Advertisment

ಮಾಯಾ ಮೃತ ದೇಹದ ಸನಿಹ ಸಿಕ್ಕ ಆ ಎರಡು ವಸ್ತು ಯಾವುದು? ಆರವ್ ಯಾವ ಪ್ಲಾನ್ ಮಾಡಿಕೊಂಡಿದ್ದ?

author-image
Gopal Kulkarni
Updated On
ಇಂದಿರಾನಗರದದಲ್ಲಿ ಮಾಯಾ ಗೊಗಯ್​ ಪ್ರಕರಣ ; ಕೊನೆಗೂ ಪೊಲೀಸರ ಬಲೆಗೆ ಬಿದ್ದ ಆರೋಪಿ ಆರವ್
Advertisment
  • ಮಾಯಾಳ ಮೃತ ದೇಹದ ಬಳಿ ಸಿಕ್ಕಿತ್ತು ಚಾಕು, ನೈಲಾನ್ ಹಗ್ಗ!
  • ನೈಲಾನ್ ಹಗ್ಗದಿಂದ ಬಾಡಿ ಡಂಪ್ ಮಾಡೋ ಪ್ಲಾನ್ ಇತ್ತಾ?
  • 2 ಸಿಸಿಟಿವಿ ದೃಶ್ಯಗಳು ಆರವ್​ನದ್ದು ಪ್ರೀ ಪ್ಲಾನ್ ಎನ್ನುತ್ತಿವೆಯೇ?

ಮಹಾಲಕ್ಷ್ಮಿ ಮರ್ಡರ್​​ ಕೇಸ್. ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಕೊಂದು 50 ಪೀಸ್​​ ಮಾಡಲಾಗಿತ್ತು. ಪ್ರಿಯಕರ ಮುಕ್ತಿರಂಜನ್ ದಾಸ್ ಅಕ್ಷರಶಃ ರಕ್ಕಸನಂತೆ ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡು ಮಾಡಿದ್ದ. ಅಷ್ಟೂ ಪೀಸ್​ಗಳನ್ನ ಫ್ರಿಡ್ಜ್​​ನಲ್ಲಿಟ್ಟು ಹೋಗಿದ್ದ. ಹೀಗೆ ಬೆಂಗಳೂರನ್ನೇ ಬೆಚ್ಚಿಬೀಳಿಸಿ ತನ್ನೂರಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ, ಇದೇ ರೀತಿಯಲ್ಲೇ ಮಾಯಾ ಕೊಲೆ ಪ್ಲಾನ್ ನಡೆದಿತ್ತಾ? ಇಂಥದ್ದೊಂದು ಅನುಮಾನಕ್ಕೆ ಸಾಕ್ಷಿ ಆಗಿರೋದು ಎರಡು ವಸ್ತು.

Advertisment

publive-image

ಮಾಯಾಳ ಮೃತ ದೇಹದ ಬಳಿ ಸಿಕ್ಕಿತ್ತು ಚಾಕು, ನೈಲಾನ್ ಹಗ್ಗ!
ಆರವ್ ಬ್ಯಾಗ್​​ನೊಂದಿಗೆ ಬಂದಿದ್ದ. ಇದೇ ಬ್ಯಾಗ್​ನಲ್ಲೇ ಹಳೆಯ ಚಾಕು ಇಟ್ಟುಕೊಂಡಿದ್ದ. ಇದು ಸಾಲದು ಅಂತ ಜೆಫ್ಟೋದಲ್ಲಿ ನೈಲಾನ್ ಹಗ್ಗವನ್ನೂ ಆರ್ಡರ್​ ಮಾಡಿ ತರಿಸಿಕೊಂಡಿದ್ದ. ಅದೂ ಸಹ ಮಾಯಾ ತನ್ನೊಂದಿಗೆ ಇಂದಿರಾನಗರದ ಇದೇ ಅಪಾರ್ಟ್​​ಮೆಂಟ್​​ಗೆ ಬಂದ ಮೇಲೆ ಹಗ್ಗ ತರಿಸಿದ್ದ. ಪೊಲೀಸರನ್ನ ಇದೇ ಎರಡು ವಸ್ತುಗಳೇ ಇದೀಗ ಬೆಚ್ಚಿಬೀಳಿಸುತ್ತಿದೆ. ಥೇಟ್​ ಮಹಾಲಕ್ಷ್ಮಿ ಕೊಲೆ ಪ್ರಕರಣದಂತೆಯೇ ಮಾಯಾಳನ್ನ ಪೀಸ್​​ ಪೀಸ್ ಮಾಡೋ ಪ್ಲಾನ್ ಮಾಡಿದ್ನಾ? ಇಂಥಾದ್ದೊಂದು ಅನುಮಾನಕ್ಕೆ ಪೂರಕ ಎನ್ನುವಂತೆ ಇಡೀ ರಾತ್ರಿ ಆರವ್ ಶವದೊಂದಿಗೆ ಕಾಲ ಕಳೆದ ವಿಚಾರ ಪುಷ್ಠಿ ನೀಡ್ತಿದೆ

publive-image

ನೈಲಾನ್ ಹಗ್ಗದಿಂದ ಬಾಡಿ ಡಂಪ್ ಮಾಡೋ ಪ್ಲಾನ್ ಇತ್ತಾ?
ಹಳೇ ಚಾಕುವಿನಿಂದ ಕೊಲ್ಲಬಹುದೇ ವಿನಃ ಮೃತ ದೇಹವನ್ನ ತುಂಡು ತುಂಡು ಮಾಡೋಕಾಗಲ್ಲ. ಆರವ್ ತನ್ನ ಬ್ಯಾಗ್​ನೊಂದಿಗೆ ಬಂದ ಸಿಸಿಟಿವಿ ದೃಶ್ಯ ನೋಡಿದ್ರೆ ತೀರಾ ಅಚ್ಚರಿ ಅನಿಸೋದಿಲ್ಲ. ಯಾಕಂದ್ರೆ ತನ್ನ ಬ್ಯಾಗ್ ಭುಜದಲ್ಲಿದ್ರೂ, ಮಾಯಾಳ ಬ್ಯಾಗನ್ನ ಆರವ್ ಕೈಯಲ್ಲಿ ಹಿಡಿದು ಹೋಗೋದನ್ನ ಕಾಣಬಹುದು. ಇಂದಿರಾನಗರದ ಇದೇ ಅಪಾರ್ಟ್​​ಮೆಂಟ್​​ನಲ್ಲಿ ರೂಮ್ ಬುಕ್ ಮಾಡೋದ್ರಿಂದ ಹಿಡಿದು ಕೊಲ್ಲೋ ತನಕ ಎಲ್ಲವೂ ಆರವ್ ಅಂದುಕೊಂಡಂತೆಯೇ ಅದಂತೆ ಕಾಣುತ್ತಿದೆ. ಆದರೆ, ಆರವ್​​ನ ಕೊನೆಯ ಪ್ಲಾನ್ ಫೇಲ್ ಆಗಿರಬಹುದು ಅಂತ ಪೊಲೀಸರು ಶಂಕಿಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಇಂದು ರಾತ್ರಿ ಭರ್ಜರಿ ಮಳೆ ಸಾಧ್ಯತೆ; ನೀವು ಓದಲೇಬೇಕಾದ ಸ್ಟೋರಿ

Advertisment

ಮಾಯಾಳನ್ನ ಚುಚ್ಚಿಚುಚ್ಚಿ ಕೊಂದ ಬಳಿಕ ಮೃತ ದೇಹವನ್ನ ವಿಲೇವಾರಿ ಮಾಡುವ ಚಿಂತನೆಯನ್ನ ಆರವ್​ ಹೊಂದಿದ್ದ ಎನ್ನಲಾಗ್ತಿದೆ. ಇದೇ ಶಂಕೆಯಲ್ಲೇ ಪೊಲೀಸರು ತನಿಖೆಗಿಳಿದಾಗ ನೈಲಾನ್ ಹಗ್ಗದ ಸಾಕ್ಷಿ ಪೂರಕ ವಿಚಾರವಾಗಿದೆ. ಜೆಫ್ಟೋದಲ್ಲಿ ನೈಲಾನ್ ಹಗ್ಗ ಬುಕ್ ಮಾಡಿದ್ದು, ಆ ಆರ್ಡರ್​​ ಪಡೆದಿದ್ದು, ಎಲ್ಲಾ ದಾಖಲೆಗಳು ಪೊಲೀಸರಿಗೆ ಸಿಕ್ಕಿವೆ. ಮೃತ ದೇಹವನ್ನ ತುಂಡು ತುಂಡು ಮಾಡಿ ಮತ್ತೊಂದು ಕಡೆ ಸಾಗಿಸೋ ಲೆಕ್ಕಾಚಾರ ಅವನದಾಗಿತ್ತು ಅನ್ನೋ ಶಂಕೆ ಪೊಲೀಸರನ್ನ ಕಾಡುತ್ತಿದೆ. ಇದೇ ಆ್ಯಂಗಲ್​​ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ವಿಶೇಷ ತಂಡವನ್ನು ರಚಿಸಿದ್ದಾರೆ.

publive-image

2 ಸಿಸಿಟಿವಿ ದೃಶ್ಯಗಳು ಆರವ್​ನದ್ದು ಪ್ರೀ ಪ್ಲಾನ್ ಎನ್ನುತ್ತಿವೆಯೇ?
ನೋಡಿ, ಇಲ್ಲಿ ಆರವ್ ಪಕ್ಕಾ ಪ್ಲಾನ್ ಮಾಡಿಯೇ ಮಾಯಾಳನ್ನ ಕೊಂದಿದ್ದಾನೆ ಅನ್ನೋದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಹಲವು ಸುಳಿವು ನೀಡುತ್ತಿವೆ. ಮಾಯಾ ನ್ಯಾಚುರಲ್ ಆಗಿಯೇ ಅಪಾರ್ಟ್​​ಮೆಂಟ್​ಗೆ ಬಂದಿದ್ದಾಳೆ. ಆದರೆ, ಆರವ್ ವೈಟ್ ಕಲರ್​ ಟೋಪಿಯನ್ನ ಧರಿಸಿಯೇ ಅಪಾರ್ಟ್​​ಮೆಂಟ್​​ನೊಳಕ್ಕೆ ಬಂದಿದ್ದ. ಹೋಗುವಾಗಲೂ ಸಹ ಅದೇ ವೈಟ್​​ ಕಲರ್​ ಟೋಪಿಯೊಂದಿಗೆ ಹೋಗಿದ್ದಾನೆ. ಬರುವಾಗ ಬ್ಯಾಗ್ ಕೂಡ ಅವನ ಹೆಗಲಿನಲ್ಲಿತ್ತು. ಆದರೆ, ಕೊಲೆಯ ಬಳಿಕ ಮುಂಜಾನೆ 8.16ಕ್ಕೆ ವಾಪಾಸ್ ಹೋಗುವಾಗ ಆರವ್​​ ನಡಿಗೆಯಲ್ಲಿ ಆತುರವಿದೆಯೇ ವಿನಃ, ಬ್ಯಾಗ್ ಮರೆತ ವಿಚಾರ ತಿಳಿಯುತ್ತಿಲ್ಲ ಅನಿಸ್ತಿದೆ.

ಇದನ್ನೂ ಓದಿ:ಲವರ್​ ಜೊತೆ ಅಪಾರ್ಟ್​​ಮೆಂಟ್​​​ಗೆ ಹೋದವಳು ಫಿನಿಶ್​!, ಒಟ್ಟಿಗೆ ಬಂದವನು ಒಳಗೆ ಹೋದ್ಮೇಲೆ ಮಾಡಿದ್ದು ಏನು?

Advertisment

ಇನ್ನೂ ಸೂಕ್ಷ್ಮವಾಗಿ ನೋಡಿದ್ರೇ ಡೆಡ್​ ಬಾಡಿ ಪಕ್ಕ ಸಿಕ್ಕ ಸಿಗರೇಟ್​ ಕೂಡ ಆರವ್ ಸಾಕಷ್ಟು ಪ್ಲಾನ್ ಇಟ್ಟುಕೊಂಡಿದ್ದ ಅನ್ನೋ ಮಾನಸಿಕ ತುಮುಲವನ್ನೇ ಹೇಳುವ ರೀತಿಯಲ್ಲಿದೆ. ಅತಿಯಾದ ಉದ್ವೇಗ, ಅತಿಯಾದ ಒತ್ತಡದ ಸಂದರ್ಭದಲ್ಲೇ ಆರವ್ ಸಿಗರೇಟ್​ ಸೇದಿರಬಹುದು. ರೂಮಿನೊಳಕ್ಕೆ ಹೋಗುವಾಗಲೂ ಸದ್ಯ, ಮಾಯಾಳನ್ನ ಮೊದಲು ಒಳಕ್ಕೆ ಕರೆದುಕೊಂಡು ಹೋದ್ರೆ ಸಾಕು ಅನ್ನೋ ಆತುರವೇ ಆರವ್​​ನಲ್ಲಿದೆ. ಸ್ವಿಚ್ ಆಫ್ ಮಾಡಿಕೊಂಡಿರೋ ಆರವ್ ನಂಬರ್​ ಜಾಡು ಹಿಡಿದು ಪೊಲೀಸರು ತನಿಖೆಯ ವೇಗ ಹೆಚ್ಚಿಸಿದ್ದಾರೆ. ಮತ್ತೊಂದು ಟೀಮ್ ಕೇರಳದತ್ತ ಮುಖ ಮಾಡಿದೆ. ಒಟ್ಟು ಎರಡು ವಿಶೇಷ ತಂಡಗಳು ಎಸ್ಕೇಪ್ ಆಗಿರೋ ಆರೋಪಿ ಆರವ್ ಹನೋಯ್ ಹುಡುಕಾಟದಲ್ಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment