newsfirstkannada.com

×

ಬೆಂಗಳೂರು-ಮೈಸೂರು ಹೆದ್ದಾರಿ KSRTC ಅಪಘಾತಕ್ಕೆ ಕಾರಣವೇನು? ಡ್ರೈವರ್ ಅಚ್ಚರಿಯ ಹೇಳಿಕೆ! VIDEO

Share :

Published September 30, 2024 at 10:40pm

Update September 30, 2024 at 10:45pm

    ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ

    ಮೊಬೈಲ್‌ನಲ್ಲಿ ಮಾತಾಡ್ತಾ ಡ್ರೈವರ್ ಬಸ್ ಓಡಿಸಿದ್ದಕ್ಕೆ ಅನಾಹುತ ಆರೋಪ

    ಸರ್ಕಾರಿ ಬಸ್‌ನಲ್ಲಿ 60 ಪ್ರಯಾಣಿಕರಿದ್ರೂ ಡ್ರೈವರ್ ಕೇರ್‌ಲೆಸ್‌ ಮಾಡಿದ್ರಾ?

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರೆಸ್‌ ವೇನಲ್ಲಿ KSRTC ಬಸ್‌ ಅಪಘಾತ ಸಂಭವಿಸಿದೆ. ಎಕ್ಸ್‌ಪ್ರೆಸ್‌ ವೇನಿಂದ ಸರ್ವಿಸ್‌ ರಸ್ತೆಗೆ ಬರ್ತಿದ್ದ ಬಸ್‌ ಪಲ್ಟಿಯಾಗಿದ್ದು ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಅಪಘಾತವಾದ ಬಸ್‌ನಲ್ಲಿ ಪ್ರಯಾಣಿಕರು ಕಿಕ್ಕಿರಿದಿದ್ದರು. ಮೊಬೈಲ್‌ನಲ್ಲಿ ಮಾತಾಡ್ತಾ ಡ್ರೈವರ್ ಬಸ್ ಓಡಿಸಿದ್ದಕ್ಕೆ ಅಪಘಾತ ಸಂಭವಿಸಿದೆ ಅಂತಾ ಬಸ್‌ನಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹೇಳ್ತಿದ್ದಾರೆ. ಆದ್ರೆ ಡ್ರೈವರ್‌ ಮಾತ್ರ ಹೇಳೋ ಕಥೆಯೇ ಬೇರೆ.

ಭೀಕರ ಅಪಘಾತ.. ಕಂಟೈನರ್‌ಗೆ ಕೆಎಸ್‌ಆರ್‌ಟಿಸಿ ಡಿಕ್ಕಿ
50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ.. ಹಲವರು ಗಂಭೀರ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ.. ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳಿಗೆ ಕಂಟ್ರೋಲ್‌ ಅನ್ನೋದೇ ಇರೋದಿಲ್ಲ. ಹೀಗೆ ಕಂಟ್ರೋಲ್‌ ತಪ್ಪಿ ಕೆೆಎಸ್‌ಆರ್‌ಟಿಸಿ ಬಸ್‌ವೊಂದು ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಈ ಅಪಘಾತ ಸಂಭವಿಸಿದ್ದು, ಡಿಕ್ಕಿ ರಭಸಕ್ಕೆ ಬಸ್‌ ಪಲ್ಟಿಯಾಗಿದೆ. ಬಸ್‌ನಲ್ಲಿ 90ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಅದರಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಸಂಖ್ಯೆಯಲ್ಲಿದ್ರು. ತುಮಕೂರಿನಿಂದ ಮಂಡ್ಯ ಕಡೆ ಬರ್ತಿದ್ದ ವೇಳೆ ಎಕ್ಸ್‌ಪ್ರೆಸ್‌ವೇನಿಂದ ಸರ್ವಿಸ್‌ ರಸ್ತೆಗೆ ಟರ್ನ್‌ ಮಾಡೋವಾಗ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಮಂಡ್ಯ ಭೀಕರ ಅಪಘಾತಕ್ಕೆ ಕಾರಣ ಮೊಬೈಲ್‌.. ಶಾಕಿಂಗ್ ವಿಚಾರ ಬಿಚ್ಚಿಟ್ಟ ವಿದ್ಯಾರ್ಥಿ; ಅಸಲಿಗೆ ಆಗಿದ್ದೇನು? 

ಮೊಬೈಲ್ ಬಳಕೆಯೇ ಅಪಘಾತಕ್ಕೆ ಕಾರಣ!
ಬಸ್ ಪಲ್ಟಿಯಾಗೋದಕ್ಕೆ ರಸ್ತೆಯಲ್ಲಿದ್ದ ಗುಂಡಿ ಕಾರಣ ಅಂತಾ ಅನ್ಕೊಂಡಿದ್ವಿ. ಆದ್ರೆ ಡ್ರೈವರ್‌ನ ನಿರ್ಲಕ್ಷ್ಯವೇ ಇದರಲ್ಲಿ ಎದ್ದು ಕಾಣ್ತಿದೆ. ಒಂದು ಕೈಯಲ್ಲಿ ಸ್ಟೇರಿಂಗ್ ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಬಸ್‌ ಓಡಿಸಿದ್ದೆ ಅಪಘಾತಕ್ಕೆ ಕಾರಣ ಅಂತಾ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಇನ್ನು, ಶಕ್ತಿಯೋಜನೆ ಜಾರಿಯಾದಾಗಿನಿಂದ ಬಸ್‌ಗಳ ಸಮಸ್ಯೆ ಆಗ್ತಿದೆ. ಮೊದ್ಲು ಅದನ್ನ ನಿಲ್ಲಿಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ರು ಬಸ್‌ನ ತೆರವುಗೊಳಿಸಿದ್ರು. ಘಟನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದ್ದು, ಅದರಲ್ಲಿ ಗಂಭೀರವಾಗಿ ಗಾಯಗೊಂಡವರನ್ನ ಮಿಮ್ಸ್‌ ಆಸ್ಪತ್ರೆಗೆ ಶಿಫ್ಟ್ ಮಾಡ್ಲಾಗಿದೆ. ಅಪಘಾತದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಅದಲ್ಲದೇ ಆಸ್ಪತ್ರೆಗೂ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಧರ್ಮಸ್ಥಳ ಹೆದ್ದಾರಿಯಲ್ಲಿ ಭೀಕರ ಅಪಘಾತ.. ಚಿಕ್ಕ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು 

ಬಸ್‌ನಲ್ಲಿ ಅಷ್ಟೊಂದು ಪ್ರಯಾಣಿಕರಿದ್ರೂ ಕೂಡ ಕೇರ್‌ಲೆಸ್‌ ಆಗಿ ಮೊಬೈಲ್‌ ಬಳಸಿ ಬಸ್‌ ಓಡಿಸಿದ್ದು ಚಾಲಕನದ್ದೇ ತಪ್ಪು. ಡ್ರೈವರ್ ಮಾಡಿರೋ ತಪ್ಪಿಗೆ ವಿದ್ಯಾರ್ಥಿಗಳು- ಜನರು ಆಸ್ಪತ್ರೆಯಲ್ಲಿ ನರಳುವಂತಾಗಿದೆ. ಆದರೆ ಈ ಅಪಘಾತವಾದ ಬಗ್ಗೆ ಬಸ್ ಚಾಲಕ ಶಶಿ ಅವರು ಬೇರೆಯದೇ ಹೇಳಿಕೆ ನೀಡಿದ್ದಾರೆ. ಬ್ರೇಕ್ ಪ್ರಾಬ್ಲಂನಿಂದ ಆಕ್ಸಿಡೆಂಟ್ ಆಯ್ತು ಮುಂಭಾಗದ ಎಡ ಬದಿ ಟೈರ್ ಫ್ಲಾಟ್ ಕೂಡ ಆಗಿತ್ತು. ಬ್ರೇಕ್ ಲೈನರ್ ಜಾಮರ್ ಆಗಿ ಬಸ್ ಪಲ್ಟಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು-ಮೈಸೂರು ಹೆದ್ದಾರಿ KSRTC ಅಪಘಾತಕ್ಕೆ ಕಾರಣವೇನು? ಡ್ರೈವರ್ ಅಚ್ಚರಿಯ ಹೇಳಿಕೆ! VIDEO

https://newsfirstlive.com/wp-content/uploads/2024/09/MND_BUS.jpg

Load More