newsfirstkannada.com

ಮೈಸೂರು-ಬೆಂಗಳೂರು ಹೈವೇನಲ್ಲಿ KSRTC ಬಸ್​​​ ದಿಢೀರ್​ ಯೂಟರ್ನ್​​​; ಜನರ ಜೀವದ ಚೆಲ್ಲಾಟ

Share :

31-07-2023

    ಟೋಲ್ ಉಳಿಸಲು ಬಸ್ ಚಾಲಕ ಮಾಡಿದ ಬಿಗ್ ಐಡಿಯಾ

    ಸಾಮಾಜಿಕ ಜಾಲಾತಣದಲ್ಲಿ ಈ ವಿಡಿಯೋ ಫುಲ್​ ವೈರಲ್

    ಬಸ್ ಯು ಟರ್ನ್​ ಮಾಡಿದ್ದಕ್ಕೆ, ವಾಹನ ಸವಾರರಿಗೆ ಆತಂಕ

ರಾಮನಗರ: ಬಿಡದಿ ಸಮೀಪದಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್​ನಿಂದ ಬಚಾವ್​ ಆಗಲು ಡ್ರೈವರ್​ KSRTC ಬಸ್​ ಅನ್ನು ನಡು ರಸ್ತೆಯಲ್ಲಿ ಯೂಟರ್ನ್ ಮಾಡಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಸದ್ಯ ಈ ವಿಡಿಯೋವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವಿಟರ್​ ಅಕೌಂಟ್​ಗೆ ಟ್ಯಾಗ್ ಮಾಡಲಾಗಿದೆ. ವಿಡಿಯೋದಲ್ಲಿ KA- 42, F- 2233 ನಂಬರಿನ KSRTC ಬಸ್ ಬಿಡದಿ ಸಮೀಪದ  ಬೆಂಗಳೂರು-ಮೈಸೂರು ಹೆದ್ದಾರಿಯ ನಡು ರಸ್ತೆಯಲ್ಲಿ ಯೂಟರ್ನ್​ ಮಾಡಿಕೊಳ್ಳಲಾಗಿದೆ.

ಟೋಲ್​ ಉಳಿಸುವ ಬರದಲ್ಲಿ ಚಾಲಕ ಹಿಂದೆ ಬರುತ್ತಿದ್ದ ವಾಹನ ಸವಾರರನ್ನು ಗಮನಕ್ಕೆ ತೆಗೆದುಕೊಳ್ಳದೆ ಇದ್ದಕ್ಕಿದ್ದಾಗೆ ಬಸ್​ ಅನ್ನು ಯೂಟರ್ನ್​​​ ಮಾಡಿದ್ದಾರೆ. ಇದರಿಂದ ಹಿಂದೆ ಬರುತ್ತಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದರು. ಈ ವಿಡಿಯೋವನ್ನು ಸವಾರರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರು-ಬೆಂಗಳೂರು ಹೈವೇನಲ್ಲಿ KSRTC ಬಸ್​​​ ದಿಢೀರ್​ ಯೂಟರ್ನ್​​​; ಜನರ ಜೀವದ ಚೆಲ್ಲಾಟ

https://newsfirstlive.com/wp-content/uploads/2023/07/KSRTC_BUS-1.jpg

Load More