಂದಿಗೆ ಕಾಲ ಕಳೆದವನು ಬೆಳಗ್ಗೆ 8.16ಕ್ಕೆ ಅಪಾರ್ಟ್​​ಮೆಂಟ್​ ಸನಿಹಕ್ಕೇ ಕ್ಯಾಬ್ ಮಾಡಿಕೊಂಡು ಹೋಗಿದ್ದಾನೆ. ಕ್ಯಾಬ್ ಚಾಲಕ ಅರಾವ್ ನನ್ನು ಡ್ರಾಪ್ ಮಾಡಿರುವ ಲೊಕೇಷನ್​​ ಜೊತೆ ಆರೋಪಿ ನಂಬರ್ ಸಿಡಿಆರ್ ಪಡೆಯುತ್ತಿರುವ ಪೊಲೀಸರು ಬೆಚ್ಚಿಬೀಳಿಸೋ ಸಂಗತಿ ಹೇಳ್ತಿದ್ದಾರೆ.
ಇದನ್ನೂ ಓದಿ:ರಸ್ತೆ ದಾಟುತ್ತಿದ್ದ ಬಾಲಕನಿಗೆ ಗುದ್ದಿದ ಕಾರು; ಭಯಾನಕ ಆಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮಾಯಾ ಲೀಪ್ ಸ್ಕಾಲರ್ಸ್​ ಓವರ್​ಸೀಸ್​​ ಎಜುಕೇಷನ್​ ಸಂಸ್ಥೆಯಲ್ಲಿ ಕೌನ್ಸಿಲಿಂಗ್ ಮಾಡೋ ಕೆಲಸ ಮಾಡುತ್ತಿದ್ದರು. ತೀರಾ ಮಾಯಾಳ ಅಕ್ಕನೇ ಹೇಳಿಕೊಂಡಿರೋ ಪ್ರಕಾರ ಆರೇಳು ತಿಂಗಳಿನಿಂದ ಆರವ್ ಹಾಗೂ ಮಾಯಾ ನಡುವೆ ನಂಟಿತ್ತು. ಶುಕ್ರವಾರ ತನ್ನ ಅಕ್ಕನಿಗೆ ಕರೆ ಮಾಡಿದ್ದ ಮಾಯ, ಆಫೀಸ್ ಪಾರ್ಟಿ ಇದೆ ಬರಲ್ಲ ಎಂದು ಹೇಳಿದ್ದಳು. ಮತ್ತೊಂದೆಡೆ ಶನಿವಾರ ಕೂಡ ರೂಮ್​​ಗೆ ಬರಲ್ಲ ಅಂತಾ ಮೆಸೇಜ್ ಮಾಡಿದ್ದಳು ಎನ್ನಲಾಗುತ್ತಿದೆ. ಹಾಗಾಗಿಯೇ ಶನಿವಾರ ಆರವ್ ಜೊತೆ ಅಪಾರ್ಟ್​​ಮೆಂಟ್​​ನಲ್ಲಿ ಕಾಣಿಸಿಕೊಂಡಿದ್ದಳು. ಅಪಾರ್ಟ್​​ಮೆಂಟ್​​ಗೆ ಬರುವಾಗಲೇ ಮಾಯಾಗೆ ಸಣ್ಣದೊಂದು ಸುಳಿವೂ ಸಿಗಲಿಲ್ಲ.
/newsfirstlive-kannada/media/post_attachments/wp-content/uploads/2024/11/MAAYA-MUDRER-MISTRY-4.jpg)
ಆರವ್ ಹಳೆ ಚಾಕುವಿನೊಂದಿಗೆ ಅಪಾರ್ಟ್​​ಮೆಂಟ್​​ಗೆ ಬಂದಿದ್ದ!
ಪೊಲೀಸರೇ ನೀಡುತ್ತಿರೋ ಮಾಹಿತಿ ಪ್ರಕಾರ ಹಳೆಯ ಚಾಕುವಿನೊಂದಿಗೆ ಆರವ್ ಬಂದಿದ್ದ. ಮಾಯಾ ಜೊತೆ ಹೀಗೆ ನಗುತ್ತಲೇ ಅಪಾರ್ಟ್​​ಮೆಂಟ್​ನೊಳಕ್ಕೆ ಹೋಗುವಾಗ ಬ್ಯಾಗಿನಲ್ಲಿ ಚಾಕು ಇತ್ತು ಅನ್ನೋದನ್ನ ಪೊಲೀಸರು ಹೇಳುತ್ತಿದ್ದಾರೆ. ಅದೇ ಚಾಕುವಿನಿಂದಲೇ ಆರವ್ ಮಾಯಾಳನ್ನು ಚುಚ್ಚಿ ಚುಚ್ಚಿ ಕೊಂದಿರಬಹುದು ಎಂದು ಪೊಲೀಸರ ಶಂಕಿಸುತ್ತಿದ್ದಾರೆ. ಇದಕ್ಕಿಂತಲೂ ಸ್ಫೋಟಕ ಸಂಗತಿ ಅಂದ್ರೆ ಬ್ಯಾಗ್​​ನೊಂದಿಗೆ ಬಂದಿದ್ದ ಆರವ್ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಇಂಥದ್ದೊಂದು ಆ್ಯಂಗಲ್​​ನಲ್ಲಿ ತನಿಖೆ ನಡೆಸುತ್ತಿರೋ ಪೊಲೀಸರಿಗೆ ಪೂರಕ ಅಂಶಗಳು ಸಿಗುತ್ತಿವೆ. ಹಾಗಾಗಿಯೇ ಕೇರಳಕ್ಕೆ ಎಸ್ಕೇಪ್ ಆಗಿರಬಹುದು ಎನ್ನಲಾಗುತ್ತಿರೋ ಆರವ್ ಪೊಲೀಸರ ಕೈಗೆ ಸಿಕ್ಕರೇ ಅಸಲಿ ಸ್ಫೋಟಕ ಸಂಗತಿ ಬಯಲಾಗಲಿದೆ.
ಇದನ್ನೂ ಓದಿ:ಕಲಬುರಗಿ ಆಸ್ಪತ್ರೆಯಲ್ಲಿ ಹಸುಗೂಸು ಕಿಡ್ನಾಪ್ ಕೇಸ್; 24 ಗಂಟೆಯಲ್ಲೇ ರೋಚಕವಾಗಿ ಪ್ರಕರಣ ಬೇಧಿಸಿದ ಪೊಲೀಸರು!
ಯುಟ್ಯೂಬರ್​ ಮಾಯಾಳಿಗೆ ಇದೀಗ 19 ವರ್ಷ ವಯಸ್ಸು. ಆರವ್ ಹನೋಯ್ 21 ವರ್ಷ ವಯಸ್ಸಿನವನು. ಇಬ್ಬರೂ ಸಹ ಆತುರದ ವಯಸ್ಸಿನವರೇ ಆಗಿದ್ದಾರೆ. ಪ್ರೀತಿ ಪ್ರೇಮದ ಮಧ್ಯೆ ಬಿದ್ದು ಒದ್ದಾಡುತ್ತಿದ್ದವರ ಮಧ್ಯೆ ಏನಾಯ್ತು? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೇ, ಪೊಲೀಸರಿಗೆ ಡೆಡ್​​ ಬಾಡಿ ಪಕ್ಕದಲ್ಲೇ ಸಿಕ್ಕ ಆ ಎರಡು ವಸ್ತು ಮಾತ್ರ ಬೆಚ್ಚಿಬೀಳಿಸುತ್ತಿದೆ. ಆರವ್ ಬ್ಯಾಗ್​​ನೊಂದಿಗೆ ಬಂದ ದೃಶ್ಯವೇ ಇದು ಪೂರ್ವಯೋಜಿತ ಕೊಲೆ ಇರಬಹುದು ಅನ್ನೋ ಅನುಮಾನ ಮೂಡಿಸುತ್ತಿದೆ. ಅದಕ್ಕಿಂತಲೂ ಮಿಗಿಲಾಗಿ ಪೊಲೀಸರಿಗೆ ಮಾಯಾ ಡೆಡ್​​ ಬಾಡಿ ಪಕ್ಕ ಸಿಕ್ಕ ಆ ಎರಡು ವಸ್ತು ಮಾತ್ರ ಇದು ಪಕ್ಕಾ ಪ್ರೀ ಪ್ಲಾನ್ ಮರ್ಡರ್​ ಅನ್ನೋ ಸಾಕ್ಷಿ ನುಡಿಯುತ್ತಿವೆ. ರಾತ್ರಿ ಎಲ್ಲಾ ಶವದೊಂದಿಗೆ ಇದ್ದು, ಬೆಳಗ್ಗೆ ಕ್ಯಾಬ್​​ ಮಾಡಿಕೊಂಡು ಓಡಿ ಹೋದವನು ಏನಾದ? ಕೇಳಕ್ಕೆ ಎಸ್ಕೇಪ್ ಆಗಿದ್ದಾನಾ? ಬೆಂಗಳೂರಿನಲ್ಲೇ ತಲೆ ಮರೆಸಿಕೊಂಡಿದ್ದಾನಾ? ಇಂಥಾ ಹತ್ತು ಹಲವು ಆ್ಯಂಗಲ್​​ನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಕೇರಳ ಸೇರಿ ಹಲವು ಕಡೆ ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಆರವ್ ಹನೋಯ್‌ನ ಪತ್ತೆಗೆ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us