ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಬಂದ ದರೋಡೆಕೋರರು.!
ಹೈವೇಯಲ್ಲಿ ಎರಡು ಗಂಟೆಯಲ್ಲಿ ಎರಡು ಕಡೆ ದರೋಡೆ
ದಂಪತಿಯ ಚಿನ್ನಾಭರಣ ದೋಚಿ ಖದೀಮರು ಎಸ್ಕೇಪ್
ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಈ ಹೆದ್ದಾರಿಯಲ್ಲಿ 2 ಗಂಟೆಯ ಅವಧಿಯಲ್ಲಿ ಎರಡು ಕಡೆ ದರೋಡೆ ನಡೆದಿರುವ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿವೆ.
ಉಡುಪಿ ಮೂಲದ ಶಿವಪ್ರಸಾದ್-ಸುಮಾ ಎನ್ನುವ ದಂಪತಿ ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದರು. ಹೋಟೆಲ್ಗಳಲ್ಲಿ ರೂಮ್ ಸಿಗದ ಕಾರಣ ರಾತ್ರಿ 1 ಗಂಟೆ ವೇಳೆ ಮಂಡ್ಯದ ನಗುವನಹಳ್ಳಿ ಬಳಿಯ ಎಕ್ಸ್ಪ್ರೆಸ್ವೇನಲ್ಲಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಬಂದ ದರೋಡೆಕೋರರು ದಂಪತಿಗೆ ಚಾಕು ತೋರಿಸಿ 30 ಗ್ರಾಂ ಚಿನ್ನದ ಸರ ದೋಚಿ ಎಸ್ಕೇಪ್ ಆಗಿದ್ದಾರೆ.
ಈ ಮೇಲಿನ ಘಟನೆ ನಡೆದು 2 ಗಂಟೆ ಅವಧಿಯಲ್ಲಿ ಮತ್ತೊಂದು ದರೋಡೆ ಹೈವೇಯಲ್ಲಿ ನಡೆದಿದೆ. ಕೋಲಾರ ಮೂಲದ ಡಾ.ರಕ್ಷಿತ್ ರೆಡ್ಡಿ- ಡಾ.ಮಾನಸ ದಂಪತಿ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಗೌರಿಪುರದ ಬಳಿ ಕಾರಿನ ಟೈರ್ ಪಂಕ್ಚರ್ ಆದ ಹಿನ್ನೆಲೆಯಲ್ಲಿ ಟೈರ್ ಅನ್ನು ಬದಲಿಸುತ್ತಿದ್ದರು. ಆಗ ಅಲ್ಲಿಗೆ ಬಂದ ಕಿರಾತಕರು ಚಾಕು ತೋರಿಸಿ 40 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಈ ಸಂಬಂಧ ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್.ಯತೀಶ್ ಭೇಟಿ ನೀಡಿ ಚಿನ್ನಾಭರಣ ಕಳೆದುಕೊಂಡವರಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ