newsfirstkannada.com

ಬೆಂಗಳೂರು-ಮೈಸೂರು ಹೈವೇನಲ್ಲಿ ಓಡಾಡೋರು ಓದಲೇಬೇಕಾದ ಸ್ಟೋರಿ; ಇನ್ಮುಂದೆ ಈ ವಾಹನಗಳಿಗೆ ನಿರ್ಬಂಧ

Share :

31-07-2023

    ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ

    ಸಿಎಂ ಸಿದ್ದರಾಮಯ್ಯ ಮಹತ್ವದ ಸೂಚನೆ..!

    ಸೂಚನೆ ಮೇರೆಗೆ ಪ್ರಾಧಿಕಾರ ಹೊಸ ಆದೇಶ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್​​​ಪ್ರೆಸ್​​​​ ಹೈವೇನಲ್ಲಿ ಆ್ಯಕ್ಸಿಡೆಂಟ್​​ ಕೇಸುಗಳು ಹೆಚ್ಚುತ್ತಲೇ ಇವೆ. ಇದುವರೆಗೂ 900ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಈ ಭೀಕರ ಅಪಘಾತಗಳಿಗೆ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನೂರಾರು ಗಾಯಾಳು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಲೇ ಇದ್ದಾರೆ.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರೇ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​ ಹೆದ್ದಾರಿಗೆ ಭೇಟಿ ನೀಡಿ ಹೆಚ್ಚುತ್ತಿರೋ ಅಪಘಾತಗಳಿಗೆ ಕಾರಣವೇನು? ಎಂದು ಪರಿಶೀಲಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ದೂರುಗಳ ಕುರಿತಾಗಿಯೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಅತಿ ವೇಗದ ಚಾಲನೆ ಗುರುತಿಸಿ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಹಾಕಿ ಎಂದು ಸೂಚನೆ ನೀಡಿದ್ದಾರೆ. ಈ ಸಿಎಂ ಸೂಚನೆ ಮೇರೆಗೆ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಪೊಲೀಸ್​ ಇಲಾಖೆ ಹೊಸ ಆದೇಶ ಹೊರಡಿಸಿದೆ.

ನಾಳೆಯಿಂದಲೇ ಹೊಸ ರೂಲ್ಸ್​​ ಜಾರಿ

ಯಾವುದೇ ಕಾರಣಕ್ಕೂ ಇನ್ಮುಂದೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ಹೈವೇನಲ್ಲಿ ಬೈಕ್​​, ಆಟೋ, ಟ್ರ್ಯಾಕ್ಟರ್​​​ ಹೋಗಬಾರದು ಎಂದು ನಿರ್ಬಂಧ ಹೇರಲಾಗಿದೆ. ಅಪಘಾತ ಹೆಚ್ಚಳ ತಡೆಗೆ ಈ ಕ್ರಮ ತೆಗೆದುಕೊಂಡಿದ್ದು, ಯಾರಾದ್ರೂ ನಿಯಮ ಉಲ್ಲಂಘನೆ ಮಾಡಿದ್ರೆ 500 ರೂ. ದಂಡ ಹಾಕಲಾಗುವುದು. 9 ದಿಕ್ಕಿನಲ್ಲೂ ಪೊಲೀಸ್​ ಚೆಕಿಂಗ್​ ಇರಲಿದೆ. ಆಗಸ್ಟ್​​ 1ನೇ ತಾರೀಕು ಅಂದರೆ ನಾಳೆಯಿಂದಲೇ ಈ ಹೊಸ ಆದೇಶ ಜಾರಿಯಾಗಲಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು-ಮೈಸೂರು ಹೈವೇನಲ್ಲಿ ಓಡಾಡೋರು ಓದಲೇಬೇಕಾದ ಸ್ಟೋರಿ; ಇನ್ಮುಂದೆ ಈ ವಾಹನಗಳಿಗೆ ನಿರ್ಬಂಧ

https://newsfirstlive.com/wp-content/uploads/2023/07/Bangalore-Mysore-Highway-1.jpg

Load More