newsfirstkannada.com

ಬೆಂಗಳೂರು- ಮೈಸೂರು ಹೆದ್ದಾರಿಗೂ AI ತಂತ್ರಜ್ಞಾನ; ಸ್ಪೀಡ್ ಲಿಮಿಟ್ ದಾಟಿದ್ರೆ ನಿಮ್ಮ ಮನೆ ಬಾಗಿಲಿಗೆ ದಂಡದ ರಶೀದಿ

Share :

29-07-2023

  ಸ್ಪೀಡ್ ಲಿಮಿಟ್ ದಾಟಿದ ವಾಹನ ಸವಾರರಿಗೆ ದಂಡ ಗ್ಯಾರಂಟಿ

  ಸಿಎಂ ಸಿದ್ದರಾಮಯ್ಯರಿಂದ ಖುದ್ದು ದಶಪಥ ಹೆದ್ದಾರಿ ಪರಿಶೀಲನೆ

  ಮಂಡ್ಯದಲ್ಲಿ ಹೊಸ ತಂತ್ರಜ್ಞಾನದ ಸ್ಪೀಡ್ ಡಿಟೆಕ್ಟರ್ ಕ್ಯಾಮೆರಾ

ಮಂಡ್ಯ: ಬೆಂಗಳೂರು, ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು, ನೂರಾರು ಜನ ಸಾವನ್ನಪ್ಪಿದ ಹಿನ್ನೆಲೆ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. AI ತಂತ್ರಜ್ಞಾನ ಹೊಂದಿರುವ ವಿನೂತನ ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಇವತ್ತು ಖುದ್ದು ದಶಪಥ ಹೆದ್ದಾರಿ ವೀಕ್ಷಣೆ ನಡೆಸುತ್ತಿದ್ದಾರೆ.

ಮಂಡ್ಯದ ಉಮ್ಮಡಹಳ್ಳಿ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನೂತನ ಕ್ಯಾಮೆರಾ ಅಳವಡಿಸಲಾಗುತ್ತಿದೆ. ವೆಹಿಕಲ್ ಸ್ಪೀಡ್ ಡಿಟೆಕ್ಟರ್ ಕ್ಯಾಮೆರಾವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಹೊಸ ತಂತ್ರಜ್ಞಾನದ ಸ್ಪೀಡ್ ಡಿಟೆಕ್ಟರ್ ಕ್ಯಾಮೆರಾ ಉದ್ಘಾಟನೆಯ ಜೊತೆಗೆ ಸಿಎಂ ಹೆದ್ದಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಬಳಿಕ ಶ್ರೀರಂಗಪಟ್ಟಣದ ಗಣಂಗೂರು ಟೋಲ್‌ಗೂ ಭೇಟಿ ನೀಡಲಿದ್ದಾರೆ. ಬಳಿಕ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಅಪಘಾತ ಪ್ರಕರಣಗಳ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ಎಐ ತಂತ್ರಜ್ಞಾನ ಹೊಂದಿರುವ ವಿನೂತನ ಕ್ಯಾಮೆರಾದಲ್ಲಿ ವೇಗದ ಮಿತಿ ಮೀರಿದ್ರೆ ವಾಹನ ಸವಾರರಿಗೆ ದಂಡ ಬೀಳೋದು ಗ್ಯಾರಂಟಿ. ಎಕ್ಸ್‌ಪ್ರೆಸ್‌ ವೇನ ಎಡಬದಿಯ ಟ್ರ್ಯಾಕ್‌ನಲ್ಲಿ 60 ಕಿ.ಮೀ ವೇಗದ ಮಿತಿಯಿದೆ. ಮಧ್ಯದ ಟ್ರ್ಯಾಕ್ ಗೆ 80 ಕಿ.ಮೀ ವೇಗದ ಮಿತಿ ಹಾಕಲಾಗಿದೆ. ಬಲ ಬದಿ ಟ್ರ್ಯಾಕ್‌ಗೆ 100 ಕಿ.ಮೀ ವೇಗದ ಮಿತಿ ಹಾಕಲಾಗಿದೆ. ಈ ವೇಗದ ಮಿತಿ ಮೀರಿದ ವಾಹನಗಳಿಗೆ ದಂಡ ಹಾಕಲಾಗುತ್ತಿದೆ. ಸ್ಪೀಡ್ ಲಿಮಿಟ್ ದಾಟಿದ ವಾಹನ ಸವಾರರ ಮನೆ ಬಾಗಿಲಿಗೆ ದಂಡದ ರಶೀದಿ ಹೋಗಲಿದೆ. ಮುಂದಿನ ದಿನಗಳಲ್ಲಿ ಟೋಲ್‌ಗಳಲ್ಲೂ ದಂಡ ವಸೂಲಿಗೆ ಪ್ಲಾನ್ ಮಾಡಲಾಗುತ್ತಿದೆ. ಅಪಘಾತದ ಸಂದರ್ಭದಲ್ಲಿ ಸಾವು, ನೋವು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಈ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು- ಮೈಸೂರು ಹೆದ್ದಾರಿಗೂ AI ತಂತ್ರಜ್ಞಾನ; ಸ್ಪೀಡ್ ಲಿಮಿಟ್ ದಾಟಿದ್ರೆ ನಿಮ್ಮ ಮನೆ ಬಾಗಿಲಿಗೆ ದಂಡದ ರಶೀದಿ

https://newsfirstlive.com/wp-content/uploads/2023/07/Bangalore-Mysore-Highway.jpg

Load More